ದೇಹ–ಮನಸ್ಸು–ಆತ್ಮದ ಸಮತೋಲನವೇ ನಿಜವಾದ ಆರೋಗ್ಯ: ಆಯುರ್ವೇದದ ಪರಮ ಗುರಿ ಆತ್ಮಜ್ಞಾನ – ರಾಘವೇಶ್ವರ ಶ್ರೀ

August 5, 2026
8:52 PM
ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ ಹೇಳಿದರು. ಆಯುರ್ವೇದದ ಪರಮ ಗುರಿ ಆತ್ಮಜ್ಞಾನ ಸಾಧನೆಯೇ ಹೊರತು ಕೇವಲ ರೋಗ ನಿವಾರಣೆಯಲ್ಲ ಎಂದು ತಿಳಿಸಿದರು.

ಆರೋಗ್ಯವೆಂದರೆ ಕೇವಲ ರೋಗವಿಲ್ಲದ ಸ್ಥಿತಿಯಲ್ಲ. ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನ ಸಾಧಿಸಿದಾಗಲೇ ನಿಜವಾದ ಆರೋಗ್ಯ ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಧರ್ಮಸಭೆಯಲ್ಲಿ ಮಂಗಳವಾರ ‘ಅನ್ನಂ ಬ್ರಹ್ಮ’ ಪ್ರವಚನ ಮಾಲಿಕೆಯಲ್ಲಿ ಮಾತನಾಡಿದ ಶ್ರೀಗಳು, ದೇಹದಲ್ಲಿ ಸಪ್ತಧಾತುಗಳಿದ್ದು, ಅವು ಪರಸ್ಪರ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ಸ್ಥಿರವಾಗಿರುತ್ತದೆ. ಧಾತುಗಳಲ್ಲಿ ವೈಷಮ್ಯ ಉಂಟಾದಾಗಲೇ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ. ಆಯುರ್ವೇದದ ಮುಖ್ಯ ಉದ್ದೇಶವೇ ಧಾತುಗಳ ಸಾಮ್ಯವನ್ನು ಕಾಪಾಡುವುದು ಎಂದು ತಿಳಿಸಿದರು.

ಆಯುರ್ವೇದದ ಪ್ರಕಾರ ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯವಲ್ಲ; ವಾತ, ಪಿತ್ತ ಮತ್ತು ಕಫ ಎಂಬ ತ್ರಿದೋಷಗಳು ಸಮತೋಲನದಿಂದ ಕಾರ್ಯನಿರ್ವಹಿಸುವ ಸ್ಥಿತಿ. ಈ ಸಮತೋಲನ ಭಂಗವಾದಾಗ ರೋಗಗಳು ಕಾಣಿಸಿಕೊಳ್ಳುತ್ತವೆ ಎಂದು ವಿವರಿಸಿದರು.

ಪೂರ್ಣ ಆರೋಗ್ಯದಿಂದಲೇ ಆತ್ಮದರ್ಶನ :  ಮಹಾನಾರಾಯಣೋಪನಿಷತ್ತು ಹಾಗೂ ಕಠೋಪನಿಷತ್ತಿನ ಉಲ್ಲೇಖ ನೀಡಿ, ಧಾತುಗಳ ಸಮತೋಲನ ಸಾಧಿಸಿದಾಗ ಹೃದಯಗುಹೆಯಲ್ಲಿ ನೆಲೆಸಿರುವ ಆತ್ಮವನ್ನು ಅನುಭವಿಸಬಹುದು ಎಂದು ತಿಳಿಸಿದರು. ಆಯುರ್ವೇದ ಮತ್ತು ಉಪನಿಷತ್ತುಗಳೆರಡೂ ಆರೋಗ್ಯದ ಪರಮ ಗುರಿಯಾಗಿ ಆತ್ಮಸಾಕ್ಷಾತ್ಕಾರವನ್ನೇ ಪ್ರತಿಪಾದಿಸುತ್ತವೆ ಎಂದು ಹೇಳಿದರು.

ಮನೋವೇಗಗಳ ನಿಯಂತ್ರಣ ಅಗತ್ಯ :  ವಾಂತಿ, ಹಸಿವು, ಬಾಯಾರಿಕೆ ಮೊದಲಾದ ದೈಹಿಕ ವೇಗಗಳನ್ನು ತಡೆಯಬಾರದು. ಆದರೆ ಲೋಭ, ದ್ವೇಷ, ಈರ್ಷೆ, ಕೋಪದಂತಹ ಮನೋವೇಗಗಳನ್ನು ನಿಯಂತ್ರಣದಲ್ಲಿ ಇಡಬೇಕು. ಅಗತ್ಯವಿಲ್ಲದೆ ಮಾತನಾಡುವುದು, ಸುಳ್ಳು ಹೇಳುವುದು ಹಾಗೂ ಇತರರಿಗೆ ನೋವುಂಟು ಮಾಡುವ ಮಾತುಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಇಂದ್ರಿಯ ಸಂಯಮವೇ ಬ್ರಹ್ಮಚರ್ಯ :  ಬ್ರಹ್ಮಚರ್ಯದ ಕುರಿತು ಮಾತನಾಡಿದ ಶ್ರೀಗಳು, ಧರ್ಮಶಾಸ್ತ್ರ, ಯೋಗಶಾಸ್ತ್ರ ಮತ್ತು ಆಯುರ್ವೇದದಲ್ಲಿ ವಿಭಿನ್ನ ವ್ಯಾಖ್ಯಾನಗಳಿದ್ದರೂ, ಆಯುರ್ವೇದದ ಪ್ರಕಾರ ಇಂದ್ರಿಯ ಸಂಯಮವೇ ಬ್ರಹ್ಮಚರ್ಯ ಎಂದು ಹೇಳಿದರು.

ಆಹಾರ, ನಿದ್ರೆ, ಬ್ರಹ್ಮಚರ್ಯ ಮತ್ತು ಸದಾಚಾರದ ಮೂಲಕ ಧಾತುಗಳ ಸಮತೋಲನವನ್ನು ಕಾಪಾಡಿಕೊಂಡಾಗ ಮಾತ್ರ ಸಂಪೂರ್ಣ ಆರೋಗ್ಯ ಹಾಗೂ ಆತ್ಮಜ್ಞಾನದ ಮಾರ್ಗ ಸುಗಮವಾಗುತ್ತದೆ ಎಂದು ತಿಳಿಸಿದರು.

Jagadguru Sri Raghaveshwara Bharathi Mahaswamiji said that true health is not merely the absence of disease but the harmony of body, mind, and soul. He explained that Ayurveda ultimately aims at self-realisation through balance of the body’s dhatus and purity of mind.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?
September 13, 2026
12:16 PM
by: ಸಾಯಿಶೇಖರ್ ಕರಿಕಳ
ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು
September 13, 2026
8:13 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ
ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ
September 12, 2026
7:30 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror