Advertisement
ಸುದ್ದಿಗಳು

ಸುಳ್ಯ ನ.ಪಂ.ಚುನಾವಣೆ: ಪ್ರಥಮ ದಿನ ನಾಮಪತ್ರ ಸಲ್ಲಿಕೆ ಇಲ್ಲ

Share

ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಗೆ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಆರಂಭಗೊಂಡಿದೆ. ಸುಳ್ಯ ನಗರ ಪಂಚಾಯತ್ ನಲ್ಲಿ ಚುನಾವಣಾಧಿಕಾರಿಗಳ ಕಚೇರಿ ತೆರೆಯಲಾಗಿದೆ. ಬುಧವಾರ ನಾಮಪತ್ರ ಸಲ್ಲಿಸಲು ಹಲವು ಮಂದಿ ಅರ್ಜಿಗಳನ್ನು ಪಡೆದು ಕೊಂಡು ಹೋಗುತ್ತಿದ್ದರು. ಪ್ರಥಮ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

ಏನೇನು ದಾಖಲೆ ಬೇಕು:

ನಾಮ ಪತ್ರ ಸಲ್ಲಿಸುವ ಅಭ್ಯರ್ಥಿಗಳು ಈ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ನಾಮಪತ್ರ -1 ಪ್ರತಿ, ಘೋಷಣಾ ಪತ್ರ -2 ಮೂಲಪ್ರತಿ, ಒಂದು ಜೆರಾಕ್ಸ್ ಪ್ರತಿ(ರೂ.20 ಸ್ಟಾಂಪ್ ಪೇಪರ್ ನಲ್ಲಿ), ಮೀಸಲು ಕ್ಷೇತ್ರವಾದರೆ ಜಾತಿ ಪ್ರಮಾಣ ಪತ್ರ, 3 ಭಾವಚಿತ್ರಗಳು, ಮಾದರಿ ಸಹಿ ಇರುವ ಪ್ರ‌ಮಾಣಪತ್ರ, ಪಕ್ಷದಿಂದ ಸ್ಪರ್ಧಿಸುವುದಾದರೆ ‘ಬಿ’ ಫಾರ್ಮ್, ಪಕ್ಷೇತರನಾಗಿ ಸ್ಪರ್ಧಿಸುವುದಾದರೆ ‘ಸಿ’ಫಾರ್ಮ್ ಸಲ್ಲಿಸಬೇಕು. ಠೇವಣಿ ಸಾಮಾನ್ಯ ಕ್ಷೇತ್ರಕ್ಕೆ ರೂ.1000, ಹಿಂದುಳಿದ ವರ್ಗ, ಅನುಸೂಚಿತ ಜಾತಿ, ಅನುಸೂಚಿತ ಪಂಗಡ,ಮಹಿಳೆ ಆದರೆ ರೂ.500 ಪಾವತಿಸಬೇಕು. ನಾಮಪತ್ರದಲ್ಲಿ ಮುದ್ರಿಸಬೇಕಾದ ಹೆಸರಿನ ವಿವರ ಪತ್ರ ಸಲ್ಲಿಸಬೇಕು.

ಆಯಾ ವಾರ್ಡಿನ ಸೂಚಕರು:

ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಯಾಗಿದ್ದಲ್ಲಿ ಒಬ್ಬರು ಸೂಚಕರು, ಪಕ್ಷೇತರ ಅಭ್ಯರ್ಥಿ ಯಾಗಿದ್ದಲ್ಲಿ ಮೂರು ಜನ ಸೂಚಕರು ಬೇಕು. ಅಭ್ಯರ್ಥಿಗೆ ಯಾವ ವಾರ್ಡಿನಲ್ಲಿ ಬೇಕಾದರೂ ಸ್ಪರ್ಧಿಸಬಹುದು ಆದರೆ ಸೂಚಕರು ಆಯಾ ವಾರ್ಡಿನವರೇ ಇರಬೇಕು.
ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿಗಳಿಂದ ಪಡೆದು ಪ್ರಮಾಣಪತ್ರದ ಶುಲ್ಕ ನೀಡಿ ಬ್ಯಾಂಕ್ ಗಳಿಂದ ಪಡೆದ ದಸ್ತಾವೇಜು ಹಾಳೆಯಲ್ಲಿ ಪ್ರಮಾಣೀಕರಿಸಬೇಕು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 11-04-2026 | ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿ… ಮುಂದೇನು?

ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಚಟುವಟಿಕೆ ಆರಂಭವಾಗಿದೆ. ಏಪ್ರಿಲ್ 15…

18 hours ago

ಜನನ-ಮರಣ ನೋಂದಣಿ 21 ದಿನಗಳೊಳಗೆ ಕಡ್ಡಾಯ ನೋಂದಣಿ – ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

ಜನನ-ಮರಣ ಘಟನೆಗಳನ್ನು 21 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸೂಚನೆ.

1 day ago

ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಮುಂದುವರಿಯುತ್ತಿದ್ದು, ಮಳೆಯ ಚಟುವಟಿಕೆ ಕಡಿಮೆಯಾಗಿದೆ. ಏಪ್ರಿಲ್ 15…

2 days ago

ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!

ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…

3 days ago

ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ : ಕರಾವಳಿಯಲ್ಲಿ ಒಣಹವೆ ಮುಂದುವರಿಕೆ!

ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆಯ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ…

3 days ago

ಆಟೋ ಗ್ಯಾಸ್ ಕೊರತೆ ವದಂತಿ- ರಾಜ್ಯ ಸರ್ಕಾರದಿಂದ ಸ್ಪಷ್ಟನೆ..!

ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಎಂಬುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.…

3 days ago