ಸುಳ್ಯ: ಈಚೆಗೆ ಸುರಿದ ಗಾಳಿ ಮಳೆಗೆ ಗೂನಡ್ಕ ದರ್ಖಾಸು ಪರಿಸರದ ಹತ್ತಾರು ಮನೆಗಳು ಹಾನಿಗೊಂಡಿದ್ದು, ಮನೆಯ ಸುಮಾರು 40ರಷ್ಟು ಮೇಲ್ಛಾವಣಿಗಳು ಹಾರಿ ಹೋಗಿತ್ತು. ಈ ಬಗ್ಗೆ ತಕ್ಷಣ ಸ್ಪಂದಿಸಿದ ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ತುರ್ತು ಸೇವಾ ತಂಡದ ಸದಸ್ಯರು ನೆರವಿನ ಹಸ್ತವನ್ನು ಚಾಚಿ ಮನೆಯನ್ನು ತಕ್ಷಣ ದುರಸ್ತಿ ಮಾಡಿಕೊಟ್ಟಿದ್ದಾರೆ.
ದಾನಿಗಳನ್ನು ಸಂಪರ್ಕಿಸಿ ಬೇಕಾದ ಮೇಲ್ಛಾವಣಿಗಳ ವ್ಯವಸ್ಥೆಯನ್ನು ಮಾಡಿ ರಮ್ಜಾನಿನ ಉಪವಾಸದ ಮಧ್ಯೆಯೂ ಸ್ವತಃ ಕಾರ್ಯಕರ್ತರೇ ಮನೆಗಳನ್ನು ರಿಪೇರಿ ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ, ಗೂನಡ್ಕ ಜಮಾಅತ್ ಅಧ್ಯಕ್ಷರಾದ ಉಮರ್ ಹಾಜಿ, ಗ್ರಾಮ ಪಂಚಾಯತ್ ಸದಸ್ಯರಾದ ಪಿ. ಕೆ ಅಬೂಸಾಲಿರವರ ಸಹಿತ ಊರಿನ ಹಿರಿಯರು ಮಾರ್ಗದರ್ಶನವನ್ನು ನೀಡಿ ಸಹಕರಿಸಿದರು.
ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ತುರ್ತು ಸೇವಾ ತಂಡದ ಫೈಝಲ್ ಝುಹ್ರಿ ಕಲ್ಲುಗುಂಡಿ, ಸಿದ್ದೀಖ್ ಗೂನಡ್ಕ, ಹಾರಿಸ್ ಗೂನಡ್ಕ, ಶರೀಫ್ ಜಯನಗರ, ನೌಶಾದ್ ಕೆರೆಮೂಲೆ, ಹಾರಿಸ್ ಬೋರುಗುಡ್ಡೆ, ರಹೀಂ ಪೈಚಾರು ಮುಂತಾದವರು ಹಾಗೂ ಗೂನಡ್ಕ ಜಮಾಅತ್, ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷ್, ಎಸ್.ವೈ.ಎಸ್, ಎಸ್ಸೆಸ್ಸೆಫ್ ನಾಯಕರು ಹಾಗೂ ಊರವರು ಈ ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.