ಪುತ್ತೂರು: ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಿಗುವ ಅನುಭವಗಳು ಮುಂದೆ ಔದ್ಯೋಗಿಕ ಬೆಳವಣಿಗೆಯಲ್ಲಿ ಸಹಕಾರಿಯಾಗುತ್ತವೆ. ಬರೀ ಪುಸ್ತಕದ ವಿಚಾರಗಳನ್ನಷ್ಟೇ ಅಲ್ಲದೆ, ಇಂತಹ ಸ್ಪರ್ಧೆಗಳಿಂದ ಸಿಗುವ ಅನುಭವಗಳು ಜೀವನದ ಬೆಳವಣೆಗೆಯನ್ನು ಉನ್ನತ ಸ್ಥರಕ್ಕೆ ಏರಿಸುತ್ತದೆ ಎಂದು ಮಂಗಳೂರಿನ ಎಜೆ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ ಡಾ. ನಾಗೇಶ್ ಎಚ್. ಆರ್. ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಗಣಕಶಾಸ್ತ್ರ ವಿಭಾಗ ಹಾಗೂ ಐಟಿಕ್ಲಬ್ ಆಶ್ರಯದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೆ ‘ಟೆಕ್ನೋತರಂಗ್-2020’ರ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಮನುಷ್ಯ ಮತ್ತು ಮನುಷ್ಯತ್ವದ ನಡುವೆ ಇರುವ ವ್ಯತ್ಯಾಸವನ್ನು ಇಂದಿನ ವಿದ್ಯಾರ್ಥಿಗಳು ಅರಿತು ನಡೆಯಬೇಕು. ಇಂದಿನ ಈ ಆಧುನಿಕ ತಂತ್ರಜ್ಞಾನಗಳೊಂದಿಗೆ ಜೀವನ ಮೌಲ್ಯಗಳು ಬಹುಮುಖ್ಯ. ತಂತ್ರಜ್ಞಾನ ಬೆರಳತುದಿಯಲ್ಲಿದ್ದರೂ ಅದನ್ನು ಸಕಾರಾತ್ಮಕವಾಗಿ ಉಪಯೋಗಿಸುವ ಬುದ್ಧಿಮತ್ತೆ ನಮ್ಮಲ್ಲಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಮಾತನಾಡಿ, ಕಂಪ್ಯೂಟರ್ ವಿಜ್ಞಾನಗಳಲ್ಲಿ ಬೆಳವಣಿಗೆಯ ಜೊತೆ, ದೇಶದ ಉನ್ನತಿಯಲ್ಲೂ ನಾವುಗಳು ಗಮನಹರಿಸಬೇಕು. ಹೇಗೆ ಈ ತಂತ್ರಜ್ಞಾನವನ್ನು ದೇಶದ ಅಭಿವೃದ್ಧಿಯಲ್ಲಿ ಉಪಯೋಗಿಸಬೇಕು ಎಂಬ ಚಿಂತನೆಯನ್ನು ಯುವ ಜನತೆ ಮಾಡಬೇಕಾಗಿದೆ. ನಾವು ಹುಟ್ಟಿ ಬೆಳೆದ ಭೂಮಿಗೆ ಇದರಿಂದಾಗಿ ಏನನ್ನಾದರೂ ಕೊಟ್ಟು ಹೋಗುವ ಸವಾಲುಗಳು ನಮ್ಮ ಮುಂದಿವೆ ಎಂಬುದಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. ವೇದಿಕೆಯಲ್ಲಿ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್, ಐಟಿ ಕ್ಲಬ್ ಸಂಯೋಜಕ ಗುರುಕಿರಣ್, ಸುಚಿತ್ರಾ, ಐಟಿಕ್ಲಬ್ ವಿದ್ಯಾರ್ಥಿ ಅಧ್ಯಕ್ಷ ಮನೋಜ್ ಉಪಸ್ಥಿತರಿದ್ದರು.
ಬಹುಮಾನ: 2020 ನೇ ಸಾಲಿನ ಟೆಕ್ನೋತರಂಗ್ ಸಮಗ್ರ ಪ್ರಶಸ್ತಿಗಳಲ್ಲಿ ಪ್ರಥಮ ಸ್ಥಾನವನ್ನು ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ ಹಾಗೂ ದ್ವಿತೀಯ ಸ್ಥಾನವನ್ನು ಎಸ್‍ಡಿಎಮ್ ಕಾಲೇಜ್ ಆಫ್ ಬ್ಯುಸಿನೆಸ್ ಮಾನೇಜ್ ಮೆಂಟ್ ಮಂಗಳೂರು ಪಡೆಯಿತು.
‘ಡಿಬೆಟ್’ನಲ್ಲಿ ಪ್ರಥಮ- ಎಸ್‍ಡಿಎಮ್ ಕಾಲೇಜು ಮಂಗಳೂರು, ದ್ವಿತೀಯ- ಆಳ್ವಾಸ್ ಕಾಲೇಜ್ ಮೂಡಬಿದಿರೆ, ‘ಪ್ರೊಡಕ್ಟ್ ಲಾಂಚ್’ನಲ್ಲಿ ಪ್ರಥಮ-ಸೈಂಟ್ ಅಲೋಷಿಯಸ್ ಕಾಲೇಜ್ ಮಂಗಳೂರು, ದ್ವಿತೀಯ- ಆಳ್ವಾಸ್ ಕಾಲೇಜ್ ಮೂಡಬಿದ್ರೆ, ‘ವೆಬ್‍ಡಿಸೈನ್’ ಸ್ಪರ್ದೆಯಲ್ಲಿ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ ಪ್ರಥಮ, ಶ್ರೀದೇವಿ ಕಾಲೇಜು ಮಂಗಳೂರು ದ್ವಿತೀಯ, ‘ಕೋಡಿಂಗ್’ನಲ್ಲಿ ಎಸ್‍ಡಿಎಮ್ ಕಾಲೇಜು ಮಂಗಳೂರು ಪ್ರಥಮ, ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ ದ್ವಿತೀಯ, ‘ಐಟಿ ಮ್ಯಾನೇಜರ್’ ಸ್ಪರ್ದೆಯಲ್ಲಿ ಆಳ್ವಾಸ್ ಕಾಲೇಜ್ ಮೂಡಬಿದ್ರೆ ಪ್ರಥಮ, ಎಸ್‍ಡಿಎಮ್ ಕಾಲೇಜು ಮಂಗಳೂರು ದ್ವಿತೀಯ, ’ಐಒಟಿ’ಯಲ್ಲಿ ಭಂಡಾರ್‍ಕಾರ್ಸ್ ಆರ್ಟ್ಸ್ ಎಂಡ್ ಸೈನ್ಸ್ ಕಾಲೇಜ್ ಕುಂದಾಪುರ ಪ್ರಥಮ, ಸೈಂಟ್ ಮೇರೀಸ್ ಕಾಲೇಜು ಶಿರ್ವ ದ್ವಿತೀಯ, ‘ಐಟಿಕ್ವಿಝ್’ ಸ್ಪರ್ದೆಯಲ್ಲಿ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ ಪ್ರಥಮ, ಕಣಚ್ಚೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆಂಡ್ ಸೈನ್ಸ್ ದೇರಳಕಟ್ಟೆ ದ್ವಿತೀಯ, ‘ಗೇಮಿಂಗ್’ನಲ್ಲಿ ಸೈಂಟ್ ಅಲೋಷಿಯಸ್ ಕಾಲೇಜ್ ಮಂಗಳೂರು ಪ್ರಥಮ, ಸೈಂಟ್ ಫಿಲೋಮಿನಾ ಕಾಲೇಜ್ ಪುತ್ತೂರು ದ್ವಿತೀಯ ಸ್ಥಾನಗಳನ್ನು ಪಡೆದಿರುತ್ತಾರೆ.
ಭಾಗವಹಿಸಿದ ಕಾಲೇಜುಗಳು: 1.ಎಸ್‍ಡಿಎಮ್ ಕಾಲೇಜ್‍ಆಫ್ ಬ್ಯುಸಿನೆಸ್ ಮಾನೇಜ್ ಮೆಂಟ್ ಮಂಗಳೂರು, 2.ಎಸ್‍ಡಿಎಮ್ ಕಾಲೇಜ್ ಉಜಿರೆ, 3.ಸೈಂಟ್ ಅಲೋಷಿಯಸ್ ಕಾಲೇಜ್ ಮಂಗಳೂರು, 4.ಆಳ್ವಾಸ್ ಕಾಲೇಜ್ ಮೂಡಬಿದ್ರೆ, 5.ಭಂಡಾರ್‍ಕಾರ್ಸ್ ಆರ್ಟ್ಸ್ಎಂಡ್ ಸೈನ್ಸ್ ಕಾಲೇಜ್ ಕುಂದಾಪುರ, 6.ಶ್ರೀ ಭಾರತೀಕಾಲೇಜು ಮಂಗಳೂರು, 7.ಸೈಂಟ್ ಫಿಲೋಮಿನಾ ಕಾಲೇಜ್ ಪುತ್ತೂರು, 8.ಸರಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು, 9. ಸರಕಾರಿ ಪ್ರಥಮದರ್ಜೆ ಕಾಲೇಜು, ಬಲ್ಮಠ, ಮಂಗಳೂರು, 10.ಸೈಂಟ್ ಮೇರೀಸ್ ಕಾಲೇಜು ಶಿರ್ವ, 11.ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ, 12.ಕಾರ್ಮೆಲ್ ಕಾಲೇಜು ಮೊಡಂಕಾಪು, 13.ಎಫ್‍ಎಮ್‍ಕೆಎಮ್‍ಸಿಸಿ ಮಡಿಕೇರಿ, 14. ಸರಕಾರಿ ಪ್ರಥಮ ದರ್ಜೆ ಕಾಲೇಜು, ಉಪ್ಪಿನಂಗಡಿ, 15. ಪೂರ್ಣ ಪ್ರಜ್ನ ಕಾಲೇಜು ಉಡುಪಿ, 16.ಕಣಚ್ಚೂರು ಇನ್ಸ್ಟಿಟ್ಯೂಟ್‍ಆಫ್ ಮ್ಯಾನೇಜ್‍ಮೆಂಟ್ ಆಂಡ್ ಸೈನ್ಸ್ ದೇರಳಕಟ್ಟೆ, 17.ಸೈಂಟ್ ಆಗ್ನೇಸ್ ಕಾಲೇಜ್(ಅಟನೋಮಸ್) ಮಂಗಳೂರು 19.ಶ್ರೀದೇವಿ ಕಾಲೇಜು ಮಂಗಳೂರು, 20.ಗೋವಿಂದದಾಸ ಕಾಲೇಜು ಸುರತ್ಕಲ್, 21.ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ, 22.ವಿಜಯಾ ಕಾಲೇಜು ಮೂಲ್ಕಿ, 23. ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ.ಡಿಕೆ.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…