Advertisement
ವಿಶೇಷ ವರದಿಗಳು

ಸುಬ್ರಹ್ಮಣ್ಯದಲ್ಲಿ ಮೂಲಭೂತ ಸೌಲಭ್ಯದ “ಮುಕ್ತಿಧಾಮ”

Share

ಸುಬ್ರಹ್ಮಣ್ಯ: ಜೀವ ಮುಕ್ತವಾದ ಶರೀರ ಶವ.  ಆ ಶವ ಸಂಸ್ಕಾರ ಮಾಡುವಾಗ ಇರುವ ಭಾವ ಸ್ವರ್ಗಸ್ಥರಾಗಲಿ, ದೇಹಾಂತದ ಯಾತ್ರೆ ಸುಗಮವಾಗಲಿ. ಹೀಗಾಗಿ ಸಂಸ್ಕಾರ ಮಾಡುವ ಪ್ರದೇಶವೂ ವೇದನೆಯ ನಡುವೆ ಆ ಭಾವವನ್ನು  ಭರಿಸುವಂತಿರಬೇಕು. ಮೂಲಭೂತ ಸೌಕರ್ಯಗಳು ಇರಬೇಕು. ಇಂತಹ ಸೌಕರ್ಯವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಗರದ ಇಂಜಾಡಿ ಬಳಿ ನಿರ್ಮಾಣಗೊಂಡಿರುವ  ಚಿತಾಗಾರ ಹೊಂದಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಗರದ ಇಂಜಾಡಿ ಬಳಿ ನಿರ್ಮಾಣಗೊಂಡಿರುವ 58.06 ಲಕ್ಷ ರೂ ವೆಚ್ಚದ ಚಿತಾಗಾರ ಆಧುನಿಕ ವ್ಯವಸ್ಥೆ ಹೊಂದಿದೆ. ಸುಬ್ರಹ್ಮಣ್ಯ ಸಮೀಪದ ಇಂಜಾಡಿ ಬಳಿ ಹರಿಶ್ಚಂದ್ರ ಘಾಟ್ ಮಾದರಿಯಲ್ಲಿ ನಿರ್ಮಾಣಗೊಂಡಿರುವ ರುದ್ರಭೂಮಿಯಲ್ಲಿ  ಅಡಿ ಎತ್ತರದ ಧ್ಯಾನಸ್ಥ ಶಿವನ ವಿಗ್ರಹವಿದೆ. ಆವರಣದೊಳಗೆ 4 ಅಡಿ ಎತ್ತರದ ಶಿವ ಪೀಠ, ಹಿಂಭಾಗದಲ್ಲಿ 12 ಅಡಿ ಎತ್ತರದ ಕೈಲಾಸ, 28 ಅಡಿ ಎತ್ತರದ ತ್ರಿಶೂಲ ಹಾಗೂ ಡಮರುಗ, 6 ಅಡಿ ಎತ್ತರದ ಹರಿಶ್ಚಂದ್ರ ಮೂರ್ತಿ ಹಾಗೂ 4 ಅಡಿ ಎತ್ತರದ ಪೀಠ ನಿರ್ಮಾಣಗೊಂಡಿದೆ.

 

ಆವರಣದೊಳಗೆ ಸುಂದರ ಹಸಿರು ಗಾರ್ಡನ್ ನಿರ್ಮಿಸಲಾಗಿದೆ. ಸುತ್ತಲು ಕೂರಲು ಅನುಕೂಲವಾದ ತೆರೆದ ಪ್ರಾಂಗಣ ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗಿದೆ. ನೆಲಕ್ಕೆ ಇಂಟರ್ ಲಾಕ್ ಅಳವಡಿಸಲಾಗಿದೆ. ಆವರಣದ ಗೋಡೆಗಳಲ್ಲಿ ವಿವಿಧ ಭಂಗಿಯ ವರ್ಲಿ ಚಿತ್ರಗಳನ್ನು ರಚಿಸಲಾಗಿದೆ. ವಿದ್ಯುತ್, ಅನಿಲ, ಕೊಟ್ಟಿಗೆ ಸೇರಿದಂತೆ ಎಲ್ಲ ರೀತಿಯ ಚಿತಾಗಾರ ಕುಲುಮೆಗಳು ಒಂದೆ ಸೂರಿನಡಿ ಒದಗಿಸಲಾಗಿದೆ. ಉಳ್ಳಾಲದ ಬಾಲು ಆಟ್ರ್ಸ್ ಮುಕ್ತಿಧಾಮದ ಗಾರ್ಡನ್, ವರ್ಲಿ ಚಿತ್ತಾರ ನಿರ್ಮಾಣ ನಡೆಸಿದ್ದಾರೆ.
ಬೆಳೆಯುತ್ತಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೆಣ ಸುಡಲು ಸೂಕ್ತ ವ್ಯವಸ್ಥೆ ಇರಲಿಲ್ಲ. ಆಧುನಿಕ ಶವಗಾರದ ಅವಶ್ಯಕತೆ ಕುರಿತು ಕಳೆದ ಹತ್ತಾರು ವರ್ಷಗಳಿಂದ ಬೇಡಿಕೆಗಳಿತ್ತು. ಆದರೇ ಈಡೇರುವ ಲಕ್ಷಣ ಇರಲಿಲ್ಲ. ಇದುವೆರೆಗೆ ಇಲ್ಲಿ ಉರುವಲು ಚಿತಗಾರಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಿತ್ತು. ಇದನ್ನು ಮನಗಂಡ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯವರು ಇಲ್ಲಿ ಸುಸಜ್ಜಿತ ರೀತಿಯಲ್ಲಿ ಆಧುನಿಕ ಶೈಲಿಯಲ್ಲಿ ಮುಕ್ತಿಧಾಮ ನಿರ್ಮಿಸಲು ನಿರ್ಧರಿಸಿದ್ದರು. ಅದೀಗ ಸಾಕಾರಗೊಂಡಿದೆ.

ಸುಬ್ರಹ್ಮಣ್ಯ ಗ್ರಾ.ಪಂ ವ್ಯಾಪ್ತಿಯ ಇಂಜಾಡಿ ಬಳಿ ಒಂದು ಎಕರೆ ಭೂಮಿಯಲ್ಲಿ ಕೇವಲ 10 ಸೆಂಟ್ಸ್ ಸೆಂಟ್ಸ್ ಜಾಗದಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ಇತ್ತು. ಇಲ್ಲಿ ಶವಗಳನ್ನು ಉರುವಲು ಬಳಸಿ ಸುಡಲಾಗುತ್ತಿತ್ತು. ರುದ್ರಭೂಮಿ ಗಿಡಗಂಟಿಗಳಿಂದ ತುಂಬಿತ್ತು. ನೀರು ರಸ್ತೆ ಸಂಪರ್ಕವಿಲ್ಲದೆ ಇಲ್ಲಿ ಪೊದೆಗಳನ್ನು ಸರಿಸಿ ಕಟ್ಟಿಗೆ ರಾಶಿ ಹಾಕಿ ಶವಸಂಸ್ಕಾರ ನಡೆಸಬೇಕಿತ್ತು. ಕಟ್ಟಿಗೆ ಸಂಗ್ರಹವೂ ದೊಡ್ಡ ಸವಾಲಾಗಿತ್ತು.

ನಗರದಲ್ಲಿ ಚಿತಾಗಾರ ಇಲ್ಲದೆ ಬಹಳಷ್ಟು ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡ ವ್ಯವಸ್ಥಾಪನಾ ಸಮಿತಿ ಇಲ್ಲಿ ಆಧುನಿಕ ಚಿತಾಗಾರ ನಿರ್ಮಿಸಿದೆ. ಕ್ಷೇತ್ರದಲ್ಲಿ ಹಲವು ವರ್ಷಗಳಲ್ಲಿ ಈಡೇರದ ಕೆಲ ಬೇಡಿಕೆಗಳನ್ನು ಈಡೇರಿಸುವಲ್ಲಿ ಗಮನಹರಿಸಲಾಗಿದೆ. – ನಿತ್ಯಾನಂದ ಮುಂಡೋಡಿ. ಅಧ್ಯಕ್ಷರು,  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ

ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…

22 hours ago

ಬೇವು ಲೇಪಿತ ಯೂರಿಯಾ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ

ಕೇಂದ್ರ ಸರ್ಕಾರ 2015ರಲ್ಲಿ ದೇಶೀಯ ಹಾಗೂ ಆಮದು ಯೂರಿಯಾಗೆ ಬೇವು ಲೇಪನ ಕಡ್ಡಾಯಗೊಳಿಸುವ…

23 hours ago

ಮನೆ ಎಂದರೆ ಗೋಡೆಗಳಲ್ಲ , ನೆಮ್ಮದಿಯನ್ನು ಕಟ್ಟುವ ಜೀವನಕಲೆ

ಮನೆತನವನ್ನು ಕಟ್ಟುವುದು ಕೇವಲ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದಲ್ಲ; ಕುಟುಂಬದ ಸದಸ್ಯರ ನಡುವೆ ಪ್ರೀತಿ,…

23 hours ago

ಮಿಜೋರಾಂ ಮೂಲಕ 3,103 ಮೆಟ್ರಿಕ್ ಟನ್ ಅಡಿಕೆ ಕಳ್ಳಸಾಗಣೆ ಆರೋಪ – ಮ್ಯಾನ್ಮಾರ್‌ ಜಾಲ ಪತ್ತೆ

ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…

1 day ago

ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ

ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…

2 days ago

ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!

ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…

2 days ago