ಸುಳ್ಯ: ಸುಳ್ಯ ಹವ್ಯಕ ವಲಯದ ವತಿಯಿಂದ ಗಣಪತಿ ಹವನ, ಲಲಿತಾ ಹವನ ಹಾಗೂ ದುರ್ಗಾಪೂಜೆ ಕಾರ್ಯಕ್ರಮಗಳನ್ನು ಸುಳ್ಯದ ” ಶಿವ ಕೃಪಾ” ಕಲಾಮಂದಿರದಲ್ಲಿ ನಡೆಸಲಾಯಿತು.
ಡಾಕ್ಟರ್ ನಾರಾಯಣ ಭಟ್ ಕಲ್ಚಾರ್ ಇವರು ಧ್ವಜಾರೋಹಣವನ್ನು ನಡೆಸಿದರು, ವಲಯದ ಕಾರ್ಯದರ್ಶಿಯಾದ ವಿಷ್ಣು ಕಿರಣ ನೀರಬಿದ್ರೆ ಇವರು ಫಲ ಸಮರ್ಪಿಸಿ ಶಂಖನಾದದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.ವಲಯದ ವತಿಯಿಂದ ದುರ್ಗಾ ಪೂಜೆಯನ್ನು ಡಾಕ್ಟರ್ ನಾರಾಯಣ ಭಟ್ ಕಲ್ಚಾರ್ ದಂಪತಿಗಳು ಗಣಪತಿ ಹವನ, ಲಲಿತಾ ಹವನವನ್ನು ಕುಂಜತ್ತೋಡಿ ರಮೇಶ್ ಭಟ್ ದಂಪತಿಗಳು ನೆರವೇರಿಸಿದರು. ವಲಯ ವೈದಿಕ ಪ್ರಧಾನರಾದ ವೇದಮೂರ್ತಿ ಕೃಷ್ಣ ಭಟ್ ಅರಂಬೂರು ಮತ್ತು ಮಂಡಲ ವೈದಿಕ ಪ್ರಧಾನರಾದ ವೆಂಕಟೇಶ ಶಾಸ್ತ್ರಿಗಳ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನೆರವೇರಿದವು.
ಮಹಾಮಂಡಲದ ಮಾತೃತ್ವ ವಿಭಾಗದ ಅಧ್ಯಕ್ಷರಾದ ಈಶ್ವರಿ ಶ್ಯಾಂ ಭಟ್ ಬೇರ್ಕಡವು ಇವರು ಮಾತೃತ್ವ ವಿಭಾಗದ ಕಾರ್ಯಾಚರಣೆಗಳ ಬಗ್ಗೆ ಮಾಹಿತಿಗಳನ್ನು ನೀಡಿದರು.
ವಿಷ್ಣು ಗುಪ್ತ ವಿಶ್ವವಿದ್ಯಾಪೀಠ ಮುಳ್ಳೇರಿಯ ಮಂಡಲದ ನಿರ್ದೇಶಕರಾದ ಪ್ರೊ. ಟಿ. ಶ್ರೀಕೃಷ್ಣ ಭಟ್ ಅವರು ವಿಶ್ವವಿದ್ಯಾಪೀಠ ಬಗ್ಗೆ ಮಾಹಿತಿಗಳನ್ನು ನೀಡಿದರು ಈ ಸಂದರ್ಭದಲ್ಲಿ ಮಂಡಲದ ಮಾತೃ ಪ್ರಧಾನೆ ಕುಸುಮ ಪೆರ್ಮುಖ ಅವರು ಉಪಸ್ಥಿತರಿದ್ದರು.
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…