ಸುದ್ದಿಗಳು

ಬೆಟ್ಟ ಕುಸಿಯುವ ಆತಂಕ : ವಿರಾಜಪೇಟೆ ರಸ್ತೆ ವಿಸ್ತರಣೆಗೆ ಆಕ್ಷೇಪ : ಸಾರ್ವಜನಿಕರಿಂದ ಪ್ರತಿಭಟನೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಡಿಕೇರಿ: ರಸ್ತೆ ವಿಸ್ತರಣೆಯ ನೆಪದಲ್ಲಿ ವಿರಾಜಪೇಟೆ ಪಟ್ಟಣ ಪಂಚಾಯತ್ ಅವೈಜ್ಞಾನಿಕ ಕಾಮಗಾರಿಗೆ ಮುಂದಾಗಿದೆ ಎಂದು ಆರೋಪಿಸಿ ವಿವಿಧ ಬಡಾವಣೆಗಳ ಕಟ್ಟಡ ಮಾಲಕರು, ನಿವಾಸಿಗಳು, ವಕೀಲರು ಹಾಗೂ ವರ್ತಕರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

Advertisement

ಸುಂಕದಕಟ್ಟೆಯಿಂದ ಮೀನುಪೇಟೆಯವರೆಗೆ ರಸ್ತೆ ವಿಸ್ತರಣೆಗೆ ಯೋಜನೆ ರೂಪಿಸಿರುವ ಪಟ್ಟಣ ಪಂಚಾಯತ್ ಅವೈಜ್ಞಾನಿಕ ಯೋಜನೆಯ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ತಾಲೂಕು ಕಚೇರಿ ಎದುರು ಆರೋಪಿಸಿದರು.  ಜುಲೈ ತಿಂಗಳಿನಲ್ಲಿ ರಸ್ತೆ ವಿಸ್ತರಣೆ ಸಂಬಂಧ ಸರ್ವೆ ಕಾರ್ಯ ನಡೆಸಿ ಕಟ್ಟಡಗಳ ತೆರವು ಕಾರ್ಯಾಚರಣೆ ಕುರಿತು ಅಧಿಕಾರಿಗಳು ಮುನ್ಸೂಚನೆ ನೀಡಿದ್ದರು. ಆದರೆ ಕಟ್ಟಡ ಮಾಲಕರುಗಳಿಗೆ ಸರಕಾರದ ನಿಯಮದಂತೆ ಪರಿಹಾರ ಒದಗಿಸುವ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲವೆಂದು ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ವೀರರಾಜೇಂದ್ರ ಪೇಟೆಯನ್ನು ಅಭಿವೃದ್ಧಿ ಹೆಸರಿನಲ್ಲಿ ಹದಗೆಡಿಸಲಾಗುತ್ತಿದೆ. ಮಲೆತಿರಿಕೆ ಬೆಟ್ಟವನ್ನು ಕೊರೆದು ರಸ್ತೆ ವಿಸ್ತರಣೆ ಮಾಡಿದರೆ ಮಣ್ಣು ಸಡಿಲಗೊಂಡು ಪೂರ್ಣ ಪ್ರಮಾಣದಲ್ಲಿ ಬೆಟ್ಟ ಕುಸಿದು ಪಟ್ಟಣವನ್ನು ಆವರಿಸುವ ಆತಂಕವಿದೆ ಎಂದು ಹಿರಿಯರಾದ ಡಾ.ಐ.ಅರ್.ದುರ್ಗಪ್ರಸಾದ್ ಗಮನ ಸೆಳೆದರು.

ಕಟ್ಟಡ ಮಾಲಕರಿಗೆ ಪರಿಹಾರ ನೀಡಿದ ನಂತರ ರಸ್ತೆ ವಿಸ್ತರಣೆ ಮಾಡಬೇಕೆನ್ನುವ ನಿಯಮವಿದೆ. ಆದರೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಅದೇಶಗಳನ್ನು ಗಾಳಿಗೆ ತೂರಿ ರಸ್ತೆ ವಿಸ್ತರಣೆಗೆ ಮುಂದಾಗಿದ್ದಾರೆ ಎಂದು ವಕೀಲ ರವೀಂದ್ರಕಾಮತ್ ಆರೋಪಿಸಿದರು.  ವಕೀಲ ಟಿ.ಪಿ.ಕೃಷ್ಣ ಅವರು ಮಾತನಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಜವರೇಗೌಡ ಅವರು ಸಾರ್ವಜನಿಕರ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಪ್ರತಿಭಟನಾ ಮೆರವಣಿಗೆ ತೆಲುಗರಬೀದಿ, ಮುಖ್ಯರಸ್ತೆಯ ಮೂಲಕ ಸಾಗಿ ಮೀನುಪೇಟೆಯಿಂದ ತಾಲೂಕು ಕಚೇರಿಯವರೆಗೆ ನಡೆಯಿತು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಕೊಳೆರೋಗ | ಶೇ.95 ರಷ್ಟು ಕೃಷಿಕರ ತೋಟದಲ್ಲಿ ಅಡಿಕೆ ಕೊಳೆರೋಗ | ಸಮೀಕ್ಷಾ ವರದಿಯ ಮಾಹಿತಿ

ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ…

18 hours ago

ಸವಿರುಚಿ | ಹಲಸಿನ ಬೇಳೆ (ಹ ಬೀ) ಸೂಪ್‌

ಹಲಸಿನ ಬೇಳೆ ಸೂಪ್‌ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು…

22 hours ago

ಬದುಕು ಪುರಾಣ | ಬದುಕಿಗಾಸರೆ, ಕಾಮಧೇನು

ಮಗನಿಗೆ ತಂದೆ, ಮಗಳಿಗೆ ತಾಯಿ, ಸಿಬ್ಬಂದಿಗಳಿಗೆ ಸಂಸ್ಥೆಯು - ಕಾಮಧೇನು. ಕಾಮಿಸಿದ, ಇಚ್ಛಿಸಿದ…

23 hours ago

ಪ್ರೇಮ ವಿಚಾರದಲ್ಲಿ ಈ ರಾಶಿಯವರಿಗೆ ಭಾವನಾತ್ಮಕ ಏರಿಳಿತ

ಪ್ರೀತಿ ಎಂದರೆ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದು. ಆದರೆ ಎಲ್ಲರಿಗೂ ಪ್ರೀತಿಯಲ್ಲಿ ಒಂದೇ…

23 hours ago

ತಾಳಮದ್ದಳೆಯಲ್ಲಿ ಪರೋಕ್ಷ ವ್ಯಂಗ್ಯವಾಡಿ, ಈಗ ಅದೇ ಮಠದಲ್ಲಿ ಪ್ರತ್ಯಕ್ಷ…!

ಕಾಸರಗೋಡು ಮೂಲದ ಸ್ವಾಮೀಜಿಯೊಬ್ಬರ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಈಚೆಗೆ ನಡೆದ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮದಲ್ಲಿ…

1 day ago

ಕಲುಷಿತ ಭಾಷೆಯ ಶುದ್ಧೀಕರಣಕ್ಕೆ ಆದ್ಯತೆ: ರಾಘವೇಶ್ವರ ಶ್ರೀ

ನಾಲಿಗೆ ಶುದ್ಧವಾಗಿದ್ದರೆ ಮಾತ್ರ ನಮ್ಮ ವ್ಯಕ್ತಿತ್ವವೂ ಶುದ್ಧವಾಗಿರಲು ಸಾಧ್ಯ; ಆದ್ದರಿಂದ ಕಲುಷಿತಗೊಂಡಿರುವ ನಮ್ಮ…

1 day ago