ಒಂದು ಕಾಲದಲ್ಲಿ ರಾಜ್ಯದ ನೆಲ ಬಗೆದು ಕಬ್ಬಿಣದ ಅದಿರು ಚೀನಾ ಸೇರಿದ್ದು ಲೆಕ್ಕವಿಲ್ಲದಷ್ಟು. ನಂತರ ಅಕ್ರಮ ಅದಿರು ರಫ್ತು ಕೇಸ್ ನ್ಯಾಯಾಲದ ಮೆಟ್ಟಿಲೇರಿದ ಮೇಲೆ ಕಾರಾವರ ಬಂದರಿನಲ್ಲಿ ಚಟುವಟಿಕೆ ಬಂದ್ ಆಗಿತ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ ಹದಿಮೂರು ವರ್ಷಗಳ ನಂತರ ಕಬ್ಬಿಣದ ಅದಿರು ಕಾರವಾರ ಬಂದರಿನಿಂದ ಚೀನಾದತ್ತ ಸಾಗುತ್ತಿದೆ. ಚೀನಾಕ್ಕೆ ಹೋಗಬೇಕಿದ್ದ ಕಬ್ಬಿಣದ ಅದಿರು ಸೇರಿ ಇತರೆ ಖನಿಜಗಳನ್ನು 13 ವರ್ಷಗಳ ಹಿಂದೆ ಅಕ್ರಮದ ದೂರಿನ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿತ್ತು.
ಈ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿತ್ತು ಮತ್ತು ಕೋರ್ಟ್ ಕೂಡ ಕರ್ನಾಟಕದ ಅದಿರನ್ನ ಎಲ್ಲಿಗೂ ರಫ್ತು ಮಾಡದಂತೆ ನಿಷೇಧಿಸಿ ಆದೇಶ ಹೊರಡಿಸಿತ್ತು. ಹೀಗಾಗಿ ಕೋರ್ಟ್ ಆದೇಶದಲ್ಲಿ ಸಿಕ್ಕಿಕೊಂಡಿದ್ದ ಕಬ್ಬಿಣದ ಅದಿರು ಮತ್ತು ಇತರೆ ಖನಿಜಗಳು ಚೀನಾಕ್ಕೆ ಹೋಗದೇ ಕಾರವಾರದ ಬಂದಿರನಲ್ಲಿಯೇ ಉಳಿದಿತ್ತು. ಆದರೆ ಇದೀಗ ಸ್ಥಳೀಯ ನ್ಯಾಯಾಲಯದ ಅನುಮತಿಯ ನಂತರ ವಸ್ತುಗಳನ್ನು ಹರಾಜು ಮಾಡಿದ ನಂತರ ಚೀನಾಕ್ಕೆ ರವಾನಿಸಲಾಗುತ್ತಿದೆ. 13 ವರ್ಷಗಳ ಸುದೀರ್ಘ ಕಾಯುವಿಕೆ ನಂತರ ಕಾರವಾರ ಬಂದರಿನಿಂದ ಚೀನಾಗೆ ಕಬ್ಬಿಣದ ಅದಿರು ರಫ್ತಾಗುತ್ತಿದೆ.
ಅರಣ್ಯ ಇಲಾಖೆ ವಶಪಡಿಸಿಕೊಂಡ ಒಟ್ಟು 1.15 ಮೆಟ್ರಿಕ್ ಟನ್‌ಗಳಲ್ಲಿ ಸುಮಾರು 37,320 ಮೆಟ್ರಿಕ್ ಟನ್ ಕಬ್ಬಿಣದ ಅದಿರು ನ್ಯಾಯಾಲಯದ ಅನುಮತಿಯ ನಂತರ ಚೀನಾಕ್ಕೆ ರಫ್ತು ಮಾಡಲಾಗುತ್ತಿದೆ. ಹಾಗಿದ್ದರೂ ಈ ಪ್ರಕ್ರಿಯೆಯಲ್ಲಿ ಕಬ್ಬಿಣದ ಅದಿರುಗಳನ್ನು ಮಾತ್ರ ಚೀನಾಕ್ಕೆ ಕಳುಹಿಸಿಕೊಡಲಾಗುತ್ತಿದೆ. ಮಿಕ್ಕ ಖನಿಜಗಳು, ಪ್ರಕರಣ ಇತ್ಯರ್ಥವಾಗುವವರೆಗೂ ಇಲ್ಲಿಯೇ ಉಳಿಯುತ್ತವೆ.
ಕಬ್ಬಿಣದ ಅದಿರನ್ನು 2010 ರಲ್ಲಿ ವಶಪಡಿಸಿಕೊಳ್ಳಲಾಯಿತು ಮತ್ತು ಕಾರವಾರದಲ್ಲಿ ದಾಸ್ತಾನು ಮಾಡಲಾಗಿತ್ತು. ನಂತರದ ವರ್ಷ ಸುಮಾರು 50,000 ಮೆಟ್ರಿಕ್ ಟನ್ ಕಳ್ಳತನವಾಗಿದೆ ಎಂದು ವರದಿಯಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಉಳಿದ ಅದಿರನ್ನು ವಿಲೇವಾರಿ ಮಾಡುವಂತೆ ಗಣಿಗಾರಿಕೆ ಸಂಸ್ಥೆಗಳು ಸ್ಥಳೀಯ ನ್ಯಾಯಾಲಯಗಳ ಮೊರೆ ಹೋಗಿದ್ದವು. ನ್ಯಾಯಾಲಯವು ಇತ್ತೀಚೆಗೆ 32,000 ಮೆಟ್ರಿಕ್ ಟನ್ ಅದಿರು ಹರಾಜಿಗೆ ಆದೇಶಿಸಿದೆ. ಆದರೆ, ಆದೇಶವಿದ್ದರೂ ಇಲ್ಲಿ ದಾಸ್ತಾನು ಮಾಡಿರುವ ಸಾಮಗ್ರಿ ಖರೀದಿಸಲು ಹೆಚ್ಚಿನವರು ಮುಂದೆ ಬರಲಿಲ್ಲ.
ಇತ್ತೀಚೆಗೆ, ಮಹಾರಾಷ್ಟ್ರ ಮೂಲದ ಕಂಪನಿಯೊಂದು ಈ ಬಗ್ಗೆ ಆಸಕ್ತಿ ತೋರಿಸಿತು ಮತ್ತು ಕಬ್ಬಿಣದ ಅದಿರನ್ನು ಸಂಗ್ರಹಿಸಲು ಟೆಂಡರ್ ಅನ್ನು ಪಡೆದುಕೊಂಡಿತು. ರಫ್ತು ಪರವಾನಗಿಯನ್ನು ಹೊಂದಿರುವ ಈ ಕಂಪನಿ ಈಗಾಗಲೇ ಚೀನಾಕ್ಕೆ ಕಬ್ಬಿಣದ ಅದಿರನ್ನು ರಫ್ತು ಮಾಡಲು ಪ್ರಾರಂಭಿಸಿದೆ. ರಾಜ್ ಮಹಲ್ ಮೈನಿಂಗ್ ಕಂಪನಿಗೆ ಸೇರಿದ ಅದಿರನ್ನು ಮಾತ್ರ ರಫ್ತು ಮಾಡಲಾಗಿದ್ದು, ವೇದಾಂತ ಗುಂಪಿಗೆ ಸೇರಿದ ಅದಿರನ್ನು ಇನ್ನೂ ರಫ್ತು ಮಾಡಬೇಕಾಗಿದೆ ಎಂದು ಬಂದರು ಕಾರವಾರ ಇಲಾಖೆಯ ನಿರ್ದೇಶಕ ಸಿ ಸ್ವಾಮಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮೇ 22, 2023 ರಂದು ‘ಎಂವಿ ನೋಟೋಸ್ ವೆಂಚುರಾ’ ಹಡಗಿನಲ್ಲಿ ಕಬ್ಬಿಣದ ಅದಿರನ್ನು ಚೀನಾಕ್ಕೆ ರವಾನಿಸಲಾಯಿತು. ಕಂಪನಿಯು ಅಗತ್ಯವಿರುವ ಶುಲ್ಕವನ್ನು ಪಾವತಿಸಿದ ನಂತರ ವೇದಾಂತ ಗುಂಪಿಗೆ ಸೇರಿದ ಉಳಿದ ಎರಡು ಕಬ್ಬಿಣದ ಅದಿರನ್ನು ವಿಲೇವಾರಿ ಮಾಡಲಾಗುತ್ತದೆ.ಕಾರವಾರದಿಂದ ಕಬ್ಬಿಣದ ಅದಿರು ರಫ್ತು 2003 ರಲ್ಲಿ ಪ್ರಾರಂಭವಾಯಿತು ಮತ್ತು 2010 ರವರೆಗೂ ಮುಂದುವರೆಯಿತು. 2010 ರಲ್ಲಿ ಬಂದರಿನಿಂದ ಅಕ್ರಮವಾಗಿ ಗಣಿಗಾರಿಕೆ ಮಾಡಿದ ಅದಿರನ್ನು ರಫ್ತು ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇಲೆ ಇಡೀ ಚಟುವಟಿಕೆ ಸ್ಥಗಿತಗೊಂಡಿತು.
ಕೃಷಿಯಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದು ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಭಾರತೀಯ ಸೇನಾಪಡೆಯು, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ…
ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…
ಈ ತಿಂಗಳ ಅಂತ್ಯದೊಳಗೆ ಮೀನ ಕಟಕ ಕುಂಭ ಮಿಥುನ ವೃಶ್ಚಿಕ ವೃಷಭ ಈ…