ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾಪರಿಷತ್ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 21 ನೇ ವರ್ಷದ ಭಜನಾ ತರಬೇತಿ ಕಮ್ಮಟ ಸೆ.16 ರಿಂದ ಸೆ.21 ರ ವರೆಗೆ ನಡೆಯಲಿದೆ. ಸೆ.22 ರಂದು ಭಜನೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಭಜನಾ ಸಮಿತಿಯ ಕಾರ್ಯದರ್ಶಿ ಮಮತಾರಾವ್ ತಿಳಿಸಿದ್ದಾರೆ.
ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಕಾಸರಗೋಡು, ಉತ್ತರಕನ್ನಡ, ಮೈಸೂರು, ಧಾರವಾಡ,ಗದಗ, ಹಾವೇರಿ, ಚಿತ್ರದುರ್ಗ, ಕೊಪ್ಪಳ, ದಾವಣಗೆರೆ, ಮಂಡ್ಯ, ಬೆಂಗಳೂರು ಗ್ರಾಮಾಂತರಜಿಲ್ಲೆಗಳ ಆಯ್ದ ಭಜನಾ ಮಂಡಳಿಗಳ 250 ಮಂದಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ಪಡೆಯಲು ಅವಕಾಶವಿದೆ.
ಭಜನೆಗಳು, ಪ್ರಾರ್ಥನಾ ಗೀತೆಗಳು, ವಚನ ಸಾಹಿತ್ಯಗಳು, ಸಾ0ಪ್ರದಾಯಿಕ ಗೀತೆಗಳನ್ನು ಭಜನಾ ತರಬೇತುದಾರರಿ0ದ ತರಬೇತಿ ನೀಡಲಾಗುತ್ತದೆ.ಮಹಿಳಾ ಶಿಬಿರಾರ್ಥಿಗಳಿಗೆ ಶೋಭಾನೆ ಹಾಡುಗಳನ್ನು ಹೇಳಿಕೊಡಲಾಗುತ್ತದೆ. ನೃತ್ಯ ಭಜನಾ ಪರಿಣಿತರಿಂದ ನೃತ್ಯ ಭಜನೆ ಹೇಳಿಕೊಡಲಾಗುತ್ತದೆ. ಪ್ರತಿ ದಿನವೂ ಮುಸ್ಸಂಜೆ ವೇಳೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಗರ ಸಂಕೀರ್ತನೆಯನ್ನುಆಯೋಜಿಸಲಾಗುತ್ತದೆ. ಯೋಗಾಭ್ಯಾಸ, ಧ್ಯಾನಗಳ ತರಗತಿಗಳನ್ನು ವ್ಯವಸ್ಥೆಗೊಳಿಸಲಾಗುತ್ತದೆ. ವಿವಿಧ ವಿಷಯ ತಜ್ಞರಿಂದ ಒಂದು ಗಂಟೆಯ ಕಾಲ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ. ಒಟ್ಟಾರೆಯಾಗಿ ವ್ಯಕ್ತಿತ್ವ ವಿಕಸನದೊ0ದಿಗೆ ಅಭ್ಯರ್ಥಿಗಳಿಗೆ ಭಜನಾ ಹಾಡುಗಾರಿಕೆಯಲ್ಲಿ ಪರಿಣಿತರನ್ನಾಗಿ ಮಾಡಲಾಗುತ್ತದೆ.
ಅರ್ಹತೆ:-
ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕನಿಷ್ಠ ಓದಲು, ಬರೆಯಲು ತಿಳಿದಿರಬೇಕು. 18 ರಿಂದ 45 ವರ್ಷ ವಯಸ್ಸಿನವರಾಗಿರಬೇಕು.ಕನಿಷ್ಠ ರಾಗ, ತಾಳ, ಜ್ಞಾನ ಹೊಂದಿರಬೇಕು ಮತ್ತು ಯಾವುದಾದರೂ ಒಂದು ಭಜನಾ ಮಂಡಳಿಯ ಸದಸ್ಯರಾಗಿರಬೇಕು. ಒಂದು ಮಂಡಳಿಯಿಂದ 2 ಸದಸ್ಯರಿಗೆ ಭಾಗವಹಿಸಲು ಅವಕಾಶವಿದೆ. ಭಜನಾ ತರಬೇತಿ ಕಮ್ಮಟದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ.ತರಬೇತಿ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.
Advertisement
ಹೆಚ್ಚಿನ ಮಾಹಿತಿಗಾಗಿ:
ಮಮತಾರಾವ್ (9449776921)ಕಾರ್ಯದರ್ಶಿ
ಸುಬ್ರಹ್ಮಣ್ಯಪ್ರಸಾದ್(9448869340)ಸಂಯೋಜಕರು
ನಾಗೇಂದ್ರ ಅಡಿಗ (9448445304) ಕೋಶಾಧಿಕಾರಿ
ಇವರನ್ನು ಸಂಪರ್ಕಿಸಬಹುದಾಗಿದೆ.
ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…