ಸುಳ್ಯ: ಮಳೆಯೆಂಬುವುದು ನೀರಿನ ಪ್ರಮುಖ ಮೂಲ. ಮಳೆಗಾಲದ ನೀರು ವ್ಯರ್ಥವಾಗದಂತೆ ಅದನ್ನು ಭೂಮಿಗೆ ಇಂಗಿಸಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸಬಹುದು. ಪ್ರಸ್ತುತವಾಗಿ ಅಂತರ್ಜಲದ ಮಟ್ಟವು ಕುಸಿಯುತ್ತಿದ್ದು, ಇದನ್ನು ಹೆಚ್ಚಿಸಲು ಮಳೆನೀರಿನ ಕೊಯ್ಲು ಅತ್ಯವಶ್ಯಕವಾಗಿದೆ ಎಂದು ನೆಹರು ಮೆಮೊರಿಯಲ್ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ನಡೆದ “ಮಳೆನೀರಿನ ಕೊಯ್ಲು ಇಂದಿನ ಅವಶ್ಯಕತೆʼʼ ಕಾರ್ಯಕ್ರಮದಲ್ಲಿ ಎಂ. ಬಾಲಚಂದ್ರಗೌಡರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಾಯಿರಾಮ್ ಅವರು ಆಗಮಿಸಿದ್ದರು. ಇವರು ಮಳೆನೀರನ್ನು ಇಂಗಿಸುವ ವಿವಿಧ ವಿಧಾನಗಳನ್ನು ತಿಳಿಸುವುದರ ಜೊತೆಗೆ ಕೆ.ವಿ.ಜಿ. ಕ್ಯಾಂಪಸ್ ನಲ್ಲಿ ಅಳವಡಿಸಲಾಗಿರುವ ಮಳೆನೀರಿನ ಘಟಕಗಳನ್ನು ವಿಡಿಯೋ ಮೂಲಕ ಮನಮುಟ್ಟುವಂತೆ ವಿವರಿಸಿದರು.
ಎನ್.ಎಸ್.ಎಸ್. ಘಟಕಾಧಿಕಾರಿಯಾದ ಶ್ರೀ ಸಂಜೀವ ಕುದ್ಪಾಜೆರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್.ಎಸ್.ಎಸ್. ಘಟಕಾಧಿಕಾರಿಯಾದ ಕು.ಪಾವನ ಬಿ. ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅನುಷ ಎಂ. ವಂದಿಸಿದರು. ಪ್ರೇಕ್ಷಾ ಬಿ.ಎನ್. ನಿರೂಪಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…