Advertisement
ಸುದ್ದಿಗಳು

15 ದಿನದಲ್ಲಿ ನಗರದ ಕಸ ವಿಲೇವಾರಿಗೆ ಪರಿಹಾರ ಸಿಗದಿದ್ದರೆ ನ.ಪಂ. ಎದುರು ಪ್ರತಿಭಟನೆ : ಎ.ಎ.ಪಿ. ಎಚ್ಚರಿಕೆ

Share

ಸುಳ್ಯ: ನಗರದ ಜ್ವಲಂತ ಸಮಸ್ಯೆಯಾಗಿರುವ ತ್ಯಾಜ್ಯ ವಿಲೇವಾರಿಯಾಗದೇ ನಗರ ಪಂಚಾಯಿತಿ ವಠಾರ ಮತ್ತು ಆಸುಪಾಸು ಗಬ್ಬು ನಾರುತ್ತಿದೆ. ಈ ಸಮಸ್ಯೆಯನ್ನು 15 ದಿನಗಳೊಳಗೆ ಶಾಶ್ವತ ಪರಿಹಾರವಾಗದಿದ್ದರೆ ನಗರ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಆಮ್ ಆದ್ಮಿ ಪಾರ್ಟಿ ಎಚ್ಚರಿಕೆ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎ.ಎ.ಪಿ. ಸಹಸಂಚಾಲಕ ರಶೀದ್ ಜಟ್ಟಿಪಳ್ಳ `ಇನ್ನೂ ಎರಡು ಮೂರು ತಿಂಗಳಲ್ಲಿ ಮಳೆ ಬರಲಿದೆ. ನಗರ ಪಂಚಾಯತ್ ಎದುರು ಸಂಗ್ರಹಿಸಲಾಗಿರುವ ನಗರದ ಕಸ ಈಗಲೇ ದುರ್ವಾಸನೆ ಬೀರುತ್ತಿದ್ದು ಮಳೆ ಬಂದು ನೀರು ತಾಗಿದರೆ ಮತ್ತಷ್ಟು ಗಬ್ಬು ನಾರುತ್ತದೆ. ಆದ್ದರಿಂದ ಸುಳ್ಯದ ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಆಗಬೇಕು. ಜನಪ್ರತಿನಿಧಿಗಳು ಈ ಕುರಿತು ಕಾಳಜಿ ವಹಿಸಬೇಕು. ಇನ್ನು 15 ದಿನದಲ್ಲಿ ನಗರದ ಕಸ ಸಮಸ್ಯೆಗೆ ಪರಿಹಾರವಾಗದಿದ್ದರೆ ಸಾರ್ವಜನಿಕರನ್ನು ಸೇರಿಸಿ ಎ.ಎ.ಪಿ. ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.
ಆಶ್ರಯ ಯೋಜನೆಯಲ್ಲಿ ವಸತಿ ನೀಡುವ ಕುರಿತು ಪ್ರಕ್ರಿಯೆ ನಡೆಯಿತಾದರೂ ಇನ್ನೂ ಅರ್ಹರಿಗೆ ವಸತಿ ನೀಡಲು ಕ್ರಮ ಕೈಗೊಂಡಿಲ್ಲ. ವಿವಿಧ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿದವರಿಗೂ ಇನ್ನೂ ಅನುದಾನ ಬಿಡುಗಡೆಗೊಂಡಿಲ್ಲ. ಈ ಕುರಿತು ಶಾಸಕರು ಸರಕಾರದ ಗಮನಕ್ಕೆ ತಂದು ಅನುದಾನ ಬಿಡುಗಡೆ ಆಗುವಂತೆ ನೋಡಿಕೊಳ್ಳಬೇಕು. ಗುರುಂಪು ನಾಗಪಟ್ಟಣ ರಸ್ತೆ ತೀರಾ ಹದಗೆಟ್ಟಿದ್ದು ಅದರ ದುರಸ್ಥಿ ಕಾರ್ಯವನ್ನು ನಗರ ಪಂಚಾಯಿತಿ ಶೀಘ್ರವಾಗಿ ಮಾಡಬೇಕು, ನೀರಿನ ಅಭಾವ ಆಗುವ ಸಾಧ್ಯತೆ ಇದೆ. ಆದ್ದರಿಂದ ನೀರಿನ ಸಮಸ್ಯೆ ಉಂಟಾಗದಂತೆ ತಡೆಯಲು ಪಯಸ್ವಿನಿಗೆ ಕಿಂಡಿ ಅಣೆಕಟ್ಟು ಆಗಬೇಕು ಎಂದು ಎಎಪಿ ನಾಯಕರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎ.ಎ.ಪಿ. ಕಾರ್ಯದರ್ಶಿ ದೀಕ್ಷಿತ್ ಕುಮಾರ್ ಜಯನಗರ, ಎ.ಎ.ಪಿ. ಸಹಸಂಚಾಲಕ ರಾಮಕೃಷ್ಣ ಬೀರಮಂಗಲ, ಡಿ.ಎಂ. ಶಾರೀಕ್ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬ್ಯಾಂಕ್‌ ಮುಷ್ಕರ ಮುಂದೂಡಿಕೆ – ಇಂದು ಎಂದಿನಂತೆ ಬ್ಯಾಂಕ್‌ ಸೇವೆ

ಸೆ.28ರಿಂದ 30ರವರೆಗೆ ನಡೆಯಬೇಕಿದ್ದ ರಾಷ್ಟ್ರವ್ಯಾಪಿ ಮೂರು ದಿನಗಳ ಬ್ಯಾಂಕ್‌ ಮುಷ್ಕರವನ್ನು ಕೊನೆ ಕ್ಷಣದಲ್ಲಿ…

2 hours ago

ಖ್ಯಾತಿ-ಪ್ರಚಾರವಲ್ಲ, ಸಮಾಜ ಪರಿವರ್ತನೆಯೇ ಚಾತುರ್ಮಾಸ್ಯದ ಗುರಿ

‘ಅನ್ನಂ ಬ್ರಹ್ಮ’ ಚಾತುರ್ಮಾಸ್ಯದ ಉದ್ದೇಶ ಖ್ಯಾತಿ ಅಥವಾ ಪ್ರಚಾರವಲ್ಲ, ಸಮಾಜ ಪರಿವರ್ತನೆ ಎಂದು…

10 hours ago

ಮೇಘಾಲಯದ ಅಡಿಕೆಗೆ ಜಿಐ ಟ್ಯಾಗ್‌ ಪ್ರಕ್ರಿಯೆ..! ಮಲೆನಾಡು ಅಡಿಕೆಗೂ ಏಕೆ ಪ್ರಯತ್ನಿಸಬಾರದು..?

ಮೇಘಾಲಯ ಅಡಿಕೆಗೆ ಜಿಐ ಟ್ಯಾಗ್‌ ಪಡೆಯಲು ಅರ್ಜಿ ಸಲ್ಲಿಸಿರುವ ಬೆಳವಣಿಗೆ ಅಡಿಕೆಯ ಭೌಗೋಳಿಕ…

13 hours ago

ಹವಾಮಾನ ವರದಿ | 27-09-2026 | ಕರ್ನಾಟಕದಲ್ಲಿ ಸದ್ಯ ಒಣಹವೆ ; ಸೆ.28ರಿಂದ ಮತ್ತೆ ಮಳೆ ಸಾಧ್ಯತೆ..!

ಕರ್ನಾಟಕದಾದ್ಯಂತ ಸೆ.28ರಂದು ಒಣಹವೆ ಆವರಿಸುವ ಸಾಧ್ಯತೆ ಇದ್ದರೂ ಕೊಡಗು ಹಾಗೂ ಚಿಕ್ಕಮಗಳೂರಿನ ಕೆಲವು…

19 hours ago

ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!

ಬಯಲುಸೀಮೆಯಲ್ಲಿ ಅಡಿಕೆ ಬೆಳೆ ವಿಸ್ತರಣೆಗೆ ನೀರಾವರಿ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಉತ್ತಮ…

22 hours ago