ಸುಳ್ಯ:ಸುಳ್ಯ ತಾಲೂಕು ಅಜ್ಜಾವರ ಮಾವಿನಪಳ್ಳ ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಪೂರ್ಣಗೊಳ್ಳುತ್ತಿದ್ದು ಬ್ರಹ್ಮಕಲಶೋತ್ಸವದ ತಯಾರಿಯಲ್ಲಿದೆ.
ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ ವತಿಯಿಂದ ಬಯಂಬು ಭಾಸ್ಕರ್ ರಾವ್ ಇವರ ಅಧ್ಯಕ್ಷತೆಯಲ್ಲಿ ಭಕ್ತರ ಸಭೆ ನಡೆಯಿತು. ಸಭೆಯಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಬಗ್ಗೆ ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಬ್ರಹ್ಮಕಲಶೋತ್ಸವ ಸಮಿತಿ ರಚಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಎಸ್. ಅಂಗಾರ, ಶಿವರಾವ್ ಬಯಂಬು, ಭಾಸ್ಕರ್ ರಾವ್ ಬಯಂಬು, ಅಧ್ಯಕ್ಷರಾಗಿ ಸುರೇಶ್ ಕಣೆಮರಡ್ಕ, ಕಾರ್ಯಾಧ್ಯಕ್ಷರಾಗಿ ರಾಜೇಶ್ ಮೇನಾಲ, ಪ್ರಧಾನ ಕಾರ್ಯದರ್ಶಿಯಾಗಿ ದಿವಾಕರ ಎ. ಎಂ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಡಾ.ಕೆ.ವಿ ಚಿಂದಾನಂದ, ಡಾ.ಕೆ.ವಿ ರೇಣುಕಾಪ್ರಸಾದ್, ಪುಷ್ಪಾವತಿ ಬಾಳಿಲ, ಬೀನಾ ಕರುಣಾಕರ, ಸುಭೋದ್ ಶೆಟ್ಟಿ ಮೇನಾಲ, ಧನಂಜಯ ಅಡ್ಪoಗಾಯ, ಕರುಣಾಕರ ಅಡ್ಪಂಗಾಯ, ಮಾವಜಿ ಮುದ್ದಪ್ಪ ಗೌಡ, ರವಿಪ್ರಕಾಶ್ ಅಟ್ಲೂರು, ಸುಧೀರ್ ರೈ ಮೇನಾಲ, ಶಿವಕೃಷ್ಣ ಸೋಮಯಾಜಿ, ವೆಂಕಟ್ರಮಣ ಮುಳ್ಯ, ಶಿವಪ್ರಕಾಶ್ ಅಡ್ಪಂಗಾಯ, ರಾಧಾಕೃಷ್ಣ ರಾವ್, ಕರುಣಾಕರ ಕರ್ಲಪ್ಪಾಡಿ, ರಾಮಣ್ಣ ಪೂಜಾರಿ, ಸಂಚಾಲಕರಾಗಿ ನವೀನ್ ರೈ ಮೇನಾಲ, ಅಜಿತ್ ಬನ್ನೂರು, ಕೋಶಾಧಿಕಾರಿಯಾಗಿ ವಾಸುದೇವ ಆಚಾರ್ಯ ಉಪಾಧ್ಯಕ್ಷರುಗಳಾಗಿ ಮಹೇಶ್ ಕುಮಾರ್ ಮೇನಾಲ, ಸುಬ್ಬ ಪಾಟಾಳಿ, ಶಶಿಧರ ಶಿರಾಜೆ, ನಾರಾಯಣ ಬಂಟರಬೈಲು, ಮನ್ಮಥ ಎ ಎಸ್, ಸವೇರಾ ರೈ ಬೆಲ್ಯ, ಸುಂದರಿ ನೆಹರುನಗರ ಗೀತಾ ಮಾವಿನಪಳ್ಳ, ಲಕ್ಷ್ಮೀಕಾಂತ್ ಹಂಚಿನಮನೆ, ಬಾಲಚಂದ್ರ ಮೂಡೂರು, ಸುಂದರ ನಾಯ್ಕ ದೊಡ್ಡೇರಿ, ಜಗನ್ನಾಥ ರೈ ಪಡ್ದಿಬನ, ವೆಂಕಟ್ರಮಣ ಅತ್ಯಾಡಿ, ಸೀತಾರಾಮ ಶಾಂತಿಮಜಲು, ಆಯ್ಕೆಗೊಂಡರು .
ಕಾರ್ಯದರ್ಶಿಗಳಾಗಿ ವಿಕ್ರಂ ಎ.ವಿ, ಸೀತಾರಾಮ್ ಕರ್ಲಪ್ಪಾಡಿ, ಶಿವಪ್ರಸಾದ್ ಉಗ್ರಾಣಿಮನೆ, ರವೀಶ್ ರಾವ್ ಮಾವಿನಪಳ್ಳ, ಅನಿಲ್ ರಾಜ್ ಕರ್ಲಪ್ಪಾಡಿ, ಸಾವಿತ್ರಿ ಜಯನ್, ರಮೇಶ್ ಬಯಂಬು, ಸುಂದರ ಆಡ್ಪಂಗಾಯ, ಮಹಾಬಲೇಶ್ವರ ಗೋರಡ್ಕ, ವೆಂಕಟಕೃಷ್ಣ ಬಯಂಬು, ಯತೀಶ್ ಪಡ್ಡಂಬೈಲು, ಗುರುರಾಜ್ ಅಜ್ಜಾವರ, ತೀರ್ಥರಾಮ ಮೂಡೂರು, ಜಯಂತಿ ಜನಾರ್ಧನ, ಸವಿತಾ ಬಯಂಬು, ಕಿಟ್ಟಣ್ಣ ರೈ ಮೇನಾಲ, ದಯಾಳನ್ ಮೇದಿನಡ್ಕ, ಮೋನಪ್ಪ ಗೌಡ ಕೂಕ್ಲುಮಜಲು, ವೇದಾವತಿ ಕರ್ಲಪ್ಪಾಡಿ, ಲೀಲಾ ಮಾರ್ಗ ಇವರು ಆಯ್ಕೆಗೊಂಡರು.
ಮಾರ್ಚ್ ವೇಳೆಗೆ ಬ್ರಹ್ಮಕಲಶ: ಮುಂದಿನ ಮಾರ್ಚ್ ತಿಂಗಳೊಳಗೆ ದೈವಜ್ಞರ ಸಲಹೆಯಂತೆ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಕಲಶ ಕಾರ್ಯ ನಡೆಸಲು ತೀರ್ಮಾನಿಸಯಾಯಿತು ಆಡಳಿತ ಮಂಡಳಿ ಅಧ್ಯಕ್ಷ ಚನಿಯ ಕಲ್ತಡ್ಕ, ಜೀರ್ಣೋದ್ಧಾರ, ಸಮಿತಿ ಅಧ್ಯಕ್ಷ ಶೀನಪ್ಪ ಬಯಂಬು ಉಪಸ್ಥಿತರಿದ್ದರು. ರಾಘವ ನೆಹರೂನಗರ ಕಾರ್ಯಕ್ರಮ ನಿರೂಪಿಸಿದರು.
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …