ಬರವಣಿಗೆಯಲ್ಲಿ ನೈಜತೆ ಕಾಪಾಡಿಕೊಳ್ಳುವುದು ಅಗತ್ಯ

August 29, 2019
9:53 PM

ಪುತ್ತೂರು: ಒಂದು ಲೇಖನವನ್ನು ಬರೆಯುವ ಮೊದಲು ಪೂರ್ವಗ್ರಹಪೀಡಿತ ಮನಸ್ಥಿತಿ ಇರಬಾರದು. ಲೇಖಕ ತನ್ನ ಮನಸ್ತಾಪಗಳನ್ನು ಬದಿಗಿರಿಸಿ ನೈಜತೆಯನ್ನು ಸ್ವತಂತ್ರವಾಗಿ ಬರೆಯಬೇಕು. ಆಗ ಲೇಖನ ಸತ್ಯತೆಯನ್ನು ತಿಳಿಸುವುದರೊಂದಿಗೆ ಲೇಖನದ ಮೌಲ್ಯ ವೃದ್ಧಿಯಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.

Advertisement

ಅವರು  ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ‘ಬರವಣಿಗೆ ಕೌಶಲ್ಯ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಬರವಣಿಗೆ ಎಂದರೆ ವಿಷಯವನ್ನು ಅರಿತು ಆನಂತರ ಅದರ ಕುರಿತು ವಿಷಯವನ್ನು ಸಂಗ್ರಹಿಸಿ ಬರೆಯುವುದಲ್ಲ. ದಿನನಿತ್ಯದ ಜೀವನದ ಹಲವು ವಿಷಯಗಳು ಗುರುತಿಸಿ ಮಾಹಿತಿ ಕಲೆ ಹಾಕುವುದು ನಿಜವಾದ ಬರವಣಿಗೆ ಎಂದೆನಿಸುತ್ತದೆ. ಆಗ ಮಾತ್ರ ಯಾವ ರೀತಿ ಬರಹಗಳನ್ನು ಬೇಕಾದರು ಬರೆಯಲು ಧೈರ್ಯ ಹಾಗೂ ದೃಢವಾದ ಮಾಹಿತಿಗಳು ಲಭಿಸುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪುತ್ತೂರಿನ ಅಡಿಕೆ ಪತ್ರಿಕೆಯ ಸಹಸಂಪಾದಕ ನಾ. ಕಾರಂತ ಪೆರಾಜೆ ಮಾತನಾಡಿ, ಬರವಣಿಗೆ ಒಂದು ಧ್ಯಾನ, ಅದೊಂದು ನಾವೇ ಕೈಗೆತ್ತಿಕೊಳ್ಳುವ ತಪಸ್ಸು ಇದ್ದಂತೆ. ಇದು ಕಾಲಾತೀತವಾದ ಕಾರ್ಯ. ಕಲೆ ಮತ್ತು ಬರವಣಿಗೆ ಒಂದಕ್ಕೊಂದು ಬೆಸೆದುಕೊಂಡಿದೆ. ಕಲೆಯ ಸ್ಪರ್ಶ ಬರವಣಿಗೆಗೆ ನೀಡಿದಾಗ ಅದು ಸುಂದರವಾಗಿ ಮೂಡಿಬರುತ್ತದೆ. ಇಂಟರ್ನೆಟ್‍ನಲ್ಲಿ ಸಿಗುವ ಮಾಹಿತಿ ಜ್ಞಾನವಲ್ಲ. ಅದನ್ನು ಹೊರತುಪಡಿಸಿ ಜೀವನಕ್ಕೆ ಹತ್ತಿರವಾಗಿರುವುದನ್ನು ಬರೆಯಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಐ.ಕ್ಯು.ಎ.ಸಿ. ಘಟಕದ ಸಂಯೋಜಕ ಡಾ. ಶ್ರೀಧರ್ ಎಚ್.ಜಿ., ಕಣ್ಣೆದುರಿಗೆ ದಿನನಿತ್ಯವು ಕಾಣುವ ಅದೆಷ್ಟೋ ವಿಚಾರಗಳು, ವಿಸ್ಮಯಗಳು ಇರುತ್ತದೆ. ಅದನ್ನು ಗಮನಿಸಿದರೆ ಮಾತ್ರ ಬರಹಗಾರನ ಬೊಗಸೆಗೆ ಅವು ಸೇರುತ್ತವೆ. ಬರವಣಿಗೆಗೆ ಶಬ್ದಕೋಶಗಳು ಎಷ್ಟಿದ್ದರೂ ಸಾಕಾಗಲಾರದು. ಆದರೆ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಕೈಗೆ ಸಿಲುಕಿ ಹಲವಾರು ಸುಂದರ ಪದಗಳು ಕಳೆದುಹೋಗುತ್ತಿವೆ. ಅದರತ್ತ ಮುಖ ಮಾಡಿದರೆ ಬರಹಗಳ ಮೌಲ್ಯ ಹೆಚ್ಚುತ್ತದೆ ಎಂದು ನುಡಿದರು.

ವಿದ್ಯಾರ್ಥಿನಿ ಪವಿತ್ರ ಪ್ರಾರ್ಥಿಸಿದರು. ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಸೀಮಾ ವಂದಿಸಿದರು. ಶಿವಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 16-08-2025 | ಮಲೆನಾಡು-ಕರಾವಳಿಯಲ್ಲಿ ಉತ್ತಮ ಮಳೆ | ಆ.20 ರ ನಂತರ ಮಳೆ ಹೇಗೆ..?
August 16, 2025
3:30 PM
by: ಸಾಯಿಶೇಖರ್ ಕರಿಕಳ
ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ
August 16, 2025
11:33 AM
by: ದಿವ್ಯ ಮಹೇಶ್
ಎತ್ತಿನಹೊಳೆ ಯೋಜನೆಯಡಿ ವಿವಿಧ ಜಿಲ್ಲೆಗಳಿಗೆ ನೀರು ತುಂಬಿಸುವ ಚಿಂತನೆ
August 16, 2025
11:25 AM
by: The Rural Mirror ಸುದ್ದಿಜಾಲ
ದೇಶದ ಉತ್ಪನ್ನಗಳನ್ನು ಬಳಸಲು ರೈತರ ಸಂಕಲ್ಪ
August 16, 2025
11:17 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group