ಸುಳ್ಯ: ಸಣ್ಣ ಮಳೆ ಬಂದಾಗ ಪಯಸ್ವಿನಿ ನದಿಯಲ್ಲಿ ಕೆಸರು ನೀರು ಹರಿಯುತ್ತಿದೆ. ಇದು ಈಗ ನದಿ ಪಾತ್ರದ ಜನರಿಗೆ ಆತಂಕಕ್ಕೆ ಕಾರಣವಾಗಿದೆ.
ಕಳೆದ ಮಳೆಗಾಲದ ಅವಧಿಯಲ್ಲಿ ಸಂಪಾಜೆ , ಮಡಿಕೇರಿ ಭಾಗದಲ್ಲಿ ಭೂಕುಸಿತದ ಪರಿಣಾಮವಾಗಿ ಸಂಪಾಜೆ, ಊರುಬೈಲು, ಚೆಂಬು, ಸಂಪಾಜೆ ಗ್ರಾಮಗಳಲ್ಲಿ ಪಯಸ್ವಿನಿ ನದಿಯ ಸ್ವರೂಪದಲ್ಲೇ ಬದಲಾವಣೆ ಉಂಟಾಗಿದೆ. ಇದೀಗ ಬೇಸಿಗೆಯಲ್ಲಿ ಸುರಿದ ಮಳೆಯಲ್ಲಿಯೇ ನೀರಿನ ಜೊತೆಯಲ್ಲಿ ಕೆಸರು, ಮರಳು, ಮಣ್ಣು ಹರಿದು ಬರುತಿದೆ. ಇದರಿಂದ ನೀರು ಕೃಷಿಗೆ ನೀರು ಹಾಯಿಸಲು ನದಿಯಲ್ಲಿ ಅಲ್ಲಲ್ಲಿ ಕೃಷಿಕರು ತೋಡಿದ ಹೊಂಡಗಳು ಮುಚ್ಚಿ ಹೋಗುತಿದೆ. ಈ ಹೊಂಡಗಳಲ್ಲಿ ಪಂಪ್ ಇರಿಸಿ ನೀರು ಪಂಪ್ ಮಾಡಿ ಕೃಷಿಗೆ ನೀರು ಹಾಯಿಸುತ್ತಿದ್ದರು. ಆದರೆ ಕೆಸರು ಮಣ್ಣು ಬರುವ ಕಾರಣ ಈ ಹೊಂಡಗಳು ದಿನಂಪ್ರತಿ ಮುಚ್ಚಿ ಹೋಗಿ ಪಂಪ್‍ಗಳು ಕೆಸರಲ್ಲಿ ಮುಳುಗುತ್ತಿದೆ. ಪ್ರತಿ ದಿನ ಹೊಂಡ ತೋಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಹರಿವು ಹೆಚ್ಚಾದರೂ ಕೆಸರು ನೀರು ಬರುವುದು ಸಮಸ್ಯೆ ಸೃಷ್ಠಿಸುತಿದೆ ಎನ್ನುತ್ತಾರೆ ಕೃಷಿಕರು. ಇನ್ನು ನದಿಯಲ್ಲಿ ಒಂದು ಬದಿಯಲ್ಲಿ ಹರಿಯುತ್ತಿದ್ದ ನೀರು ಮರಳು, ಮಣ್ಣು ತುಂಬಿ ದಿನ ಕಳೆದಂತೆ ಹರಿವಿನ ದಿಕ್ಕನ್ನು ಮತ್ತೊಂದೆಡೆ ಬದಲಿಸಿ ನದಿಯ ಸ್ವರೂಪವೇ ಬದಲಾಗುತ್ತಿದೆ. ಕಳೆದ ಮಳೆಗಾಲದಲ್ಲಿ ಎರಡನೇ ಮೊಣ್ಣಂಗೇರಿ, ಜೋಡುಪಾಲದಲ್ಲಿ ಉಂಟಾದ ಪ್ರಳಯ ಮತ್ತು ಭೂಕುಸಿತದಿಂದ ಹರಿದು ಬಂದ ಟನ್ ಗಟ್ಟಲೆ ಕೆಸರು, ಮರಳು, ಮಣ್ಣು ನದಿಯಲ್ಲಿದ್ದ ಬೃಹತ್ ಗಾತ್ರದ ಹೊಂಡಗಳನ್ನು ತುಂಬಿಸಿ ನದಿಯ ಒಡಲನ್ನು ಸಮಾನಾಂತರವಾಗಿಸಿತು. ಇದರಿಂದ ನದಿಯ ಒಡಲಿನ ನೀರಿನ ಶೇಖರಣೆಯೇ ಕಡಿಮೆಯಾಗಿ ಬಸಿಗೆಯಲ್ಲಿ ನೀರಿನ ಕೊರತೆ ಎದುರಾಗಿತ್ತು. ಈ ವರ್ಷವೂ ನದಿಯ ನೀರಿನ ಜೊತೆಗೆ ಮೇಲ್ಭಾಗದಿಂದ ಹರಿದು ಬರುವ ಮಣ್ಣು, ಮರಳು ನದೀಪಾತ್ರವನ್ನು ತುಂಬುವ ಆತಂಕ ಎದುರಾಗಿದೆ.
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…
ಕೋಲಾರ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ತೆರವುಗಳಿಸಲು ಕ್ರಮ ಕೈಗೊಳ್ಳಬೇಕು ಎಂದು…
ತೆಂಗು ಬೆಳೆ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದ್ದು, ವಿಶ್ವದಲ್ಲೇ…