ಆಲಂಕಾರು: ಕಡಬ ಅಲಂಕಾರು ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲೆಯ ಮಾಧವ ಸದನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಆಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ,ಸಾಹಿತಿ,ವೈದ್ಯ ಡಾ ಸುರೇಶ ನೆಗಳಗುಳಿ ಮಾತನಾಡಿ ” ವರ ಮಹಾಲಕ್ಷ್ಮಿ ವ್ರತದ ಮಹತ್ವ, ಅದರ ಪೌರಾಣಿಕ ಹಿನ್ನೆಲೆ ಹಾಗೂ ಆರೋಗ್ಯದ ಸಂಪತ್ತು ಪ್ರಾಪ್ತ ವಾಗುವ ಉಪಾಯಗಳು ಹಾಗೂ ದೇವಿ ಲಕ್ಷ್ಮಿ ಯ ಪಾತ್ರವನ್ನು ವರ್ಣಿಸಿದರಲ್ಲದೆ, ಲಕ್ಷ್ಮಿ ದೇವಿಯ ಹಲವಾರು ನಾಮ ಹಾಗೂ ಅರ್ಥವನ್ನೊಳ ಗೊಂಡ ಸ್ವರಚಿತ ಕವನವನ್ನು ಧಾರ್ಮಿಕ ಉಪಾನ್ಯಾಸಕ ರಾಗಿ ವಾಚಿಸಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಮೈಸೂರಿನಲ್ಲಿರುವ ವಿಶ್ವಪ್ರಸಾದ್ ಆಳ್ವರವರು ಮಾಂಸಾಹಾರ ವರ್ಜ್ಯ ಮಾಡುವ ಉದ್ದೇಶ ಹಾಗೂ ಅದು ಹೇಗೆ ಜನಸಂಕುಲದ ಸಂಸ್ಕಾರವನ್ನು ಪರಿವರ್ತಿಸ ಬಲ್ಲದು ಎಂದು ವಿವರಿಸಿದರು.
ಅಧ್ಯಕ್ಷರಾಗಿ ಶಾಲಾ ಸಂಚಾಲಕ ಶ್ರೀಕೃಷ್ಣ ಕುಮಾರ್ ಇವರು ಶಿಸ್ತುಬದ್ಧ ನೀತಿಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮ ಸಂಸ್ಥೆ ನಿಗಾ ವಹಿಸುವುದಲ್ಲದೆ ಇಂತಹ ಹಬ್ಬ ಹರಿದಿನಗಳ ಆಚರಣೆ ಹಲವಾರು ವರ್ಷಗಳಿಂದಲೂ ನಡೆಸುತ್ತಿದ್ದು , ಉತ್ತಮ ಶಿಕ್ಷಣವೇ ತಮ್ಮ ಗುರಿ ಎಂದರು.
ಡಾ ಸುರೇಶ್ ಕೂಡೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.ಆಶಾ ಎಸ್ ರೈ ಮತ್ತು ಚಂದ್ರಹಾಸ ನಿರೂಪಿಸಿದರು. ಭವಾನಿ ವಂದಿಸಿದರು.ವೇದಿಕೆಯಲ್ಲಿ ಅರ್ಚಕ ವೇದಮೂರ್ತಿ ಅನಂತರಾಮ ಶರವೂರು ಮತ್ತು ಕನಕಲತಾ ಉಪಸ್ಥಿತರಿದ್ದರು.
ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಬಲಿತ ಹಲಸಿನ ಕಾಯಿ ಬ್ರೇಡ್ ರೋಲ್ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ…
ಪರಿಸರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಸರ್ಕಾರ ಬೇಜಾವಾಬ್ದಾರಿ ತೋರಿದೆ ಎಂದು ಲೇಖಕ ಅರವಿಂದ್…
ಕಣ್ಣೂರು-ಬೆಂಗಳೂರು ರೈಲು ತಡವಾಗಿ ಆಗಮಿಸುತ್ತಿದ್ದು ರೈಲು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ತಕ್ಷಣವೇ ಇಲಾಖೆ…
ಉಳ್ಳಾಲ ಪ್ರದೇಶದಲ್ಲಿ ಈ ಬಾರಿಯೂ ಕಡಲುಕೊರೆತ ಆರಂಭವಾಗಿದೆ. ಈ ಪ್ರದೇಶಕ್ಕೆ ವಿಧಾನಸಭಾ ಸ್ಪೀಕರ್…