ಬೆಳ್ಳಾರೆ: ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಕಾರ್ಮಿಕ ದಿನಾಚರಣೆ ಹಾಗೂ ಇಬ್ಬರು ಕಾರ್ಮಿಕ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಬೆಳ್ಳಾರೆಯ ಪ್ರಸಾದ್ ಟೆಕ್ಸ್‍ಟೈಲ್ಸ್‍ನ ಸಭಾಂಗಣದಲ್ಲಿ ನಡೆಯಿತು.
ಕಲ್ಮಡ್ಕದ ಇಂದಾಜೆ ನಿವಾಸಿ ನುರಿತ ಇಲೆಕ್ಟ್ರೀಷಿಯನ್ ರುಕ್ಮಯ ಗೌಡ ಹಾಗು ಕಳಂಜ ಗ್ರಾಮದ ಕಿಲಂಗೋಡಿಯ ಅಚ್ಚುತ ನಾಯಕ್‍ರನ್ನು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ಎ.ಕೆ ಮಣಿಯಾಣಿ ಸನ್ಮಾನಿಸಿ ಗೌರವಿಸಿದರು. ಸ್ಥಾಪಕಾಧ್ಯಕ್ಷ ಶ್ಯಾಮಸುಂದರ ರೈ ಸನ್ಮಾನಿತರ ಪರಿಚಯಿಸಿ ಪ್ರಸ್ತಾವನೆಗೈದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನಿಯೋಜಿತ ಅಧ್ಯಕ್ಷ ಬಿ.ನರಸಿಂಹ ಜೋಶಿ, ಪೂವಾಧ್ಯಕ್ಷ ಕರುಣಾಕರ ಆಳ್ವ, ಮಾಧವ ಗೌಡ, ಬಿ.ಸುಬ್ರಹ್ಮಣ್ಯ ಜೋಶಿ, ಪ್ರಮೋದ್‍ಕುಮಾರ್ ಶೆಟ್ಟಿ ಕುಂಟುಪುಣಿಗುತ್ತು, ಪ್ರಭಾಕರ ಆಳ್ವ ಭಜನಿಗುತ್ತು, ವಿನಯ್‍ಕುಮಾರ್ ಭಾರದ್ವಾಜ್ ಹಾಗು ಐತ್ತಪ್ಪ ಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ಕೆ ಮಣಿಯಾಣಿ ಸ್ವಾಗತಿಸಿ, ಕಾರ್ಯದರ್ಶಿ ಗೋಪಾಲಕೃಷ್ಣ ವಿ.ಎಸ್ ವಂದಿಸಿದರು.
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…