Advertisement
ಅನುಕ್ರಮ

ಮಳೆಯದೊಂದು ಕಥೆ

Share
ಭುವಿಯಲ್ಲಿ ಸೂರ್ಯನ ತಾಪ ಹೆಚ್ಚಾಯಿತು
ನೀರು ಕಾದು ಆವಿಯಾಯ್ತು
ಮಳೆಗಾಗಿ ಮನುಜ ಬೇಡಿ ನಿಂತ
ಮನುಜನ ಬೇಡಿಕೆಗೆ ಮಣಿಯಲಿಲ್ಲ ವರುಣ…..
ಕಾಡನ್ನು ಕಡಿದ ಭೋಗ ಜೀವಿ
ಬಿಸಿಲನ್ನು ಕಂಡು ಶಪಿಸಿದ
ಭುವಿ ಕಾದು ಕೆಂಪಾಯ್ತು
ಹಸಿರೆಲ್ಲ ಒಣಗಿ ಬರಡಾಯ್ತು….
ನೀರಿಗಾಗಿ ಭೂತಾಯಿಯ ಒಡಲನ್ನೇ ಬಗೆದ
ಅಲ್ಲೂ ನೀರ ಪಸೆ ಕಾಣದಾದಾಗ ಭೂಮಿ ತಾಯಿ ಬಂಜೆಯೆಂದ….
ದಾರಿಕಾಣದಾದಾಗ ನರ ದೇವನ ಮೊರೆ ಹೋದ
ಕೊನೆಗೂ ಮಣಿದ ವರುಣ ಧರೆಗೆ ಅವತರಿಸಿದ
ಬಿಡದೆ ನೀರ ಹೊಳೆಯನ್ನೇ ಹರಿಸಿದ
ಸಾಕಿನ್ನು ಹೋಗೆಂದ ಬುದ್ದಿವಂತ
ಹೋಗಲೊಲ್ಲೆ ಎಂದಾಗ ಶಪಿಸುತ್ತಾ ಕುಳಿತ….
ಅವಮಾನ ಸಹಿಸದ ವರುಣ
ಮತ್ತೆ ಗುಡಿಯ ಸೇರಿದ
ಮತ್ತೆ ಭುವಿಯಲ್ಲಿ ಧಗೆಯೇರಿತು
ಮನುಜನದು ಮತ್ತದೇ ಚಾಳಿ ಶುರುವಾಯಿತು….
ಮನುಜನ ವರ್ತನೆ ಬದಲಾಗಲೇ ಇಲ್ಲ…
ಅದಕ್ಕಾಗಿ ಪ್ರಕೃತಿ ತಾನಾಗಿಯೇ ಬದಲಾಗುತ್ತಿದೆ…
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಆಘಾತಕಾರಿ ವರದಿ- ಮೇ-ಜೂನ್‌ನಲ್ಲಿ ಭಾರತದ 10 ಮಕ್ಕಳಲ್ಲಿ 7 ಮಂದಿ ಶಾಲೆ ತಪ್ಪಿಸಿದರು..!

ಮೇ-ಜೂನ್ ತಿಂಗಳಲ್ಲಿ ತೀವ್ರ ಬಿಸಿಲಿನ ಕಾರಣದಿಂದ ಭಾರತದ ಸುಮಾರು 70% ಮಕ್ಕಳು ಶಾಲೆ…

6 hours ago

ಹವಾಮಾನ ವರದಿ | 09-07-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ..! ಜುಲೈ 11 ರಿಂದ ಮಳೆ ಮತ್ತಷ್ಟು ಇಳಿಕೆ, ಬಿಸಿಲಿನ ಅವಧಿ ಹೆಚ್ಚಳ ಸಾಧ್ಯ

ರಾಜ್ಯದಲ್ಲಿ ಮುಂಗಾರು ದುರ್ಬಲವಾಗುತ್ತಿದ್ದು, ಜುಲೈ 11ರಿಂದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ…

7 hours ago

ಜುಲೈ ಮಳೆಯಿಂದ ದೇಶಕ್ಕೆ ನೆಮ್ಮದಿ…! ಮಳೆ ಕೊರತೆ 12%ಕ್ಕೆ ಇಳಿಕೆ

ಜುಲೈ ಮೊದಲ ವಾರದ ಉತ್ತಮ ಮಳೆಯಿಂದ ದೇಶದ ಮಳೆ ಕೊರತೆ 12%ಕ್ಕೆ ಇಳಿದಿದೆ.…

8 hours ago

ಇಂಧನಕ್ಕೂ ರೈತನೇ ಆಧಾರ…! ಇಥೆನಾಲ್‌ ಯೋಜನೆಯಿಂದ ರೈತರಿಗೆ ₹1.6 ಲಕ್ಷ ಕೋಟಿ ಹೆಚ್ಚುವರಿ ಆದಾಯ

ಇಥೆನಾಲ್‌ ಮಿಶ್ರಣ ಯೋಜನೆಯಿಂದ ಕಳೆದ ಹತ್ತು ವರ್ಷಗಳಲ್ಲಿ ರೈತರಿಗೆ ₹1.6 ಲಕ್ಷ ಕೋಟಿಗೂ…

8 hours ago

ಅಮೆರಿಕ-ಇರಾನ್ ಯುದ್ಧ ಮತ್ತೆ ಭುಗಿಲೇ..? ಕದನ ವಿರಾಮ ಅಂತ್ಯ ಎಂದ ಟ್ರಂಪ್ – ಹೊಸ ದಾಳಿಗಳಿಂದ ಜಾಗತಿಕ ಆತಂಕ

ಅಮೆರಿಕ-ಇರಾನ್ ನಡುವಿನ ಕದನ ವಿರಾಮ ಮತ್ತೆ ಮುರಿಯುವ ಹಂತಕ್ಕೆ ತಲುಪಿದ್ದು, ಹೊಸ ಅಮೆರಿಕನ್…

8 hours ago

ಮಳೆಗಾಲದ ಪರಿಸರದ ಸೊಬಗು ಜಲವರ್ಣದಲ್ಲಿ ಸೆರೆ – ಗುತ್ತಿಗಾರಿನಲ್ಲಿ ಮೂರು ದಿನಗಳ ‘ಮಾನ್ಸೂನ್ ಕಲರ್ಸ್’ ಚಿತ್ರಕಲಾ ಶಿಬಿರ

ಗುತ್ತಿಗಾರಿನಲ್ಲಿ ‘ಮಾನ್ಸೂನ್ ಕಲರ್ಸ್’ ಜಲವರ್ಣ ಚಿತ್ರಕಲಾ ಶಿಬಿರ ನಡೆಯುತ್ತಿದೆ. ಮಲೆನಾಡಿನ ನಿಸರ್ಗ ಸೌಂದರ್ಯವನ್ನು…

22 hours ago