ಮಂಗಳೂರು: ಕ್ಯಾಂಪ್ಕೋ ವತಿಯಿಂದ ನೂತನ ಚಾಕೋಲೇಟ್ ಸ್ಪೈಸ್ ಟೋಫಿ ಬುಧವಾರ ಬಿಡುಗಡೆಗೊಂಡಿದೆ. ನೂತನ ಉತ್ಪನ್ನವು ಸಕ್ಕರೆ ಆಧಾರಿತ ಸಿರಪ್ ಗಳಿಂದ ಮತ್ತು ಸೈಸರ್ಗಿಕ ಕಾಳುಮೆಣಸು ಪುಡಿ ಹಾಗೂ ಶಂಠಿ ಸಾರಗಳಿಂದ ತಯಾರಿಸಲ್ಪಟ್ಟ ಉತ್ಪನ್ನವಾಗಿದೆ.
ನೂತನ ಉತ್ಪನ್ನ ಸ್ಪೈಸ್ ಟೋಫಿ ಯಲ್ಲಿ ಗ್ಲೂಕೋಸ್ ನೊಂದಿಗೆ ಶುಂಠಿ ಸಾರ ಹಾಗೂ ಕಾಳುಮೆಣಸು ಪುಡಿ ಇರುವುದರಿಂದ ಇದು ದೇಹದ ಸಮತೋಲನ ಕಾಪಾಡುವಲ್ಲಿ ಹಾಗೂ ದೇಹವನ್ನು ತಂಪಾಗಿರಿಸುವಲ್ಲಿ ಮತ್ತು ದಣಿವನ್ನು ನಿವಾರಿಸುವಲ್ಲಿ ಸಹಕಾರಿಯಾಗುತ್ತದೆ ಅಲ್ಲದೆ ಮೌತ್ ಫ್ರೆಶ್ನರ್ ಆಗಿಯೂ ಕೂಡಾ ಕೆಲಸ ಮಾಡುತ್ತದೆ. ಕ್ಯಾಂಪ್ಕೋದಿಂದ ತಯಾರಿಸಲ್ಪಟ್ಟ ವಿಶಿಷ್ಟ ಉತ್ಪನ್ನ ಇದಾಗಿದೆ. ಆರಂಭಿಕ ಹಂತದಲ್ಲೇ ಉತ್ತಮ ಪ್ರತಿಕ್ರೆಯೆ ವ್ಯಕ್ತವಾಗಿದೆ.
ಮಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸ್ಪೈಸ್ ಟೋಫಿ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ , ಉಪಾಧ್ಯಕ್ಷ ಶಂ.ನಾ ಖಂಡಿಗೆ, ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸುರೇಶ್ಚಂದ್ರ ಭಂಡಾರಿ ಮೊದಲಾದವರು ಮಾತನಾಡಿದರು.
ಕೃಷಿಕರು ಸ್ವಾವಲಂಬನೆ ಸಾಧಿಸುವ ಹೆಬ್ಬಯಕೆಯೊಂದಿಗೆ ಆರಂಭವಾದ ಸಹಕಾರಿ ಸಂಸ್ಥೆ ಕ್ಯಾಂಪ್ಕೋ. ಅಡಿಕೆ ಮಾತ್ರವಲ್ಲ ಇಂದು ಕೊಕೋ, ಕಾಳುಮೆಣಸು, ರಬ್ಬರ್ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಚಾಕೋಲೇಟ್ ತಯಾರಿಕೆಯ ಮೂಲಕ ಕೊಕೋ ಮೌಲ್ಯವರ್ಧನೆಯನ್ನೂ ಮಾಡಿದೆ. ಈಗ ಚಾಕೋಲೇಟ್ ಮಾರುಕಟ್ಟೆಯಲ್ಲೂ ದೇಶದಲ್ಲೇ ಕ್ಯಾಂಪ್ಕೋ ಹೆಸರು ಮಾಡಿದೆ. ಇದೀಗ ಚಾಕೋಲೇಟ್ ಬಗ್ಗೆ ವಿಶಿಷ್ಟ ಸೃಜನಾತ್ಮಕ ಪ್ರಚಾರ ಅಭಿಯಾನವನ್ನು ಕೈಗೊಳ್ಳಲಾಗಿದೆ. 60 ಸೆಕೆಂಡ್ ಡಿಜಿಟಲ್ ಚಿತ್ರದ ಮೂಲಕ ಮುದ್ರಣ, ರೇಡಿಯೋ, ದೃಶ್ಯಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಅಭಿಯಾನ ನಡೆಸಲಾಗುತ್ತಿದೆ, ಜನಸಾಮಾನ್ಯರು ಕ್ಯಾಂಪ್ಕೋ ಚಾಕಲೇಟ್ ನೊಂದಿಗೆ ಸಂಭ್ರಮಿಸುವಂತೆ ಪ್ರೇರಣೆ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ತಿಳಿಸಿದ್ದಾರೆ.
ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…
ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…
ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…
ಬಿಹಾರದ ಯುರೆನ್‌ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…