ಬೆಳ್ಳಾರೆ: ಜೀವನದಲ್ಲಿ ಬರುವ ಎಲ್ಲಾ ವಿಧದ ಸವಾಲುಗಳನ್ನು ಎದುರಿಸಲು ಸಿದ್ಧನಿರುವವನು ಜಗತ್ತಿನೆಲ್ಲೆಡೆ ಬದುಕುವ ಸಾಮರ್ಥ್ಯ ಹೊಂದುವನು ಎಂದು ವಿವೇಕಾನಂದ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ| ಎಚ್.ಮಾಧವ ಭಟ್ ಹೇಳಿದರು.
ಅವರು ಬೆಳ್ಳಾರೆ ಶ್ರೀ ಸದಾಶಿವ ಶಿಶುಮಂದಿರದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಂಗಳೂರು ವಿಭಾಗದ ಗೋ ಸೇವಾ ಪ್ರಮುಖ್ ಪುಂಡರೀಕಾಕ್ಷ ಮಾತನಾಡಿ, ಸಮಾಜದೊಂದಿಗೆ ಇರಬೇಕಾದ ಶೈಲಿಯನ್ನು ಕಲಿತೊಕೊಳ್ಳಬೇಕು. ಹಿಂದು ಧರ್ಮದ ಸಂಸ್ಕೃತಿಯನ್ನು ಮಕ್ಕಳಿಗೆ ಪ್ರಥಮವಾಗಿ ಹೇಳಿಕೊಡಲೇಬೇಕು. ಅಂತಹ ಕೆಲಸಗಳನ್ನು ಶಿಶುಮಂದಿರಗಳು ಮಾಡುತ್ತಿರುವು ಶ್ಲಾಘನೀಯ ಎಂದರು.
ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀ ಸದಾಶಿವ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಿ.ಎಸ್ ಚಿದಾನಂದ ರಾವ್ ಪುಸ್ತಕಗಳು ಮನುಷ್ಯನ ನಿಜವಾದ ಮಿತ್ರ. ವಿಷಯಗಳು ಪುಸ್ತಕದ ಮೂಲದಲ್ಲಿದ್ದರೆ ಜನರ ಮನಸ್ಸಿನಲ್ಲಿ ದೀರ್ಘ ಸಮಯ ಉಳಿದಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವೈದಿಕ ಕ್ಷೇತ್ರದಲ್ಲಿ ಸಾಧನೆಗೈದಿರುವ ಚೂಂತಾರು ವೇ|ಮೂ ಶಿವಪ್ರಸಾದ್ ಭಟ್ ಹಾಗೂ ಜಿಲ್ಲಾ ಕೃಷಿ ಪಂಡಿತ ಪುರಸ್ಕೃತ ವಿವೇಕ್ ಆಳ್ವ ಅವರನ್ನು ಶ್ರೀ ಸದಾಶಿವ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾದ ಶಶಿಕಿರಣ್ ಎಂಬವರಿಗೆ ಟ್ರಸ್ಟ್ ವತಿಯಿಂದ ಹನ್ನೊಂದು ಸಾವಿರ ರೂಪಾಯಿಗಳ ಸಹಾಯ ಧನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಜೋಶಿ ವಹಿಸಿ ಸ್ವಾಗತಿಸಿದರು. ವೇದಿಕೆಯಲ್ಲಿ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್‍ಕುಮಾರ್ ರೈ ಪುಡ್ಕಜೆ, ಶಿಶುಮಂದಿರ ಸಂಚಾಲಕ ಕುರುಂಬುಡೇಲು ಮಹಾಲಿಂಗ ಭಟ್ ಉಪಸ್ಥಿತರಿದ್ದರು. ಕೇಶವಮೂರ್ತಿ ಕಾವಿನಮೂಲೆ ವಂದಿಸಿದರು. ತೇಜೇಶ್ವರಿ ವಾರ್ಷಿಕ ವರದಿ ವಾಚಿಸಿದರು. ಪ್ರದೀಪ್‍ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಚಟುವಟಿಕೆ ಆರಂಭವಾಗಿದೆ. ಏಪ್ರಿಲ್ 15…
ಜನನ-ಮರಣ ಘಟನೆಗಳನ್ನು 21 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸೂಚನೆ.
ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಮುಂದುವರಿಯುತ್ತಿದ್ದು, ಮಳೆಯ ಚಟುವಟಿಕೆ ಕಡಿಮೆಯಾಗಿದೆ. ಏಪ್ರಿಲ್ 15…
ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…
ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆಯ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ…
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಎಂಬುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.…