ಪುತ್ತೂರಿನಲ್ಲಿ ಜೂ.15, 16 ಹಲಸು ಮೇಳ : ಹಲಸು ಚಾಟ್ , ಹಲಸು ಕೇಸರಿಬಾತ್ ಈ ಬಾರಿಯ ಸ್ಪೆಶಲ್..!

June 13, 2019
9:00 PM

ಪುತ್ತೂರು: ಹಲಸು ಸಾರ ಮೇಳ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜೂ.15 ಹಾಗೂ 16 ರಂದು ನಡೆಯಲಿದೆ. ಈ ಮೇಳಕ್ಕೆ 40 ಕ್ಕೂ ಅಧಿಕ ಮಳಿಗೆಗಳು ಬರಲಿದ್ದು ಅದರಲ್ಲಿ 30 ಕ್ಕೂ ಅಧಿಕ ಹಲಸಿನ ಉತ್ಪನ್ನಗಳದ್ದೇ ಕಂಡುಬರಲಿದೆ. ಈ ಬಾರಿಯ ಮೇಳದಲ್ಲಿ ಹಲಸು ಹಪ್ಪಳದ ಚಾಟ್ ಹಾಗೂ ಹಲಸು ಕೇಸರಿಬಾತ್ ವಿಶೇಷವಾಗಿ ಕಾಣಲಿದೆ.

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹಲಸು ಸ್ನೇಹ ಸಂಗಮ ಹಾಗೂ ಐಐಎಚ್‍ಆರ್ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಪುತ್ತೂರು ಜೇಸಿಐ ಮನತ್ತು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಹಲಸು ಸಾರ ಮೇಳ ನಡೆಯಲಿದೆ. ಕಳೆದ ಬಾರಿ ಹಲಸು ಮೇಳ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ಕೂಡಾ ಅದೇ ಮಾದರಿಯಲ್ಲಿ ಮೇಳ ನಡೆಯಲಿದೆ. ಈ ಬಾರಿ 40 ಕ್ಕೂ ಅಧಿಕ ಮಳಿಗೆ ಬರಲಿದ್ದು ಅದರಲ್ಲಿ ಹಲಸಿನ ಮಳಿಗೆಗಳೇ 30 ಕ್ಕಿಂತ ಹೆಚ್ಚು ಬರಲಿದೆ. ಕಲರ್ ಬಳಕೆ ಕಡಿಮೆ ಇರುವ ವಸ್ತುಗಳನ್ನೇ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮೇಳದಲ್ಲಿ ವಿಶೇಷವಾಗಿ ಹಲಸಿನ ಕಾಯಿ ಹಾಗೂ ಹಣ್ಣಿನ ದೋಸೆ, ಹಲಸಿನ ಬೀಜದ ಹೊಳಿಗೆ, ಹಲಸಿನ ಹಣ್ಣಿನ ಹಲ್ವ, ಹಲಸಿನ ಹಪ್ಪಳ ಚಾಟ್, ಗುಜ್ಜೆ ಮಂಚೂರಿ, ಕಬಾಬ್, ಹಲಸು ರೋಸ್ಟ್ , ಪಲಾವ್, ಪೋಡಿ, ಹಲಸಿನ ಬೀಜದ ಅಂಬೊಡೆ, ಹಲಸಿನಕಾಯಿ ಅಂಬೊಡೆ, ಹಲಸಿನಬೀಜದ ಜಾಮೂನ್ , ಹಲಸಿನಬೀಜದ ಬಿಸ್ಕೆಟ್ , ಇನ್ಟಂಟ್ ರಸಂ ಪೌಡರ್, ಹಲಸಿನಹಣ್ಣಿನ ಕೇಸರಿಬಾತ್ , ಕಲರ್ ರಹಿತ ಹಲಸಿನಹಪ್ಪಳ, ತೆಂಗಿನ ಎಣ್ಣೆಯಲ್ಲಿ ಕರಿದ ಹಲಸಿನ ಚಿಪ್ಸ್,  ಹಲಸಿನ ಬೀಜದ ಬಿಸ್ಕೆಟ್ , ಉಪ್ಪುಸೊಳೆ ವಡೆ ಹಲಸಿನ ಐಸ್ ಕ್ರೀಂ , ಕ್ಯಾಂಡಿ, ಹಲಸಿನ ಬೀಜದ ಪತ್ರೊಡೆ, ಪಾಯಸ, ಗಟ್ಟಿ, ಕಡುಬು, ಹಲಸಿನ ಬೀಜದ ಬರ್ಫಿ, ಹಲಸಿನ ಹಲ್ವಾ ಮೇಳದಲ್ಲಿ ಸಿಗಲಿದೆ. ಇದರ ಜೊತೆಗೆ ಹಲಸು ಬಗ್ಗೆ ಮಾತುಕತೆ ,  ಗೋಷ್ಟಿಗಳು ನಡೆಯಲಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Gen Z ಮತದಾರರತ್ತ ಬಿಜೆಪಿ ಕಣ್ಣು- 18-25 ವಯೋಮಾನದ ಯುವಕರಿಗಾಗಿ ‘ತರುಣ ಮೋರ್ಚಾ’ ರಚನೆಗೆ ಚಿಂತನೆ
June 17, 2026
8:21 PM
by: ದ ರೂರಲ್ ಮಿರರ್.ಕಾಂ
ವಿಯೆಟ್ನಾಂನಲ್ಲಿ ಅಡಿಕೆ ಬೆಲೆ ಕುಸಿತ – ಚೀನಾದ ಬೇಡಿಕೆ ಇಳಿಕೆಯಿಂದ ರೈತರಿಗೆ ಸಂಕಷ್ಟ! – ಭಾರತದ ಅಡಿಕೆ ಮಾರುಕಟ್ಟೆಗೆ ಏನು ಎಚ್ಚರಿಕೆ..?
June 17, 2026
7:50 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 17-06-2026 | ಜೂನ್ 21 ರವರೆಗೆ ಕರಾವಳಿಯಲ್ಲಿ ಅಲ್ಪ ಮಳೆ, ಎಲ್ ನಿನೋ ಹಿನ್ನೆಲೆ ರೈತರಿಗೆ ನೀರು ಸಂಗ್ರಹದ ಸಲಹೆ
June 17, 2026
11:49 AM
by: ಸಾಯಿಶೇಖರ್ ಕರಿಕಳ
ಎಲ್ ನಿನೋ ಪರಿಣಾಮ – 10 ರಾಜ್ಯಗಳಲ್ಲಿ ಜಾಗೃತಿ ಅಭಿಯಾನ
June 17, 2026
11:39 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror