ನ್ಯಾಯಾಂಗದ ಮೇಲೆ ಪ್ರತಿವಾದಿಗಳಿಂದಲೇ ಒತ್ತಡ: ಶ್ರೀರಾಮಚಂದ್ರಾಪುರ ಮಠ ಸ್ಪಷ್ಟನೆ

September 11, 2019
10:00 AM

ಬೆಂಗಳೂರು: ಶ್ರೀರಾಮಚಂದ್ರಾಪುರಮಠ ಅಥವಾ ಶ್ರೀಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ತನಿಖೆಯಿಂದ ಹಿಂದೆ ಸರಿದಾಗಲೆಲ್ಲ, ಅವರ ಮೇಲೆ ಶ್ರೀಮಠದ ಪ್ರತಿವಾದಿಗಳು ಒತ್ತಡ ತಂದಿದ್ದಾರೆಯೇ ವಿನಃ ಶ್ರೀಮಠ ಯಾವುದೇ ಒತ್ತಡ ತಂದಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠ ಸ್ಪಷ್ಟಪಡಿಸಿದೆ.

ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಅಥವಾ ಪ್ರಸ್ತುತ ನ್ಯಾಯಮೂರ್ತಿಗಳಾಗಿರುವ ಮೋಹನ ಶಾಂತನಗೌಡರ ಮತ್ತು ಫಣೀಂದ್ರ ವಿರುದ್ಧ ಪ್ರತಿವಾದಿಗಳು ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು; ಫಣೀಂದ್ರ ಅವರ ಮೇಲಂತೂ ಸುಪ್ರೀಂಕೋರ್ಟ್, ರಾಷ್ಟ್ರಪತಿಗಳಿಗೆ ಕೂಡಾ ಪ್ರತಿವಾದಿಗಳು ದೂರು ನೀಡಿದ ನಿದರ್ಶನಗಳು ಕಣ್ಣ ಮುಂದಿವೆ ಎಂದು ಪ್ರಕಟಣೆ ಹೇಳಿದೆ.

ಉಳಿದಂತೆ ಕೆಲ ನ್ಯಾಯಮೂರ್ತಿಗಳು ಶ್ರೀಮಠದ ಶಿಷ್ಯ-ಭಕ್ತರು ಎಂಬ ಕಾರಣಕ್ಕೆ ಹಿಂದೆ ಸರಿದಿದ್ದರು. ಕೆಲವರು ವೈಯಕ್ತಿಕ ಕಾರಣಗಳಿಂದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಎಸ್‍ಪಿಪಿ ಆಗಿದ್ದ ಸಂದರ್ಭದಲ್ಲಿ ಶ್ರೀಮಠದ ವಿರುದ್ಧ ದಾವೆ ತಯಾರಿಸಿ ವಾದಿಸಿದ್ದ ಕಾರಣಕ್ಕಾಗಿ ನ್ಯಾಯಮೂರ್ತಿ ನವಾಜ್ ವಿಚಾರಣೆಯಿಂದ ಹಿಂದೆ ಸರಿದಿರಬಹುದು ಎಂದು ಪ್ರಕಟಣೆ ವಿವರಿಸಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಖ್ಯಾತಿ-ಪ್ರಚಾರವಲ್ಲ, ಸಮಾಜ ಪರಿವರ್ತನೆಯೇ ಚಾತುರ್ಮಾಸ್ಯದ ಗುರಿ
September 27, 2026
10:44 PM
by: ದ ರೂರಲ್ ಮಿರರ್.ಕಾಂ
ಮೇಘಾಲಯದ ಅಡಿಕೆಗೆ ಜಿಐ ಟ್ಯಾಗ್‌ ಪ್ರಕ್ರಿಯೆ..! ಮಲೆನಾಡು ಅಡಿಕೆಗೂ ಏಕೆ ಪ್ರಯತ್ನಿಸಬಾರದು..?
September 27, 2026
8:12 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 27-09-2026 | ಕರ್ನಾಟಕದಲ್ಲಿ ಸದ್ಯ ಒಣಹವೆ ; ಸೆ.28ರಿಂದ ಮತ್ತೆ ಮಳೆ ಸಾಧ್ಯತೆ..!
September 27, 2026
1:53 PM
by: ಸಾಯಿಶೇಖರ್ ಕರಿಕಳ
ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!
September 27, 2026
10:34 AM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror