ಲಂಡನ್ : ವಿಶ್ವಕಪ್ ಕ್ರಿಕಟ್ ನ ತನ್ನ ಎರಡನೇ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಪೇರಿಸಿದೆ. ಆಸ್ಟ್ರೇಲಿಯಾ ತಂಡದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತು. ಆ ಮೂಲಕ ಆಸ್ಟ್ರೇಲಿಯಾಕ್ಕೆ 353 ರನ್ ಗೆಲುವಿನ ಗುರಿ ನೀಡಿದೆ.
ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ (117ರನ್, 109 ಬಾಲ್ 16ಬೌಂಡರಿ) ಬಾರಿಸಿದ ಆಕರ್ಷಕ ಶತಕ ಬೃಹತ್ ಮೊತ್ತ ಪೇರಿಸಲು ಭಾರತಕ್ಕೆ ಸಹಾಯಕವಾಯಿತು. ನಾಯಕ ವಿರಾಟ್ ಕೊಹ್ಲಿ 82ರನ್ (77 ಬಾಲ್, 4 ಬೌಂಡರಿ, 2 ಸಿಕ್ಸರ್), ರೋಹಿತ್ ಶರ್ಮ 57 ರನ್(70 ಬಾಲ್ 3 ಬೌಂಡರಿ,1 ಸಿಕ್ಸರ್), ಹಾರ್ದಿಕ್ ಪಾಂಡ್ಯ 48ರನ್(27ಬಾಲ್, 3ಬೌಂಡರಿ,4 ಸಿಕ್ಸರ್), ಮಹೇಂದ್ರ ಸಿಂಗ್ ಧೋನಿ 27ರನ್ (14ಬಾಲ್, 3 ಬೌಂಡರಿ, 1ಸಿಕ್ಸರ್ ), ಕೆ.ಎಲ್. ರಾಹುಲ್ ಮೂರು ಬಾಲ್ ನಲ್ಲಿ 11 ರನ್ ಗಳಿಸಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವಿಶ್ವಕಪ್ ಪಂದ್ಯಾವಳಿಯಲ್ಲಿ ತನ್ನ ನಾಲ್ಕನೇ ಅತೀ ದೊಡ್ಡ ಮೊತ್ತ ದಾಖಲಿಸುವ ಮೂಲಕ ಕೆನ್ನಿಂಗ್ಟನ್ ಓವಲ್ ನಲ್ಲಿ ಭಾರತ ತನ್ನ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಶಿಸಿತು. ಶಿಖರ್ ಧವನ್- ರೋಹಿತ್ ಶರ್ಮ ಓಪನಿಂಗ್ ಜೋಡಿ ಮೊದಲ ವಿಕೆಟಿಗೆ 127 ರನ್ ಕಲೆ ಹಾಕಿತ್ತು. ಎರಡನೇ ವಿಕೆಟ್ ಗೆ ಧವನ್ -ಕೊಹ್ಲಿ 93 ರನ್ ಪೇರಿಸ ಭಾರತದ ಇನ್ನೀಂಗ್ಸ್ ಗೆ ಭದ್ರ ಬುನಾದಿ ಹಾಕಿತ್ತು. ಕೋಹ್ಲಿ-ಹಾರ್ದಿಕ್ ಪಾಂಡ್ಯ ಜೋಡಿ 53 ಬಾಲ್ ನಲ್ಲಿ 80 ರನ್ ಕಲೆ ಹಾಕಿ ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿದರು.
ಇತ್ತೀಚಿನ ವರದಿ ಬಂದಾಗ ಆಸ್ಟ್ರೇಲಿಯಾ 20 ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 105 ರನ್ ಮಾಡಿದೆ.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.