ಪುತ್ತೂರು: ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ ಪುತ್ತೂರು ಇದರ ಆಶ್ರಯದಲ್ಲಿ ದಾನಿಗಳ ಸಹಕಾರದಿಂದ ಮಂಗಳೂರು ಪುರಭವನದಲ್ಲಿ ಡಿ. 15 ರಂದು ಆದಿತ್ಯವಾರ “ಒಳಿತು ಮಾಡು ಮನುಷ” ಕಾರ್ಯಕ್ರಮದಲ್ಲಿ ಮಂಗಳೂರು ಬೋಲ್ಯಾರ್ ಪಲ್ಲದ ಶೀನ ಪೂಜಾರಿಯವರ ಅಂಗವಿಕಲ ಪುತ್ರ ಮಾ|ಕೌಶಿಕ್, ಪುತ್ತೂರು ತಾಲೂಕಿನ ಈಶ್ವರ ಮಂಗಿಲ ಪಡವನ್ನೂರಿನ ನೀರ್ಕಜೆಯ ಕ್ಯಾನ್ಸರ್ ನಿಂದ ಬಳಲುತ್ತಿರುವ ನೀಲಮ್ಮ, ಪುತ್ತೂರು ತಾಲೂಕಿನ ಪರ್ಲಡ್ಕದ ಕಿಡ್ನಿ ವೈಫಲ್ಯ ಬಾಧಿತ ಸುಂದರಿ, ಉಡುಪಿ ತಾಲೂಕಿನ ಬೆಳಪುವಿನ ಜವನೆರಕಟ್ಟೆಯ ಕ್ಯಾನ್ಸರ್ ಪೀಡಿತೆ ರಜಿಯಾ, ಉಡುಪಿ ತಾಲೂಕಿನ ಬೆಳಪುವಿನ ಜವನೆರಕಟ್ಟೆಯ ಬ್ಲಡ್ ಕ್ಯಾನ್ಸರ್ ಪೀಡಿತೆ ಸೋಲ್ಮಾ, ಪುತ್ತೂರು ತಾಲೂಕಿನ ತೆOಕಿಲ ನಿವಾಸಿ ಬ್ಲಡ್ ಕ್ಯಾನ್ಸರ್ ಪೀಡಿತ ಮುರುಗನ್, ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತ್ರಾಸಿ ನಿವಾಸಿ ಕೋದಂಡ ರಾಮ ಶೆಟ್ಟಿಗಾರ್ರ ಮಗಳು ಬ್ರೈನ್ ಟ್ಯೂಮರ್ನಿಂದ ಬಳಲುತ್ತಿರುವ ಸೋನಿ ಶೆಟ್ಟಿಗಾರ್, ಪುತ್ತೂರು ತಾಲೊಕಿನ ಕುರಿಯ ಗ್ರಾಮದ ಬೋಳಂತಿಮಾರ್ ನಿವಾಸಿ ಬಿಲ್ಡಿಂಗ್ ನಿಂದ ಬಿದ್ದು ನಡೆಯಲಾರದ ಸ್ಥಿತಿಯ ಸತೀಶ್ ಪೂಜಾರಿ, ಬೆಲ್ತಂಗಡಿ ತಾಲೋಕು ಅಡಿಂಜೆ ಗ್ರಾಮದ ವಿದ್ಯುತ್ ಕಂಬದಿಂದ ಬಿದ್ದು ನಡೆಯಲಾರದ ಸ್ಥಿತಿಯ ರಾಮಣ್ಣ, ಶಿರ್ವ ಬೆಳಂಜಲೇ ಸಮೀಪದ ನಾಲ್ಕೂರು ನಿವಾಸಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಭವ್ಯ ನಾಯಕ್, ಮಂಗಳೂರಿನ ಮುಕ್ಕ ನಿವಾಸಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕೃತಿ ಮೆಂಡನ್ ಸೇರಿದಂತೆ ಒಟ್ಟು 11 ಫಲಾನುಭವಿಗಳಿಗೆ ತಲಾ 5 ಸಾವಿರದಂತೆ ಒಟ್ಟು 55,000ದ ಚೆಕ್ ನ್ನು ವೇದಿಕೆಯಲ್ಲಿ ವಿತರಿಸಲಾಯಿತು.
ಸನ್ಮಾನ ಸಮಾರಂಭದಲ್ಲಿ ನಿವೃತ್ತ ಯೋಧರಾದ ಬೆಲ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕೃಷ್ಣನಂದ ಶೆಟ್ಟಿ, ಪ್ರಗತಿಪರ ಕೃಷಿಕ ಬೆಳ್ತಂಗಡಿ ತಾಲೂಕಿನ ಈಶ್ವರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆಯನ್ನು ಸುಬಾಸಿನಿ ರೈ ಬೆಳ್ತಂಗಡಿ , ಉದ್ಘಾಟನಾ ಕವಿತೆಯನ್ನು ಕುಶಾಲಕ್ಷಿ ವಿ ಕುಲಾಲ್ ಕಣ್ವತೀರ್ಥ, ನಿರ್ವಹಣೆಯನ್ನು ಅಮ್ಮನ ಆಸರೆ ಬಳಗದ ಆರ್ಯನ್ ಸವನಲ್ ನಡೆಸಿಕೊಟ್ಟರು. ಬಳಿಕ ಪುತ್ತೂರು ಡ್ರಿಮ್ ಕ್ಯಾಚರ್ಸ್ ಫಿಲಂ ಆಕ್ಟಿನ್ಗ್ ಕ್ಲಾಸ್ ನ ವಿದ್ಯಾರ್ಥಿಗಳಿಂದ ಆರ್ಯನ್ ಎಸ್ ಜಿ ಸಮಗ್ರ ನಿರ್ವಹಣೆಯ, ಯತೀಶ್ ಕುಲಾಲ್ ಬೆಟ್ಟಂಪಾಡಿ ನಿದೇಶನದಲ್ಲಿ ಮೈಮ್ ಶೋ ಮತ್ತು ಅನೂಪ್ ಹಾಗೂ ನಿಷ್ಮಿತ್ ಆಚಾರ್ಯ ನಿರ್ದೇಶನದಲ್ಲಿ ಪ್ರತಾಪ್ ಸವಣೂರು ಸಂಗೀತ ಸಂಯೋಜನೆಯಲ್ಲಿ ಹಾಸ್ಯ ಪ್ರಹಸನವು ನಡೆಯಿತು. ಮಲೆಮಾರ್ ಫೈನ್ ಆರ್ಟ್ಸ್ ಅಕಾಡೆಮಿಯ ಕುಮಾರ್ ಮಲೆಮಾರ್ ನಿರ್ದೇಶನದಲ್ಲಿ ಜನಮನ್ನಣೆ ಗೈದ ಮಕ್ಕಳಿಂದ ನೃತ್ಯ ಕಥಾ ವೈಭವ ಮತ್ತು ರಾಜಶ್ರೀ ಕುಡ್ಲ ತಂಡದಿಂದ ಕುಸಲ್ಡಾ ಎಸಲ್ ಹಾಸ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದಿನೇಶ್ ರೈ ಕಡಬ,ನಮ್ಮ ತುಳುನಾಡ್ ಟ್ರಸ್ಟಿನ ವಿದ್ಯಾಶ್ರೀ ಎಸ್.ಉಳ್ಳಾಲ್, ಕವಿಯತ್ರಿಯರಾದ ಪಂಚಮಿ ಕುಮಾರಿ ಬಾಕಿಲಪದವು, ಚಿತ್ರಕಲಾ ದೇವರಾಜ್ ಕುಂಬ್ಳೆ, ದೇವರಾಜ್ ಆಚಾರ್ ಕುಂಬ್ಳೆ,ಸೂರಜ್ ಪೂಜಾರಿ ಮೂಡುಬೆಳ್ಳ, ರಿತೇಶ್ ಕಿರಣ್ ಕಾಟುಕುಕ್ಕೆ, ಸ್ವೇತ ಕಜೆ ಬೆಲಿಂಜೆ, ಸವಿತಾ ರಾಮಕುಂಜ, ಪ್ರಮೀಳಾ ರಾಜ್ ಸುಳ್ಯ, ಮೋಹನ್ ಪಂಜಲಾ ಹಾಗೂ ಟ್ರಸ್ಟಿನ ಅಧ್ಯಕ್ಷರಾದ ಚೇತನ್ ಕುಮಾರ್ ಪುತ್ತೂರು, ಕಾರ್ಯದರ್ಶಿ ಶೋಭಾ ಮಾಡಿವಾಳ್, ಉಪಾಧ್ಯಕ್ಷರಾದ ಚಂದ್ರಾವತಿ ಖಂಡಿಗ, ಜೊತೆ ಕಾರ್ಯದರ್ಶಿ ಸುಮಲತಾ ಪೂಜಾರಿ, ಕೋಶಾಧಿಕಾರಿಯಾದ ಶಿವ ಪ್ರಸಾದ್, ಸಂಘಟನಾ ಕಾರ್ಯದರ್ಶಿ ಅಕ್ಷಯ್ ನಾಯ್ಕ್ ಮತ್ತು ಎಲ್ಲಾ ಸದಸ್ಯರು ಹಾಜರಿದ್ದರು.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…