Advertisement
ಸುದ್ದಿಗಳು

ಸುಬ್ರಹ್ಮಣ್ಯ: ಗಾಂಗೇಯ ಟ್ರೋಫಿ ಕ್ರಿಕೇಟ್ ಪಂದ್ಯಾಟ ಉದ್ಘಾಟನೆ

Share

ಸುಬ್ರಹ್ಮಣ್ಯ: ಕ್ರಿಕೇಟ್ ಪಂದ್ಯಾಟಗಳು ಗ್ರಾಮೀಣ ಕ್ರೀಡಾಳುಗಳ ಪ್ರತಿಭಾ ಅನಾವರಣಕ್ಕೆ ವೇದಿಕೆ. ಸಮಾಜಮುಖಿ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಯುವಕರು ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಪಂದ್ಯಾಟಗಳು ಮಹತ್ತರವಾದುದು. ಕೃಷ್ಣ ಕುಮಾರ್ ರುದ್ರಪಾದ ಅವರು ಸಾಮಾಜಿಕ, ಧಾರ್ಮಿಕ, ಸಮಾಜಮುಖಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶ್ರೇಷ್ಠ ವ್ಯಕ್ತಿ. ಬಡವರ ಬಗ್ಗೆ ಅತೀವ ಕಾಳಜಿ ಇದ್ದ ಜನಪರ ವ್ಯಕ್ತಿತ್ವದ ಶ್ರೇಷ್ಠ ನಾಯಕತ್ವ ಗುಣ ಹೊಂದಿದ ಕೃಷ್ಣ ಕುಮಾರ್ ಅವರ ನೆನಪಿಗಾಗಿ ನಡೆಸಿದ ಪಂದ್ಯಾಟವು ಶ್ಲಾಘನೀಯ. ಸುಮಾರು 40 ವರ್ಷ ಇತಿಹಾಸ ಹೊಂದಿದ ಗಾಂಗೇಯ ಕ್ರಿಕೇಟ್ ತಂಡ ನಡೆಸಿದ ಈ ಪಂದ್ಯಾಟವು ಯುವಕರ ಕ್ರಿಕೇಟ್ ಆಸಕ್ತಿಯನ್ನು ಉತ್ತೇಜಿಸಲು ವಿಶೇಷ ಅವಕಾಶ ಒದಗಿಸಿದೆ ಎಂದು ಕೆ.ಎಸ್.ಎಸ್.ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಆರ್.ಶೆಟ್ಟಿಗಾರ್ ಹೇಳಿದರು.

ಸುಮಾರು 40 ವರ್ಷ ಇತಿಹಾಸ ಹೊಂದಿರುವ ಸುಬ್ರಹ್ಮಣ್ಯದ ಗಾಂಗೇಯ ಕ್ರಿಕೇಟರ್ಸ್ ಆಶ್ರಯದಲ್ಲಿ ದಿ|| ಕೃಷ್ಣಕುಮಾರ್ ರುದ್ರಪಾದ ಸ್ಮರಣಾರ್ಥವಾಗಿ, ಅವಿಭಜಿತ ದ.ಕ ಮತ್ತು ಕಾಸರಗೋಡು ಜಿಲ್ಲೆಗಳ ಪ್ರತಿಷ್ಠಿತ ಆಯ್ದ 20 ತಂಡಗಳ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟ ಗಾಂಗೇಯ ಟ್ರೋಫಿ-2020ಯ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಮಾತುಗಳನ್ನಾಡಿದರು. ಕ್ರಿಕೇಟ್ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಹೊಂದಿದೆ. ಇದರೊಂದಿಗೆ ಗ್ರಾಮೀಣರು ಆಡುವ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟಗಳನ್ನೂ ಪ್ರೋತ್ಸಾಹಿಸಿ ಬೆಳೆಸುವುದು ಕೂಡಾ ಉತ್ತಮವಾದುದು ಎಂದರು.

ಉದ್ಘಾಟನೆ: ಪಂದ್ಯಾಟವನ್ನು ಕಲಾವಿದ ಮತ್ತು ಗಾಂಗೇಯ ತಂಡದ ಮಾಜಿ ನಾಯಕ ಹರೀಶ್ ಕಾಮತ್ ಉದ್ಘಾಟಿಸಿದರು. ಗಾಂಗೇಯ ತಂಡದ ಸ್ಥಾಪಕ ನಾಯಕ ಎಂ.ಸರ್ವೋತ್ತಮ ಕಾಮತ್ ಬಲೂನ್‍ಗಳನ್ನು ಆಗಸಕ್ಕೆ ಹಾರಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಗಾಂಗೇಯ ಕ್ರಿಕೇಟರ್ಸ್‍ನ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ಜೇಸಿಸ್ ವಲಯಾಧಿಕಾರಿ ರವಿ ಕಕ್ಕೆಪದವು, ಗ್ರಾ.ಪಂ.ಸದಸ್ಯ ಮೋಹನದಾಸ ರೈ, ಭೂಮಾಪಕ ಪ್ರಸಾದ್ ರೈ, ಕುಲ್ಕುಂದ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿ ಸದಸ್ಯ ರಾಜೇಶ್ ಕಾಶಿಕಟ್ಟೆ, ರೋಟರಿ ಪೂರ್ವಾಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಮುಖ್ಯಅತಿಥಿಗಳಾಗಿದ್ದರು. ತಂಡದ ನಾಯಕ ಪ್ರಕಾಶ್ ಸುಬ್ರಹ್ಮಣ್ಯ, ಗಾಂಗೇಯ ತಂಡದ ಹಿರಿಯ ಆಟಗಾರರಾದ ಗಿರಿಧರ್ ಸ್ಕಂಧ, ರಾಮಕೃಷ್ಣ ಭಟ್ ನೂಚಿಲ, ಸುಭಾಸ್ ರೈ ಬಾಳಿಲ ವೇದಿಕೆಯಲ್ಲಿದ್ದರು.

ಗೌರವಾರ್ಪಣೆ: ಸಮಾರಂಭದಲ್ಲಿ ಗಾಂಗೇಯ ತಂಡದ ಪ್ರಾರಂಭದ ನಾಯಕ ಎಂ.ಸರ್ವೋತ್ತಮ ಕಾಮತ್ ಮತ್ತು ಗಾಂಗೇಯ ತಂಡದ ಆಟಗಾರ ಮತ್ತು ಹಿರಿಯರ ಅಂತರಾಷ್ಟ್ರೀಯ ಕ್ರೀಡಾಪಟು ಸುಭಾಶ್ ರೈ ಬಾಳಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಾಂಗೇಯ ತಂಡದ ಹಿರಿಯ ಆಟಗಾರ ರತ್ನಾಕರ.ಎಸ್ ಸ್ವಾಗತಿಸಿದರು. ತಂಡದ ಹಿರಿಯ ಸದಸ್ಯ ಗಿರಿಧರ್ ಸ್ಕಂಧ ಪ್ರಸ್ತಾಪಿಸಿದರು. ತಂಡದ ಸದಸ್ಯ ದೀಪಕ್ ನಂಬಿಯಾರ್ ವಂದಿಸಿದರು.ಚಂದಪ್ಪ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾಟದಲ್ಲಿ ತ್ರಿವಳಿ ಜಿಲ್ಲೆಗಳ ಪ್ರತಿಷ್ಠಿತ ಆಹ್ವಾನಿತ ತಂಡಗಳು ಪ್ರಶಸ್ತಿಗಾಗಿ ಸೆಣೆಸಾಡುತ್ತಿವೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 11-04-2026 | ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿ… ಮುಂದೇನು?

ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಚಟುವಟಿಕೆ ಆರಂಭವಾಗಿದೆ. ಏಪ್ರಿಲ್ 15…

9 hours ago

ಜನನ-ಮರಣ ನೋಂದಣಿ 21 ದಿನಗಳೊಳಗೆ ಕಡ್ಡಾಯ ನೋಂದಣಿ – ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

ಜನನ-ಮರಣ ಘಟನೆಗಳನ್ನು 21 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸೂಚನೆ.

16 hours ago

ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಮುಂದುವರಿಯುತ್ತಿದ್ದು, ಮಳೆಯ ಚಟುವಟಿಕೆ ಕಡಿಮೆಯಾಗಿದೆ. ಏಪ್ರಿಲ್ 15…

1 day ago

ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!

ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…

2 days ago

ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ : ಕರಾವಳಿಯಲ್ಲಿ ಒಣಹವೆ ಮುಂದುವರಿಕೆ!

ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆಯ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ…

3 days ago

ಆಟೋ ಗ್ಯಾಸ್ ಕೊರತೆ ವದಂತಿ- ರಾಜ್ಯ ಸರ್ಕಾರದಿಂದ ಸ್ಪಷ್ಟನೆ..!

ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಎಂಬುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.…

3 days ago