ಮೂರನೇ ಮಹಡಿಗೆ ಏರಿ ಪೇಚಿಗೆ ಸಿಲುಕಿದ ಶ್ವಾನ… ಅಗ್ನಿಶಾಮಕ ದಳದಿಂದ ರಕ್ಷಣೆ…!

June 24, 2019
3:31 PM

ಸುಳ್ಯ: ಒಂದೊಂದೇ ಮೆಟ್ಟಿಲು ಏರಿ ಕಟ್ಟಡದ ಮೂರನೇ ಮಹಡಿ ತಲುಪಿದ ಶ್ವಾನವೊಂದು ಹಿಂತಿರುಗಿ ಬರಲಾಗದೆ  ಪೇಚಿಗೆ ಸಿಲುಕಿ ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ನಡೆಸಿ ಶ್ವಾನವನ್ನು ಕೆಳಗಿಳಿಸಿದ ಘಟನೆ ಸುಳ್ಯ ನಗರದ ಕುರಜಿಭಾಗ್ ನಲ್ಲಿ ನಡೆದಿದೆ.

Advertisement
Advertisement

ಭಾನುವಾರ ಮಧ್ಯಾಹ್ನದ ವೇಳೆಗೆ ಶ್ವಾನವು ಕಟ್ಟಡವೊಂದರ ಮೂರನೇ ಮಹಡಿಗೆ ಏರಿದೆ. ಆದರೆ ಹೋದ ದಾರಿಯಲ್ಲಿ ಹಿಂತಿರುಗಿ ಬರಲು ಆಗದೆ ಅಲ್ಲೇ ಸಿಲುಕಿಕೊಂಡಿತು. ಕಟ್ಟಡದ ಕೋಣೆಗಳಲ್ಲಿ ವಾಸವಿದ್ದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಶ್ವಾನವನ್ನು ಓಡಿಸಲು ಮತ್ತು ಕೆಳಗಿಳಿಸಲು ಎಲ್ಲಾ ವಿದ್ಯೆಯನ್ನು ಪ್ರಯೋಗಿಸಿದರೂ ಸಾಧ್ಯವಾಗಲಿಲ್ಲ. ಈ ಮಧ್ಯೆ ಶ್ವಾನವು ಓಡಿ ತಪ್ಪಿಸಲು ಪ್ರಯತ್ನಪಟ್ಟಾಗ ಪಲ್ಟಿ ಹೊಡೆದು ಎರಡನೇ ಮಹಡಿಯ ಗೋಡೆಯ ಬದಿಯಲ್ಲಿ ಸಿಲುಕಿಕೊಂಡಿತು. ಕಟ್ಟದಲ್ಲಿದ್ದ ವಿದ್ಯಾರ್ಥಿಗಳು ಆಹಾರ ಹಾಕಿದರು ಅದನ್ನು ತಿರಸ್ಕರಿಸಿದ ಶ್ವಾನವು ಭಯಗೊಂಡು ಜೋರಾಗಿ ಬೊಗಳುತ್ತಾ‌ ಕೆಲವೊಮ್ಮೆ ಕಿರುಚಿ ನಿಂತಲ್ಲೇ ತಿರುಗುತ್ತಿತ್ತು. ಯಾರನ್ನೂ ಹತ್ತಿರ ಹೋಗಲೂ ಬಿಡುತ್ತಿರಲಿಲ್ಲ. ಬ್ರೆಡ್, ಮೀನು, ಅನ್ನ ಹಾಕಿ ನಾಯಿಯನ್ನು ಹೊರಗೆ ಸೆಳೆಯುವ ಪ್ರಯತ್ನ ನಡೆಸಿದರೂ ಅದು ಕೂಡ ವಿಫಲವಾಯಿತು. ಒಟ್ಟಿನಲ್ಲಿ ಮೂರು ನಾಲ್ಕು ಗಂಟೆಯಿಂದ ಶ್ವಾನ ಕಟ್ಟಡದಲ್ಲಿದ್ದವರಿಗೆ ತಲೆ ನೋವು ಸೃಷ್ಠಿಸಿತು.  ಶ್ವಾನದ ಮೇಲೆ ಅಲ್ಲಿದ್ದವರಿಗೆ ಪ್ರೀತಿ ಹೆಚ್ಚಾಯಿತು.  ಏನು ಮಾಡಬಹುದು ಎಂಬುದರ ಬಗ್ಗೆ   ಗಹನವಾದ ಚರ್ಚೆ ನಡೆದು ಕೊನೆಗೆ ಅಗ್ನಿಶಾಮಕದವರಿಗೆ ಸುದ್ದಿ ಮುಟ್ಟಿಸಲಾಯಿತು. ಅಗ್ನಿಶಾಮಕದ ವಾಹನವೇ ಬಂದು ಕಾರ್ಯಾಚರಣೆ ನಡೆಸಿ ಶ್ವಾನವನ್ನು ಕೆಳಗಿಸಲಾಯಿತು. ಕೋಲಿನ ಸಹಾಯದಿಂದ ಶ್ವಾನದ ಕುತ್ತಿಗೆಗೆ ಬಳ್ಳಿ ಹಾಕಿ ಕೆಳಗೆ ಇಳಿಸಲಾಯಿತು. ಮೇಲಿಂದ ಕೆಳಗೆ ಇಳಿದ ಕೂಡಲೇ ಬದುಕಿದೆ ಬಡ ಜೀವ ಎಂದು ಶ್ಚಾನ ಓಟ ಕಿತ್ತಿತ್ತು. ನಾಯಿಯ ನಾಗಲೋಟ ನೋಡಿದಾಗ ನೆರೆದವರಲ್ಲಿ ನಗು ತರಿಸಿತು.‌..!

ಅಲ್ಲಿನ ಜನರ ಶ್ವಾನ ಪ್ರೀತಿ ಮೆಚ್ಚುಗೆಗೆ ಪಾತ್ರವಾಯಿತು. ಮನುಷ್ಯ ಮಾತ್ರವಲ್ಲ ಪ್ರಾಣಿಯೂ ಈ ನೆಲದಲ್ಲಿ ಬದುಕುಬೇಕು. ಮನುಷ್ಯ ಕಾಲೆಳೆದರೆ, ಮತ್ಸರ ಕಾರಿದರೆ , ವಿಶ್ವಾಸಾರ್ಹತೆಯ ನಾಯಿ ಎಲ್ಲರಿಗೂ ಯಾವಾಗಲೂ ಪ್ರೀತಿಯೇ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?
May 25, 2025
9:29 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |
May 25, 2025
9:07 AM
by: ದ ರೂರಲ್ ಮಿರರ್.ಕಾಂ
ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ
May 25, 2025
6:13 AM
by: The Rural Mirror ಸುದ್ದಿಜಾಲ
ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ
May 25, 2025
6:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group