ಸುಬ್ರಹ್ಮಣ್ಯ: ಕೆರೆ,ಬಾವಿ,ಹೊಳೆಯಲ್ಲಿ ನೀರಿಲ್ಲ. ಮಳೆ ಬಂದರೂ ನೀರಿನ ಸೆಲೆ ಕಾಣುತ್ತಿಲ್ಲ. ಪರಿಣಾಮವಾಗಿ ತೋಟಗಳು ಒಣಗುತ್ತಿವೆ. ಕೊಳವೆಬಾವಿಯಲ್ಲಿ ನೀರಿದ್ದರೂ ಕರೆಂಟ್ ಇಲ್ಲ. ಹೀಗಾಗಿ ಈಗ ಗ್ರಾಮೀಣ ಭಾಗದಲ್ಲೂ ಸಮಸ್ಯೆ ಹೆಚ್ಚಾಗಿದೆ.
ಸುಮಾರು 8 ತಿಂಗಳ ಹಿಂದೆ ಭಾರೀ ಮಳೆಯ ಕಾರಣದಿಂದ ಅಡಿಕೆ ಕೊಳೆರೋಗದ ಸುದ್ದಿಯಾದರೆ ಈಗ ಅಡಿಕೆ ಮರಕ್ಕೆ ನೀರಿಲ್ಲದೆ ಒಣಗುವ ಸುದ್ದಿ. ಕಳೆದ ಒಂದು ತಿಂಗಳಿನಿಂದ ನೀರಿನ ಕೊರತೆ ಉಂಟಾಗಿ ಕೃಷಿ ಭೂಮಿ ಒಣಗಿದೆ. ಅದರ ಜೊತೆಗೆ ಕುಡಿಯಲೂ ನೀರಿಲ್ಲ. ಇದ್ದ ಅಲ್ಪ ಸ್ವಲ್ಪ ಫಸಲುಗಳು ಬಿಸಿಲಿನ ಝಳಕ್ಕೆ ಸಿಲುಕಿ ನಾಶವಾಗುತ್ತದೆ. ಹಿಂದೆಲ್ಲಾ ಗ್ರಾಮೀಣ ಭಾಗದಲ್ಲಿ ಅಂದರೆ ಮಲೆನಾಡು ಭಾಗದಲ್ಲಿ ಇಂತಹ ಸಮಸ್ಯೆ ಇರಲಿಲ್ಲ. ಆದರೆ ಇತ್ತೀಚೆಗೆ ಕಾಡಂಚಿನ ಪ್ರದೇಶದಲ್ಲೂ ಬರದ ಸ್ಥಿತಿ ಎದುರಾಗುತ್ತಿದೆ. ಈಗೀಗ ವಿದ್ಯುತ್ ಸಮಸ್ಯೆ ಕೂಡಾ ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
“ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದ ನೀರಿನ ಆಸರೆಯಿದ್ದರೂ ಅದನ್ನು ಸಮರ್ಪಕವಾಗಿ ಬಳಸುವಲ್ಲಿ ಸಮಸ್ಯೆಯಾಗುತ್ತಿದೆ.ನಿತ್ಯ ವಿದ್ಯುತ್ ಕಣ್ಣುಮುಚ್ಚಾಲೆಯಿಂದಾಗಿ ನೀರಿನ ಸಮಸ್ಯೆ ಇಲ್ಲದ ಕಡೆಯೂ ಸಮಸ್ಯೆ ಎದರುರಾಗಿದೆ. ಸಮರ್ಪಕ ವಿದ್ಯುತ್ ವ್ಯವಸ್ಥೆ ಇದ್ದರೆ ನೀರಿನ ಪೂರೈಕೆ ಯಾವುದೇ ಸಮಸ್ಯೆ ಎದುರಾಗದು” ಎಂದು “ಸುಳ್ಯಸುದ್ದಿ.ಕಾಂ” ನೊಂದಿಗೆ ಕೃಷಿಕ ಸುರೇಶ್ಚಂದ್ರ ಹೇಳಿದರು.
“ಇರುವ ವಿದ್ಯುತ್ ಸರಿಯಾಗಿ ನೀಡಿದರೆ ಸಮಸ್ಯೆ ಇಲ್ಲ. ಹಗಲು 4 ಗಂಟೆ ಪಂಪ್‍ಗೆ ವಿದ್ಯುತ್ ಸಿಕ್ಕಿದರೆ ರಾತ್ರಿ ವೇಳೆ 3 ಗಂಟೆ ಅಂದರೂ ಅಷ್ಟು ಸಮಯ ಲಭ್ಯವಾಗುತ್ತಿಲ್ಲ. ಹೀಗಾಗಿ ಮತ್ತಷ್ಟು ಸಮಸ್ಯೆ” ಎಂದು “ಸುಳ್ಯಸುದ್ದಿ.ಕಾಂ” ನೊಂದಿಗೆ ಕೃಷಿಕ ವೆಂಕಪ್ಪ ಗೌಡ ತಮ್ಮ ಅಳಲು ತೋಡಿಕೊಂಡರು.
ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…
ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…
ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…
ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…
ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…
ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…