Advertisement
ಸುದ್ದಿಗಳು

ಕೊರೊನಾ ಏರಿಕೆಯ ಸುದ್ದಿಗಿಂತಲೂ ಜಾಗೃತಿಯ ಸುದ್ದಿ ಅಗತ್ಯವಿದೆ | ಬಸ್ಸು-ವ್ಯಾನ್ ಗಳಲ್ಲಿ ಬೇಕಿನ್ನೂ ಎಚ್ಚರ |

Share

ಕೊರೊನಾ ಏರಿಕೆಯ ಸುದ್ದಿ ದಿನವೂ ಕೇಳುತ್ತಲೇ….  ಆತಂಕವಾಗುತ್ತಲೇ ಇರುವ ಕಾಲ ಇನ್ನು ದೂರ ಮಾಡಬೇಕಿದೆ. ದೇಶದಲ್ಲಿ , ರಾಜ್ಯದಲ್ಲಿ , ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸರಕಾರಗಳು ಇದುವರೆಗೆ ಇನ್ನಿಲ್ಲದ  ಪ್ರಯತ್ನ ಮಾಡಿದವು. ಈಗ ಆರೋಪ, ಪ್ರತ್ಯಾರೋಪ, ರಾಜಕೀಯ ಎಲ್ಲವೂ ನುಸುಳುತ್ತದೆ. ಆದರೆ ಜನಸಾಮಾನ್ಯರಿಗೆ ಈ ರಾಜಕೀಯಗಳು ಅಗತ್ಯವೇ ಇಲ್ಲ. ಅವರಿಗೆ ಈಗ ಮತ್ತೆ ಬದುಕು ಕಟ್ಟುವ ಹೊತ್ತು. ಮಳೆಗಾಲ ಆರಂಭವಾಗಿದೆ. ಕೃಷಿಯಿಂದ ತೊಡಗಿ ಅನೇಕ ಕಾಯಕಗಳು ಬಾಕಿ ಉಳಿದಿವೆ.  ಇದುವರೆಗಿನ ಗೊಂದಲಗಳೇ ನಿವಾರಣೆ ಆಗಿಲ್ಲ.  ಇನ್ನು ಬೇಕಿರುವುದು  ಮುಂಜಾಗ್ರತೆ, ತನಗೂ, ತನ್ನ ಮನೆಯವರಿಗೂ ಕೊರೊನಾ ವೈರಸ್ ಬರದಂತೆ ಎಚ್ಚರಿಕೆ ವಹಿಸುವುದೊಂದೇ ದಾರಿ….


ಈಗಾಗಲೇ ಲಾಕ್ಡೌನ್ ಹಂತ ಮುಗಿಯುತ್ತಿದೆ. ಮುಂದೆ ಕೆಲವೊಂದು ನಿಯಮಗಳು ಯಥಾ ಪ್ರಕಾರ ಚಾಲ್ತಿಯಲ್ಲಿರಲೇಬೇಕಾಗಬಹುದು. ಆದರೆ ಜನಸಾಮಾನ್ಯರಿಗೆ ಇನ್ನಂತೂ ತುರ್ತು. ಮಳೆಗಾಲ ಆರಂಭವಾಗಿದೆ  ವಿವಿಧ ಅಗತ್ಯ ಕೆಲಸಗಳ ಕಡೆಗೆ ಗಮನಹರಿಸಲೇಬೇಕಿದೆ. ಇನ್ನೂ ಕೊರೊನಾ ಸುದ್ದಿ ಕೇಳುತ್ತಲೇ ಮನೆಯಲ್ಲೇ ಇರುವ ಕಾಲವನ್ನು  ದಾಟಿ ಬರಲೇಬೇಕಿದೆ. ಈಗ ಅಗತ್ಯವಾಗಿ ಬೇಕಿರುವುದು  ಮುಂಜಾಗ್ರತಾ ಕ್ರಮಗಳು. ನನಗೂ-ನನ್ನ ಮನೆಯವರಿಗೂ ಕೊರೊನಾ ವೈರಸ್ ಬಾರದಂತೆ ಏನು ಮಾಡಬಹುದು  ಎಂಬುದರ ಕಡೆಗೆ ಗಮನ.

ಈಗಾಗಲೇ ಬಸ್ಸು ಹಾಗೂ ಖಾಸಗಿ ವಾಹನಗಳ ಓಡಾಟ ಆರಂಭವಾಗಿದೆ. ಎಲ್ಲೆಡೆಯೂ ಮಾಸ್ಕ್ ಧರಿಸುತ್ತಲೇ ಓಡಾಟ ನಡೆಯುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ  ಕಡ್ಡಾಯವಾಗಿ ಮಾಸ್ಕ್ ಅಗತ್ಯ ಎಂದೂ ಸರಕಾರ ಹೇಳಿದೆ, ಇದಕ್ಕಾಗಿ ದಂಡ ಪ್ರಯೋಗಕ್ಕೂ ಮುಂದಾಗಿದೆ. ಆದರೆ ಖಾಸಗಿ ವಾಹನಗಳಲ್ಲಿ ಈಗ ಸಾರ್ವಜನಿಕರು ಸಾಮಾಜಿಕ ಅಂತರದ ಪ್ರಶ್ನೆಯೇ ಬರುತ್ತಿಲ್ಲ. ವ್ಯಾನ್ ಗಳಲ್ಲಿ, ಜೀಪುಗಳಲ್ಲಿ  ಫುಲ್ ರಶ್…!. ಸ್ಯಾನಿಟೈಸರ್ ಬಳಕೆ ಕಡಿಮೆ ಕಾಣುತ್ತದೆ.ಸಾರ್ವಜನಿಕ ವಾಹನ ಏರುವ ಮುನ್ನ ಸ್ಯಾನಿಟೈಸರ್ ಬಳಕೆ ಅಗತ್ಯವಾಗಿದೆ. ಆದರೆ ಬಳಕೆ ಕಾಣುತ್ತಿಲ್ಲ. ಒಂದು ವೇಳೆ ಬಸ್ಸು, ವ್ಯಾನ್ ಗಳಲ್ಲಿ  ಕಟ್ಟು ನಿಟ್ಟಿನ ಕ್ರಮಗಳು ಇಲ್ಲದೇ ಹೋದರೆ ಪ್ರತೀ ಗ್ರಾಮಗಳಲ್ಲೂ ಸಾಮಾನ್ಯ ವ್ಯಕ್ತಿಯೂ ಕೊರೊನಾ ಭಯಕ್ಕೆ ಒಳಗಾಗಬೇಕಾದ ಅನಿವಾರ್ಯತೆ ಇದೆ. ಇದರ ಬಗ್ಗೆ ಆಯಾ ಪಂಚಾಯತ್ ಗಳು ಏಕೆ ಗಮನಹರಿಸಬಾರದು ? ಎಂಬ ಪ್ರಶ್ನೆ ಇದೆ. ಪಂಚಾಯತ್ ಗಳು ತಮ್ಮ ಗ್ರಾಮಕ್ಕೆ ಸಾಮಾಜಿಕ ಮಾದರಿಯಲ್ಲಿ ವೈರಸ್ ಬಾರದಂತೆ ತಡೆಯಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕಿದೆ.  ಜನರು ತನಗೆ ಹಾಗೂ ತನ್ನ ಮನೆಯವರಿಗೆ ವೈರಸ್ ಬಾರದಂತೆ ಹೆಚ್ಚು ಗಮನಹರಿಸಬೇಕಿದೆ. ಇದೆರಡೂ ಪಾಲನೆಯಾದರೆ ಕೊರೊನಾ ವೈರಸ್ ಜೊತೆಯೇ ಬದುಕಲು ಸಾಧ್ಯವಿದೆ, ಕೊರೊನಾ ವೈರಸ್ ನಿವಾರಣೆಯೂ ಸಾಧ್ಯವಿದೆ.

ಈಗಾಗಲೇ ಕೊರೊನಾ ವೈರಸ್ ಗ್ರಾಮೀಣ ಭಾಗದಿಂದ ತೊಡಗಿ ನಗರದ ಉದ್ಯಮಗಳಿಗೂ ಸಾಕಷ್ಟು ಹೊಡೆತ ನೀಡಿದೆ. ಇನ್ನು  ಈ ಹೊಡೆತಗಳನ್ನು  ದಾಟಿ ಆರ್ಥಿಕತೆ ಸಹಜ ಸ್ಥಿತಿಯತ್ತ ಬರಲು ಯೋಜನೆ ರೂಪಿಸಲೇಬೇಕಾದ್ದರಿಂದ ಇನ್ನೂ ಕೊರೊನಾ ವೈರಸ್ ಭಯದಿಂದ , ಭಯಗೊಳಿಸುವ ದಾರಿಯಿಂದ ಹೊರಬರಬೇಕಿದೆ. ಇದಕ್ಕಾಗಿ ಪಂಚಾಯತ್ ಮಟ್ಟದಿಂದ ರಾಜ್ಯದವರೆಗೆ ನೂತನ ಯೋಜನೆಗಳು ಸಿದ್ಧವಾಗಬೇಕಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಭಯದಲ್ಲಿ ಕೇರಳದ ರಬ್ಬರ್ ರೈತರು – ತೋಟಗಾರಿಕೆಗೆ ಮುಂದೆ ಏನು?

ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…

10 hours ago

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…

18 hours ago

ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?

ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್‌…

19 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…

20 hours ago

ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…

1 day ago

ಹವಾಮಾನ ವರದಿ | 29-09-2026 | ಅ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…

1 day ago