ಮಡಿಕೇರಿ : ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವದಲ್ಲಿ ಮಹತ್ವ ಪಡೆದುಕೊಂಡಿರುವ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವ ಆರಂಭಗೊಂಡಿದೆ. ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀಕಂಚಿಕಾಮಾಕ್ಷಿಯಮ್ಮ, ಶ್ರೀದಂಡಿನ ಮಾರಿಯಮ್ಮ ಹಾಗೂ ಶ್ರೀಕೋಟೆ ಮಾರಿಯಮ್ಮ ಕರಗಗಳ ನಗರ ಸಂಚಾರದ ಮೂಲಕ ದಸರಾ ಜನೋತ್ಸವಕ್ಕೆ ಚಾಲನೆ ದೊರೆತಿದೆ.
ಮಡಿಕೇರಿ ದಸರಾ ಕರಗ ಉತ್ಸವಕ್ಕೆ ಸುಮಾರು 225 ವರ್ಷಗಳ ಇತಿಹಾಸವಿದ್ದು, ರಾಜರ ಆಳ್ವಿಕೆಯ ಕಾಲದಿಂದಲೇ ಈ ಆಚರಣೆ ನಡೆಯುತ್ತಾ ಬರುತ್ತಿದೆ. ಆಗಿನ ಕಾಲದಿಂದಲೂ ಮಡಿಕೇರಿಯಲ್ಲಿ ನೆಲೆಸಿರುವ ಗೌಳಿ ಸಮುದಾಯದ ಪೂಜಾರಿ ಮನೆತನದವರು ಈ ಕರಗೋತ್ಸವನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷ.
ಸೆ. 30 ರಿಂದ ಅ. 3ರ ವರೆಗೆ ಕರಗಗಳು ಸಂಪ್ರದಾಯದಂತೆ ನಗರ ಪ್ರದಕ್ಷಿಣೆ ಮಾಡಲಿರುವ ನಾಲ್ಕು ಕರಗಗಳು ವಿಜಯ ದಶಮಿಯಂದು ರಾತ್ರಿ ಮಡಿಕೇರಿ ರಾಜಬೀದಿಯಲ್ಲಿ ನಡೆಯುವ ಶೋಭಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ. ಅ.9 ರಂದು ಬೆಳಗ್ಗಿನ ಜಾವ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಕರಗಗಳು ದಸರಾ ಮಹೋತ್ಸವಕ್ಕೆ ತೆರೆ ಎಳೆಯಲಿವೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel