ಬೆಳ್ಳಾರೆ : ಸುಳ್ಯ ತಾಲೂಕಿನ ಬಾಳಿಲದ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ “ನವಾನ್ನ” ಭೋಜನದ ವಿಶೇಷ ಆಚರಣೆ ಹಾಗೂ ಭತ್ತದ ಬೇಸಾಯದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಶಾಲೆಯ ಅಂಗಳದಲ್ಲಿ ಭತ್ತದ ಬೇಸಾಯ ಮಾಡಿ ಮಕ್ಕಳಿಗೆ ಅನ್ನದ ಹಿಂದಿನ ಶ್ರಮವನ್ನು ತಿಳಿಸಿ ಹಿರಿಯರು ಆಚರಿಸುತ್ತಿದ್ದ “ನವಾನ್ನ”ದ ಸವಿ ಊಟವನ್ನು ಮಕ್ಕಳಿಗೆ ಉಣಬಡಿಸಿ ಹಿಂದಿನ ಸಂಸ್ಕೃತಿಯನ್ನು ಅನಾವರಣಗೊಳಿಸಲಾಯಿತು. ಜೊತೆಗೆ ಮಕ್ಕಳಿಗೆ ಅನ್ನದ ಹಿಂದಿನ ಶ್ರಮವನ್ನು ಪರಿಚಯಿಸಲಾಯಿತು.
“ನವಾನ್ನ ” ಆಚರಣೆ ಹಾಗು ಭತ್ತ ಬೇಸಾಯದ ಮಹತ್ವ ಬಗ್ಗೆ ಡಾ.ಸುಂದರ ಕೇನಾಜೆ ಮಾತನಾಡಿ, ಮಕ್ಕಳು ಸ್ವಾಲಂಬಿಗಳಾಗೋದನ್ನು ಕಲಿಸಬೇಕಾಗಿದೆ. ಬರಿಯ ತಿನ್ನುವ ಅಕ್ಕಿಮಾತ್ರ ಅಲ್ಲ, ಅದು ಒಂದು ಬದುಕನ್ನು ಕಟ್ಟಿದಂತಹ, ಒಂದು ಸಂಸ್ಕೃತಿಯನ್ನು ಉಳಿಸಿದಂತಹ ಇಡೀ ತುಳುವರ ಪರಿಕಲ್ಪನೆಗಳಲ್ಲಿ ಅವರನ್ನು ಬೆಳೆಸಿದ ವ್ಯವಸ್ಥೆ. ಬೇಸಾಯದ ಹಿನ್ನಲೆಯಲ್ಲಿ ತುಳು ಸಂಸ್ಕೃತಿ ನಿಂತಿದೆ. ಸಂಸಾರದವರೆಲ್ಲ ಕೂಡಿ ಮಾಡುವ ನವಾನ್ನದ ಆಚರಣೆ ಬಂಧುತ್ವದ ಕಲ್ಪನೆ ಎಲ್ಲರನ್ನೂ ಒಂದುಗೂಡಿಸುವಂತಹದ್ದು. ಬಂಧುತ್ವ ಎಳೆಗಳು ನಮ್ಮಲ್ಲಿ ಬಹಳ ಮುಖ್ಯವಾಗಿ ಮಾತೃಪ್ರಧಾನವಾದ ವ್ಯವಸ್ಥೆ. ತಾಯಿಯನ್ನು ಮೂಲವಾಗಿಟ್ಟ ವ್ಯವಸ್ಥೆ ತುಳುವರದ್ದು. ಬಂಧುತ್ವದ ಸಂಕೇತವಾದ ಅಕ್ಕಿ ಬಹಳ ಮಹತ್ವದ್ದು. ಅದು ಸಮೃದ್ಧಿಯ ಸಂಕೇತ. ಪ್ರಕೃತಿಯ ಅನುಸಂಧಾನವನ್ನು ಕೂಡಾ ನಾವು ಬೇಸಾಯದಲ್ಲಿ ಕಾಣಬಹುದು ಎಂದರು.
ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶುಭದಾ ಎಸ್ ರೈ ಶುಭ ಹಾರೈಸಿದರು.
ಗ್ರಾಮಪಂಚಾಯತ್ ಬಾಳಿಲದ ಸದಸ್ಯರಾದ ರವೀಂದ್ರ ರೈ ಟಪಾಲುಕಟ್ಟೆ, ಎಸ್ ಡಿ ಯಂ ಸಿ ಯ ಉಪಾಧ್ಯಕ್ಷರಾದ ಭುವನೇಶ್ವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಕ್ಕಳು ರೈತ ಗೀತೆ ಹಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸುಬ್ಬಯ್ಯ ವೈ ಬಿ ಸ್ವಾಗತಿಸಿ, ಎಸ್ ಡಿ ಯಂ ಸಿ ಅಧ್ಯಕ್ಷರಾದ ಜಾಹ್ನವಿ ಕಾಂಚೋಡು ವಂದಿಸಿದರು. ಶಿಕ್ಷಕರಾದ ಶಿವಪ್ರಸಾದ್ ಜಿ ಕಾರ್ಯಕ್ರಮ ನಿರೂಪಿಸಿದರು.
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…
ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…
ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…