ಬೆಳ್ಳಾರೆ: ಸುಳ್ಯ,ಕಡಬ ಮತ್ತು ಭಾಗಶ: ಪುತ್ತೂರು ತಾಲೂಕುಗಳ ವಿದ್ಯುತ್ ಸರಬರಾಜು ಸಮಸ್ಯೆಗೆ ಏಕೈಕ ಪರಿಹಾರವಾದ ಮಾಡಾವು 110 ಕೆ.ವಿ. ವಿದ್ಯುತ್ ಸ್ಟೇಷನ್ ನ ಕಾಮಗಾರಿಗಳು ಅಂತಿಮವಾಗಿದೆ. ಲೈನ್ ಎಳೆಯುವ ಕಾರ್ಯಗಳು ಶನಿವಾರ ಸಂಜೆ ಪೂರ್ತಿಯಾಗಿದ್ದು ವಿದ್ಯುತ್ ವಿತರಣಾ ವ್ಯವಸ್ಥೆಯಷ್ಟೇ ಬಾಕಿ ಉಳಿದಿದೆ. ವಿತರಣಾ ವ್ಯವಸ್ಥೆಯ ಕಾಮಗಾರಿ ಕೂಡಾ ಆರಂಭವಾಗಿದೆ. ಕೆಲವೇ ದಿನದಲ್ಲಿ ವಿದ್ಯುತ್ ವಿತರಣೆಗೆ ಸಿದ್ದವಾಗಲಿದೆ. ಈ ಮೂಲಕ 14 ವರ್ಷದ ಯೋಜನೆಯೊಂದು ಪೂರ್ತಿಯಾದಂತಾಗಿದೆ.
ಸುಳ್ಯ,ಕಡಬ ಮತ್ತು ಭಾಗಶ: ಪುತ್ತೂರು ತಾಲೂಕುಗಳ ವಿದ್ಯುತ್ ಸರಬರಾಜು ಸಮಸ್ಯೆಗೆ ಏಕೈಕ ಪರಿಹಾರವೆಂದು ಹೇಳಲಾದ ಪುತ್ತೂರು ತಾಲೂಕು ಮಾಡಾವಿನಲ್ಲಿ ಪ್ರಸ್ತಾವಿತ 110 ಕೆ.ವಿ. ವಿದ್ಯುತ್ ಕೇಂದ್ರ 14 ವರ್ಷದ ಹಿಂದೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕೈಗೆತ್ತಿಕೊಂಡಿದ್ದರೂ ಹತ್ತು ಹಲವು ಅನುಮತಿ ಸಿಗದೆ, ವಿವಾದಗಳು, ಕೋರ್ಟ್ ಕೇಸುಗಳು, ಇಲಾಖಾಧಿಕಾರಿಗಳ ಅಸಡ್ಡೆ , ಫಾಲೋಅಪ್ ಕೊರತೆ ಇತ್ಯಾದಿಗಳಿಂದ
ನೆನೆಗುದಿಗೆಯಲ್ಲಿತ್ತು. ಇದೀಗ ಈ ಕಾಮಗಾರಿ ಮುಗಿದಿದೆ. ಜನತೆಗೆ ವಿದ್ಯುತ್ ವಿಚಾರದಲ್ಲಿ ಕೊಂಚ ನೆಮ್ಮದಿ ಸಿಗಲಿದೆ.
ಅನೇಕ ವರ್ಷಗಳಾದರೂ ವಿದ್ಯುತ್ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಹಾಗೂ ಯಾವೊಬ್ಬ ನಾಯಕರೂ ಈ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಹಾಗೂ ವರ್ಷದಿಂದ ವರ್ಷಕ್ಕೆ ವಿದ್ಯುತ್ ಪರಿಸ್ಥಿತಿ ಹದಗೆಡುತ್ತಿರುವುದು , ಕೃಷಿಕರ ಸಂಕಷ್ಟ ಗಮನಿಸಿ ವಿದ್ಯುತ್ ಬಳಕೆದಾರರು ಕ್ರಿಯಾ ಸಮಿತಿ ಫಾಲೋಅಪ್ ಗೆ ಇಳಿದರು. ಬಳಿಕ ಅರಣ್ಯ ಇಲಾಖೆ ಇತ್ಯಾದಿ ಅನುಮತಿ ದೊರಕಿಸಿಕೊಟ್ಟುದಲ್ಲದೆ ಲೈನ್ ವಿಚಾರವಾಗಿ ಆರ್ಯಾಪು, ಕೆಯ್ಯೂರು, ಕುಂಜೂರು ಪಂಜ ಹಲವು ಸ್ಥಳಗಳಲ್ಲಿ ಇದ್ದ ತಕರಾರು ವಿವಾದಗಳನ್ನು ಸಮಿತಿ ಮಾತುಕತೆಯಿಂದ ಪರಿಹರಿಸಿ ಹಾಲಿ ಸ್ಟೇಷನ್ ಕಾಮಗಾರಿ ಸಂಪೂರ್ಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನೆಟ್ಲಮುಡ್ನೂರುನಿಂದ ಮಾಡಾವಿಗೆ 110 ಲೈನ್ ಕಾಮಗಾರಿ ಕೂಡಾ ಈಗ ಸಂಪೂರ್ಣವಾಗಿರುತ್ತದೆ. ಇನ್ನೀಗ ನಿರಾಕ್ಷೇಪಣಾ ಪತ್ರ ದೊರಕಿದ ಕೂಡಲೇ ವಿದ್ಯುತ್ ಹಾಯಿಸಲ್ಪಡುತ್ತದೆ.
ವಿತರಣ ವ್ಯವಸ್ಥೆಯ ಕಾಮಗಾರಿಗಳು ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪೆನಿ ನಿಯಮಿತ ಇಲಾಖೆಗೆ ಸಂಬಂಧ ಪಟ್ಟದ್ದಾಗಿದ್ದು ಆ ಕುರಿತು ಟೆಂಡರುಗಳ ಮೇಲೆ ಟೆಂಡರುಗಳು ಆಗುತ್ತಾ ನೆನೆಗುದಿಗೆಯಲ್ಲಿರುವುದನ್ನು ಕಂಡ ಸಮಿತಿ ಮೆಸ್ಕಾಂ ಜೊತೆ ಹಕ್ಕೊತ್ತಾಯ ನಡೆಸಿದಂತೆ ವಿಶೇಷವಾದ ನೇರ ಆದೇಶದ ಮೇರೆಗೆ ಈಗ ಕಾಮಗಾರಿ ಆರಂಭವಾಗಿ ಸಾಮಾಗ್ರಿಗಳು ಸ್ಥಳಕ್ಕೆ ತಲುಪಿದ್ದು ಇನ್ನುವಾರದೊಳಗೆ ಪೂರ್ಣವಾಗಲಿದೆ.
ವಿದ್ಯುತ್ ಬಳಕೆದಾರರು ಕ್ರಿಯಾ ಸಮಿತಿ ವತಿಯಿಂದ ಅಭಿನಂದನೆ :
ವಿದ್ಯುತ್ ಬಳಕೆದಾರರು ಕ್ರಿಯಾ ಸಮಿತಿ ಆಗ್ರಹಿಸಿದಂತೆ ಮಾಡಾವಿನಲ್ಲಿ ಪ್ರಥಮವಾಗಿ ವಿಶೇಷ ತರಹದ ಇವಾಕ್ಯುವೇಶನ್ ಭೂಗತ ಲೈನ್ ಮೂಲಕ ಬೆಳ್ಳಾರೆ ಮತ್ತು ಕುಂಬ್ರ ಬದಿಗೆ ಪ್ರತ್ಯೇಕ ಪ್ರತ್ಯೇಕ ಸಂಪರ್ಕವೇರ್ಪಡಲಿದ್ದು ಇದರಿಂದ ಲೈನ್ ಭಾಧಿತವಾಗುವುದು ಅತ್ಯಂತ ಕಡಿಮೆಯಾಗುತ್ತದೆ. ಸಮಿತಿಯ ಕೋರಿಕೆಯಂತೆ ತುರ್ತು ಕ್ರಮ ಕೈಗೊಂಡು ನೇರ ಆದೇಶ ನೀಡಿದ ಮೆಸ್ಕಾಂ ಕಾರ್ಯನಿರ್ವಾಹಕ ನಿರ್ದೇಶಕಿ ಸ್ನೇಹಲ್ ರಾಯಮನೆ, ಅಧೀಕ್ಷಕ ಅಭಿಯಂತರ ಮಂಜಪ್ಪ ಮತ್ತು ಕಾರ್ಯನಿರ್ವಾಹಕ ಅಭಿಯಂತರ ನರಸಿಂಹ ಇವರಿಗೆ ಸಮಿತಿ ಪರವಾಗಿ ಸಂಚಾಲಕ ಜಯಪ್ರಸಾದ್ ಜೋಶಿ ಬೆಳ್ಳಾರೆ ಇವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…
ತಮಿಳುನಾಡು ಕರಾವಳಿ ಸಮೀಪ ಉಂಟಾಗಿರುವ ವಾಯುಭಾರ ಕುಸಿತವು ಆಂದ್ರಾ ಕರಾವಳಿ ದಾಟಿ ಉತ್ತರಕ್ಕೆ…