ನವದೆಹಲಿ: ಅರಬ್ಬೀ ಸಮುದ್ರದಲ್ಲಿ ಉಂಟಾದ ಈ ಬಾರಿಯ ಚಂಡಮಾರುತ ನಿಸರ್ಗ ಮಹಾರಾಷ್ಟ್ರದ ಮುಂಬೈ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿ ಅಪಾಯದಿಂದ ಪಾರಾಗಿದೆ. ಆದರೆ ಈ ಚಂಡಮಾರುತ ಇನ್ನೊಂದು ಶುಭ ಸುದ್ದಿಯನ್ನೂ ನೀಡಿದೆ. ಇದು ಪರಿಶುದ್ಧವಾದ ಗಾಳಿ. ಇದಕ್ಕೆ ಕಾರಣ ಲಾಕ್ಡೌನ್. ಅಂದರೆ ಪರಿಸರ ಮಾಲಿನ್ಯದಿಂದ ಬಹುಪಾಲು ಮುಕ್ತಿ.
ಪರಿಸರ ಮಾಲಿನ್ಯ ಅಥವಾ ಗಾಳಿಯ ಶುದ್ಧತೆಯನ್ನು ಆಗಾಗ ಪರಿಶೀಲನೆ ಮಾಡಲಾಗುತ್ತದೆ. ಆದರೆ ಪ್ರತೀ ಬಾರಿ ಚಂಡಮಾರುತ ಹಾಗೂ ಭಾರೀ ಗಾಳಿ ಬಂದಾಗ ವಾಯು ಶುದ್ಧತೆಯನ್ನು ಅಥವಾ ವಾಯು ಗುಣಮಟ್ಟದ ಸೂಚ್ಯಂಕ (AQI) ಪರಿಶೀಲನೆ ಮಾಡಲಾಗುತ್ತದೆ. ಈ ಬಾರಿಯ ನಿಸರ್ಗ ಚಂಡಮಾರುತದ ಬಳಿಕ ಪರಿಶೀಲನೆ ಮಾಡಿದಾಗ ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) 22 ಕ್ಕೆ ದಾಖಲಾಗಿದ್ದು ಇದು ಇತ್ತೀಚೆಗಿನ ವರದಿಯ ಪ್ರಕಾರ ಗಾಳಿಯ ಶುದ್ಧತೆ ಉತ್ತಮ ಗುಣಮಟ್ಟದ ವ್ಯಾಪ್ತಿಗೆ ಒಳಪಟ್ಟಿದೆ ಹಾಗೂ ಇದು ಈ ವರ್ಷದ ಅತ್ಯಂತ ಉತ್ತಮ ದಾಖಲಾತಿ ಎಂದು ಸಿಸ್ಟಂ ಆಫ್ ಏರ್ ಕ್ವಾಲಿಟಿ ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (SAFAR) ಹೇಳಿದೆ.
ಸ್ವಚ್ಛವಾದ ಗಾಳಿಯು ಈಗ ಸಿಗುವಂತಾಗಿದೆ. ವಾಯು ಮಾಲಿನ್ಯದ ಪ್ರಮಾಣ ಕಡಿಮೆಯಾಗಿರುವುದು ಇದರ ಸಂಕೇತವಾಗಿದೆ. ವಾಯುಸಾಂದ್ರತೆ ಈ ಹಿಂದೆ 60 ಮೈಕ್ರೊಗ್ರಾಂಗಳಷ್ಟುಇದ್ದರೆ ಈಗ ತೀರಾ ಇಳಿಕೆಯಾಗಿದ್ದು 22 ಮೈಕ್ರೊಗ್ರಾಂಗಳಷ್ಟು ದಾಖಲಾಗಿದೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.