ಭಾರೀ ಗಾಳಿ ಮಳೆಯಿಂದ ಮನೆಗಳಿಗೆ ಹಾನಿ | ಎಸ್.ಎಸ್ ಎಫ್ ಹಾಗೂ ಎಸ್.ವೈ.ಎಸ್ ನಿಂದ ತುರ್ತು ದುರಸ್ತಿ ಕಾರ್ಯ

May 9, 2020
2:04 PM

ಸುಳ್ಯ: ಈಚೆಗೆ ಸುರಿದ  ಗಾಳಿ ಮಳೆಗೆ ಗೂನಡ್ಕ ದರ್ಖಾಸು ಪರಿಸರದ ಹತ್ತಾರು ಮನೆಗಳು ಹಾನಿಗೊಂಡಿದ್ದು, ಮನೆಯ ಸುಮಾರು 40ರಷ್ಟು ಮೇಲ್ಛಾವಣಿಗಳು ಹಾರಿ ಹೋಗಿತ್ತು. ಈ ಬಗ್ಗೆ ತಕ್ಷಣ ಸ್ಪಂದಿಸಿದ ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ತುರ್ತು ಸೇವಾ ತಂಡದ ಸದಸ್ಯರು ನೆರವಿನ ಹಸ್ತವನ್ನು ಚಾಚಿ ಮನೆಯನ್ನು ತಕ್ಷಣ ದುರಸ್ತಿ ಮಾಡಿಕೊಟ್ಟಿದ್ದಾರೆ.

ದಾನಿಗಳನ್ನು ಸಂಪರ್ಕಿಸಿ ಬೇಕಾದ ಮೇಲ್ಛಾವಣಿಗಳ ವ್ಯವಸ್ಥೆಯನ್ನು ಮಾಡಿ ರಮ್ಜಾನಿನ ಉಪವಾಸದ ಮಧ್ಯೆಯೂ ಸ್ವತಃ ಕಾರ್ಯಕರ್ತರೇ  ಮನೆಗಳನ್ನು ರಿಪೇರಿ ಮಾಡಿಕೊಟ್ಟಿದ್ದಾರೆ.  ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ, ಗೂನಡ್ಕ ಜಮಾಅತ್ ಅಧ್ಯಕ್ಷರಾದ ಉಮರ್ ಹಾಜಿ, ಗ್ರಾಮ ಪಂಚಾಯತ್ ಸದಸ್ಯರಾದ ಪಿ. ಕೆ ಅಬೂಸಾಲಿರವರ ಸಹಿತ ಊರಿನ ಹಿರಿಯರು ಮಾರ್ಗದರ್ಶನವನ್ನು ನೀಡಿ ಸಹಕರಿಸಿದರು.

ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ತುರ್ತು ಸೇವಾ ತಂಡದ ಫೈಝಲ್ ಝುಹ್ರಿ ಕಲ್ಲುಗುಂಡಿ, ಸಿದ್ದೀಖ್ ಗೂನಡ್ಕ, ಹಾರಿಸ್ ಗೂನಡ್ಕ, ಶರೀಫ್ ಜಯನಗರ, ನೌಶಾದ್ ಕೆರೆಮೂಲೆ, ಹಾರಿಸ್ ಬೋರುಗುಡ್ಡೆ, ರಹೀಂ ಪೈಚಾರು ಮುಂತಾದವರು ಹಾಗೂ ಗೂನಡ್ಕ ಜಮಾಅತ್, ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷ್, ಎಸ್.ವೈ.ಎಸ್, ಎಸ್ಸೆಸ್ಸೆಫ್ ನಾಯಕರು ಹಾಗೂ ಊರವರು ಈ ದುರಸ್ತಿ ಕಾರ್ಯದಲ್ಲಿ  ಪಾಲ್ಗೊಂಡಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಒಂದು ದಿನದ ತೀವ್ರ ಬಿಸಿಲು 3,400 ಹೆಚ್ಚುವರಿ ಸಾವುಗಳಿಗೆ ಕಾರಣ…? ಭಾರತದ ಬಗ್ಗೆ ಬೆಚ್ಚಿಬೀಳಿಸುವ ಅಧ್ಯಯನ
June 2, 2026
7:05 AM
by: ದ ರೂರಲ್ ಮಿರರ್.ಕಾಂ
ಹವಾಮಾನ ಬಿಕ್ಕಟ್ಟಿನ ನಡುವೆಯೂ ಕೃಷಿ ಉಳಿಸುವ ದಾರಿ ಕಂಡುಕೊಂಡ ದಕ್ಷಿಣ ಏಷ್ಯಾ ದೇಶಗಳು – ಸ್ಥಳೀಯ ಆವಿಷ್ಕಾರಗಳಿಗೆ ಹೆಚ್ಚಿದ ಮಹತ್ವ
June 2, 2026
6:57 AM
by: ದ ರೂರಲ್ ಮಿರರ್.ಕಾಂ
ಮುಂಗಾರು ಅಧಿಕೃತ ದಿನಾಂಕ ತಪ್ಪಿತು..! ಜೂನ್ ಮೊದಲ ವಾರದ ಬಳಿಕವೇ ಭಾರೀ ಮಳೆ ಸಾಧ್ಯತೆ ಎಂದ ಸ್ಕೈಮೆಟ್
June 1, 2026
9:02 PM
by: ದ ರೂರಲ್ ಮಿರರ್.ಕಾಂ
ಹೊಸ ಪಕ್ಷ ಸ್ಥಾಪನೆ ಊಹಾಪೋಹ – ‘ಇನ್ನೆರಡು ದಿನಗಳಲ್ಲಿ ಸ್ಪಷ್ಟನೆ ಕೊಡುತ್ತೇನೆ’ ಎಂದ ಅಣ್ಣಾಮಲೈ
June 1, 2026
8:22 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror