ಸವಣೂರು: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸವಣೂರು ವಲಯ ,ರಾಜ್ಯ ಪ್ರಶಸ್ತಿ ಪುರಸ್ಕøತ ಸವಣೂರು ಯುವಕ ಮಂಡಲ ಇವುಗಳ ಸಹಯೋಗದಲ್ಲಿ ಹೊಂಬೆಳಕು ನವಜೀವನ ಸದಸ್ಯರಿಗೆ ಪ್ರೇರಣಾ ಶಿಬಿರ ಪುಣ್ಚಪ್ಪಾಡಿ ವಿನಾಯಕನಗರದ ಗೌರಿಸದನದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಮಾತನಾಡಿ, ಮದ್ಯಮುಕ್ತರನ್ನು ಒಂದೆಡೆ ಸೇರಿಸಿಕೊಂಡು ಅವರನ್ನು ಸಮಾಜದ ಮುನ್ನೆಲೆಗೆ ಪರಿಚಯಿಸಿ ಅವರನ್ನು ಸಮಾಜಮುಖಿಯನ್ನಾಗಿಸುವ ಕಾರ್ಯಅಭಿನಂದನೀಯ.ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿಯಾಗಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಗುರಿಯಡ್ಕ ಮಾತನಾಡಿ,ದುಶ್ಚಟ ಮುಕ್ತ ಸಮಾಜ ನಿರ್ಮಾಣವಾದಾಗ ಅಭಿವೃದ್ದಿಯೊಂದಿಗೆ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ಶಿಬಿರಗಳು ಪ್ರೇರಕವಾಗುತ್ತದೆ.ಮದ್ಯಪಾನವೆಂಬ ತಪ್ಪನ್ನು ತಿದ್ದಿಕೊಂಡು ಜೀವಿಸಿದಾಗ ಕುಟುಂಬ, ಸಮಾಜ ನೆಮ್ಮದಿಯನ್ನು ಕಾಣುತ್ತ್ತದೆ ಎಂದರು.
ವೇದಿಕೆಯಲ್ಲಿ ಪುಣ್ಚಪ್ಪಾಡಿ ಗೌರಿ ಗಣೇಶ ಸೇವಾ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ಜೈನ್,ತಾ.ಪಂ.ಸದಸ್ಯೆ ರಾಜೇಶ್ವರಿ ಕನ್ಯಾಮಂಗಲ, ನವಜೀವನ ಸಮಿತಿಯ ಪೋಷಕ ಹೊನ್ನಪ್ಪ ಗೌಡ ಕೂರೇಲು ,ಸವಣೂರು ಯುವಕ ಮಂಡಲದ ಅಧ್ಯಕ್ಷ ತಾರಾನಾಥ ಪಿ.ಸವಣೂರು ಉಪಸ್ಥಿತರಿದ್ದರು.
ಅರವಿಂದ ಪುಣ್ಚತ್ತಾರು,ಹೇಮಲತಾ ಸೋಂಪಾಡಿ,ಮೀನಾಕ್ಷಿ ಕುಮಾರಮಂಗಲ,ಪ್ರವೀಣ್ ಚಂದ್ರ ರೈ ಕುಮೇರು,ಲಕ್ಷ್ಮಣ ಗೌಡ ಕೂರೇಲು,ಸುರೇಶ್,ಬಾಬು,ಚಿತ್ರಾ ಭಕ್ತಕೋಡಿ,ವಿಜಯ ಆರೇಲ್ತಡಿ,ವೆಂಕಪ್ಪ ಗೌಡ ಕುಮಾರಮಂಗಲ,ರಾಧಾಕೃಷ್ಣ ರೈ ಸರ್ವೆ,ಮನೋರಮ ಪುಣ್ಚಪ್ಪಾಡಿ,ಲೋಕೇಶ್ ಕನ್ಯಾಮಂಗಲ ,ವೇಣುಗೋಪಾಲ ಕಳುವಾಜೆ ಅತಿಥಿಗಳನ್ನು ಗೌರವಿಸಿದರು.
ಜನಜಾಗೃತಿ ವೇದಿಕೆಯ ಸವಣೂರು ವಲಯಾಧ್ಯಕ್ಷ ಮಹೇಶ್ ಕೆ.ಸವಣೂರು ಸ್ವಾಗತಿಸಿ, ಯೋಜನೆಯ ವಲಯ ಮೇಲ್ವಿಚಾರಕಿ ಅಶ್ವಿನಿ ವಂದಿಸಿದರು. ಲೋಕನಾಥ ವಜ್ರಗಿರಿ ಕಾರ್ಯಕ್ರಮ ನಿರೂಪಿಸಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…