MIRROR FOCUS

ಮತ್ತೆ ಸುದ್ದಿಯಾಗುತ್ತಿದೆ ಕಿದು ಸಂಶೋಧನಾ ಕೇಂದ್ರ : ಸರಕಾರ ಕಿದು ಉಳಿಸುತ್ತಾ…?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೃಷಿಕರಿಗೆ ನೆರವಾಗುವ ಹಾಗೂ ಭಾರತದ ಅದರಲ್ಲೂ ಕರ್ನಾಟಕದ ಏಕೈಕ ತೆಂಗು ಅಭಿವೃದ್ಧಿ ಸಂಶೋಧನಾ ಕೇಂದ್ರಕ್ಕೆ ಕಾಟ ಶುರುವಾಗಿದೆ. ಈಚೆಗೆ ಅರಣ್ಯ ಇಲಾಖೆ ನೋಟೀಸ್ ಮಾಡಿ ಸುದ್ದಿಯಾಗಿದ್ದರೆ ಇದೀಗ ವಿದ್ಯುತ್ ಕಡಿತಗೊಳಿಸಲು ಅರಣ್ಯ ಇಲಾಖೆ ನೋಟೀಸ್ ಮಾಡಿದೆ. ಮಂಗಳೂರು ಸಂಸದರು ಈಗ ರಾಜ್ಯದ ಅಧ್ಯಕ್ಷರಾಗಿದ್ದಾರೆ, ಆಡಳಿತ ಪಕ್ಷವಿದೆ, ಅಲ್ಲಿ ಕೇಂದ್ರ ಸರಕಾರ ಇದೆ. ಇದೇ ಊರಿನ ಸಂಸದರುಗಳು ಇದ್ದಾರೆ. ಕಿದು ಉಳಿಸುತ್ತೇವೆ ಎಂದು ಹೇಳಿದ ಕೇಂದ್ರ ಸಚಿವರು ಇದ್ದಾರೆ. ಈಗ ಕೃಷಿಕರ ಪ್ರಶ್ನೆ ಕಿದು ಅಲ್ಲೇ ಉಳಿಯುತ್ತಾ ? ವರ್ಗಾವಣೆಯಾಗುತ್ತಾ…?  ಹೀಗಾಗಿ ಈ ಕಡೆಗೆ ಫೋಕಸ್…

Advertisement

ದಕ್ಷಿಣ ಕನ್ನಡ ಜಿಲ್ಲೆಯ ಬಿಳಿನೆಲೆಯಲ್ಲಿರುವ ರಾಜ್ಯದ ಏಕೈಕ ತೆಂಗುಸಂಶೋಧನಾ ಕೇಂದ್ರ, ದಕ್ಷಿಣ ಏಷ್ಯಾದ ಪ್ರಮುಖ ತೆಂಗು ಸಂಶೋಧನಾ ಕೇಂದ್ರ ಈಗ ಮತ್ತೆ ಸಂಕಷ್ಟದಲ್ಲಿದೆ. ಮತ್ತೆ ಅರಣ್ಯ ಇಲಾಖೆಯು ಜಿದ್ದಿಗೆ ಬಿದ್ದಂತೆ ಹೋರಾಟ ಮಾಡುತ್ತಿದೆ.  ಕಿದು ಕೇಂದ್ರದ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಮೆಸ್ಕಾಂ ಇಲಾಖೆಗೆ ಮಂಗಳೂರು ಉಪವಿಭಾಗದ ಅರಣ್ಯಾಧಿಕಾರಿಗಳು ಪತ್ರ ಬರೆದಿರುವ ವಿಚಾರ ಈಗ ಬೆಳಕಿದೆ ಬಂದಿದೆ.

ತೆಂಗು ಅಭಿವೃದ್ದಿ ಸಂಶೋಧನ ಕೇಂದ್ರ ಸ್ಥಾಪಿಸಲು ಅರಣ್ಯವನ್ನು ಲೀಸಿಗೆ ಪಡಕೊಂಡಿದ್ದು ಅದರ ಅವಧಿ 2000 ನೇ ಇಸವಿಗೆ ಮುಗಿದಿದೆ.ಬಳಿಕ ಇಷ್ಟು ವರ್ಷಗಳಾದರು ನವೀಕರಿಸಿಲ್ಲ. ನವೀಕರಣ ಶುಲ್ಕವು ಪಾವತಿಸಿಲ್ಲ. ಸುಪ್ರಿಂ ಕೋರ್ಟು ಆದೇಶದಂತೆ ಸಂಸ್ಥೆಯ ಆಡಳಿತವು ನವೀಕರಿಸಿ ಶುಲ್ಕ ಪಾವತಿಸದಿದ್ದಲ್ಲಿ ಲೀಸಿಗೆ ಪಡೆದ ಅರಣ್ಯವನ್ನು ಮರಳಿ ಪಡೆಯುವುದು ಅರಣ್ಯ ಇಲಾಖೆಗೆ ಅನಿವಾರ್ಯವಾಗಿದೆ. ಹೀಗಾಗಿ ವಸೂಲಾತಿಗೆ ಅರಣ್ಯ ಇಲಾಖೆ ಮುಂದಾಗಿದ್ದು ಕೇಂದ್ರಕ್ಕೆ ಕಲ್ಲಿಸಲಾದ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಈ ಹಿಂದೆಯೆ ಅರಣ್ಯ ಇಲಾಖೆ ಲೀಸ್ ಅವಧಿ ಮುಗಿದ ಅರಣ್ಯ ಪ್ರದೇಶವನ್ನು ಮರಳಿ ಪಡೆಯಲು ನಿರ್ಧರಿಸಿ ನೊಟೀಸ್ ಜಾರಿ ಮಾಡಿತ್ತು. ಕೇಂದ್ರ ಸ್ಥಳಾಂತರಕ್ಕೂ ಉದ್ದೇಶಿಸಲಾಗಿತ್ತು. ಇದಕ್ಕೆ ಸ್ಥಳೀಯರಿಂದ ವಿರೋಧಗಳು ವ್ಯಕ್ತಗೊಂಡಿದ್ದವು. ಬಳಿಕ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಸಚಿವರಿಗೆ ಮನವಿ ಮಾಡಿ ಸಂಶೋಧನ ಕೇಂದ್ರ ಸ್ಥಳಾಂತರಿಸದಂತೆ ತಾತ್ಕಾಲಿಕವಾಗಿ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮತ್ತೆ ಅರಣ್ಯ ಇಲಾಖೆ ಮತ್ತೆ ಕಿರಿಕ್ ಆರಂಭಿಸಿದೆ.

ಕೇಂದ್ರ ಸರಕಾರದ ಕೃಷಿ ಮಂತ್ರಾಲಯದ ಅಧೀನದಲ್ಲಿ ಇಂಡಿಯನ್‌ ಕೌನ್ಸಿಲ್‌ ಅಗ್ರಿಕಲ್ಚರ್‌ ರಿಸರ್ಚ್‌ ಎಂಬ ಸಂಸ್ಥೆ ಕಾರ್ಯಾಚರಿಸುತ್ತಿದೆ. ಇದರ ಕೆಳಗೆ ದೇಶದಲ್ಲಿ 140 ಅಂಗಸಂಸ್ಥೆಗಳು ಕೃಷಿ ಸಂಶೋಧನೆಯಲ್ಲಿ ತೊಡಗಿವೆ. ಈ ಪೈಕಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆಯೂ ಒಂದು. ಇದರ ಮುಖ್ಯ ಕಚೇರಿ ಕೇರಳ ರಾಜ್ಯದ ಕಾಸರಗೋಡಿನ ಕೂಡ್ಲು ಎಂಬಲ್ಲಿದೆ. ಇಲ್ಲಿ ತೋಟದ ಬೆಳೆಗಳಾದ ಅಡಿಕೆ, ತೆಂಗು ಕೊಕ್ಕೊ ಬಗ್ಗೆ ಸಂಶೋಧನೆ ಮತ್ತು ಉತ್ತಮ ತಳಿಗಳ ಸಂರಕ್ಷಣೆ ಮಾಡಲಾಗುತ್ತಿದೆ. ರೈತರಿಗೆ ಉತ್ತಮ ತಳಿಗಳ ಬೀಜ ಮತ್ತು ಸಸಿಗಳನ್ನು ವಿತರಿಸಲಾಗುತ್ತದೆ.

1972ರಲ್ಲಿ ಪುತ್ತೂರು ತಾಲೂಕಿನ ಬಿಳಿನೆಲೆ ಗ್ರಾಮದ ಕಿದುವಿನ ರಕ್ಷಿತಾರಣ್ಯದಲ್ಲಿ 300 ಎಕರೆ ಭೂಮಿಯನ್ನು ಅರಣ್ಯ ಇಲಾಖೆಯಿಂದ 30 ವರ್ಷಗಳ ಅವಧಿ ಲೀಸಿಗೆ ಪಡೆದು ಅಡಿಕೆ, ತೆಂಗು ಮತ್ತು ಕೊಕ್ಕೊ ಗಿಡಗಳನ್ನು ಬೆಳೆಸಿ ಸಂಶೋಧನ ಉಪಕೇಂದ್ರವನ್ನು ಸ್ಥಾಪಿಸಿದೆ. ಕೃಷಿಗೆ ಸಂಬಂಧಿಸಿ ವಿಜ್ಞಾನಿಗಳ ಸಂಶೋಧನೆಗೆ ಮಾಹಿತಿ ಹಾಗೂ ಕೃಷಿಕರಿಗೆ ಉತ್ತಮ ತಳಿಗಳನ್ನು ಒದಗಿಸಲಾಗುತ್ತಿದೆ.

Advertisement

ವಿಶ್ವದ ಐದು ತೆಂಗು ವಂಶಾಭಿವೃದ್ಧಿ ಬ್ಯಾಂಕ್‌ಗಳಲ್ಲಿ ಇದು ಸ್ಥಾನ ಪಡೆದಿದೆ. ಇಲ್ಲಿ ಸಂಕರ ತಳಿಗಳನ್ನು ಅಭಿವೃದ್ಧಿಪಡಿಸಿ ಸಸಿಗಳನ್ನು ಮಿತದರದಲ್ಲಿ ಒದಗಿಸುವುದರಿಂದ ದೇಶಾದ್ಯಂತ ಬೇಡಿಕೆಯಿದೆ. ಬೀಜ ಮತ್ತು ಗಿಡಗಳಿಂದಲೇ ವಾರ್ಷಿಕ 1.50 ಕೋಟಿ ರೂ. ಆದಾಯ ಬರುತ್ತಿದೆ. 15 ವರ್ಷಗಳ ಹಿಂದೆ ತೆಂಗಿನ 140 ಉತ್ತಮ ತಳಿಗಳನ್ನು ತಂದು, ಬೆಳೆಸಿ, ತೆಂಗಿನ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಮಾಡಲಾಗಿದೆ. ಇಲ್ಲಿ ಬೆಳೆಯುವ ಮಂಗಳ, ಮೋಹಿತ್‌ನಗರ, ಸುಮಂಗಲ, ಸ್ವರ್ಣಮಂಗಲ ಇತ್ಯಾದಿ ಅಡಿಕೆ ಬೀಜ ಮತ್ತು ಸಸಿಗಳಿಗೆ ಅಪಾರ ಬೇಡಿಕೆಯಿದೆ. ಕೇಂದ್ರದ 300 ಎಕ್ರೆ ಭೂಮಿಯ ಲೀಸ್‌ ಅವಧಿ 2000ನೇ ಇಸವಿಗೆ ಮುಗಿದಿದೆ. ಸುಪ್ರೀಂ ಕೋರ್ಟ್‌ನ ಆದೇಶದಂತೆ ಅರಣ್ಯ ಇಲಾಖೆ ಭೂಮಿ ಮರಳಿ ಪಡೆಯಲು ಮುಂದಾಗಿತ್ತು. ಜಾಗ ಮರಳಿ ನೀಡುವುದು ಅಥವಾ ಬದಲಾಗಿ 300 ಎಕರೆ ಖಾಲಿ ಜಾಗದಲ್ಲಿ ಅರಣ್ಯ ಬೆಳೆಸಲು ತಗಲುವ 12 ಕೋಟಿ ರೂ.ಗಳನ್ನು ಭರಿಸಿ ಮತ್ತೆ 30 ವರ್ಷಕ್ಕೆ ಲೀಸಿಗೆ ಪಡೆಯಲು ಅವಕಾಶ ಕಲ್ಪಿಸಿತ್ತು.

ಈಗ ಅರಣ್ಯ ಇಲಾಖೆ ಮತ್ತೆ ಮತ್ತೆ ನೋಟೀಸ್ ಮಾಡುವ ಮೂಲಕ ಒಂದು ಕಡೆ ಕಾಟ ನೀಡುತ್ತಿದ್ದರೆ ಮತ್ತೊಂದು ಕಡೆ ಸಚಿವರುಗಳಿಗೆ ಮನವಿ, ಎಲ್ಲವೂ ಸರಿಯಾಗುತ್ತದೆ ಎಂದು ಭರವಸೆ ನೀಡುತ್ತಾರೆ ಶಾಸಕರು, ಸಂಸದರು, ಸಚಿವರು…!.  ಯಾವುದು ಸರಿಯಾಗುತ್ತೆ ಎಂಬುದು ಕಾಲವೇ ನಿರ್ಧರಿಸಬೇಕಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಕೊಳೆರೋಗ | ಶೇ.95 ರಷ್ಟು ಕೃಷಿಕರ ತೋಟದಲ್ಲಿ ಅಡಿಕೆ ಕೊಳೆರೋಗ | ಸಮೀಕ್ಷಾ ವರದಿಯ ಮಾಹಿತಿ

ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ…

18 hours ago

ಸವಿರುಚಿ | ಹಲಸಿನ ಬೇಳೆ (ಹ ಬೀ) ಸೂಪ್‌

ಹಲಸಿನ ಬೇಳೆ ಸೂಪ್‌ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು…

22 hours ago

ಬದುಕು ಪುರಾಣ | ಬದುಕಿಗಾಸರೆ, ಕಾಮಧೇನು

ಮಗನಿಗೆ ತಂದೆ, ಮಗಳಿಗೆ ತಾಯಿ, ಸಿಬ್ಬಂದಿಗಳಿಗೆ ಸಂಸ್ಥೆಯು - ಕಾಮಧೇನು. ಕಾಮಿಸಿದ, ಇಚ್ಛಿಸಿದ…

23 hours ago

ಪ್ರೇಮ ವಿಚಾರದಲ್ಲಿ ಈ ರಾಶಿಯವರಿಗೆ ಭಾವನಾತ್ಮಕ ಏರಿಳಿತ

ಪ್ರೀತಿ ಎಂದರೆ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದು. ಆದರೆ ಎಲ್ಲರಿಗೂ ಪ್ರೀತಿಯಲ್ಲಿ ಒಂದೇ…

23 hours ago

ತಾಳಮದ್ದಳೆಯಲ್ಲಿ ಪರೋಕ್ಷ ವ್ಯಂಗ್ಯವಾಡಿ, ಈಗ ಅದೇ ಮಠದಲ್ಲಿ ಪ್ರತ್ಯಕ್ಷ…!

ಕಾಸರಗೋಡು ಮೂಲದ ಸ್ವಾಮೀಜಿಯೊಬ್ಬರ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಈಚೆಗೆ ನಡೆದ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮದಲ್ಲಿ…

1 day ago

ಕಲುಷಿತ ಭಾಷೆಯ ಶುದ್ಧೀಕರಣಕ್ಕೆ ಆದ್ಯತೆ: ರಾಘವೇಶ್ವರ ಶ್ರೀ

ನಾಲಿಗೆ ಶುದ್ಧವಾಗಿದ್ದರೆ ಮಾತ್ರ ನಮ್ಮ ವ್ಯಕ್ತಿತ್ವವೂ ಶುದ್ಧವಾಗಿರಲು ಸಾಧ್ಯ; ಆದ್ದರಿಂದ ಕಲುಷಿತಗೊಂಡಿರುವ ನಮ್ಮ…

1 day ago