Advertisement
MIRROR FOCUS

ಜಪಾನ್‌ನಲ್ಲಿ ಒಂದೇ ದಿನ ಬರೋಬ್ಬರಿ 155 ಬಾರಿ ಕಂಪಿಸಿದ ಭೂಮಿ | ಭೂಕಂಪಕ್ಕೆ 30 ಮಂದಿ ಸಾವು | ಜೊತೆಗೆ ಸುನಾಮಿ ಭೀತಿ

Share

ಪ್ರಕೃತಿಯ ಮುನಿಸನ್ನು(Natural Disaster) ತಡೆಯುವ ಶಕ್ತಿ ಈ ಮಾನವನಿಗೆ(Human) ಅಸಾಧ್ಯದ ಮಾತು. ವಿಜ್ಞಾನ ಎಷ್ಟೇ ಮುಂದುವರೆದರು ಇದು ಮಾತ್ರ ಅಸಾಧ್ಯ. ಪರಿಸರವನ್ನು ನಾಶ ಮಾಡಬಹುದೇ ವಿನಃ ಅದರ ಪ್ರಕೋಪವನ್ನು ತಡೆಯುವ ಶಕ್ತಿ ಇಲ್ಲ.  ಜಪಾನ್‌ನಲ್ಲಿ(Japan) ಒಂದೇ ದಿನ 155 ಬಾರಿ ಭೂಕಂಪ(Earthquakes) ಸಂಭವಿಸಿದ ಪರಿಣಾಮ  30 ಮಂದಿ ಸಾವಿಗೀಡಾಗಿದ್ದಾರೆ. ಹೊಸ ವರ್ಷದಂದೇ(New year)) ಭೂಕಂಪ ಸಂಭವಿಸಿದೆ ಎನ್ನುವುದು ವಿಷಾದ. 

ಹೊನ್ಶುವಿನ ಮುಖ್ಯ ದ್ವೀಪದಲ್ಲಿರುವ ಇಶಿಕಾವಾ ಪ್ರಾಂತ್ಯದಲ್ಲಿ 7.5 ತೀವ್ರತೆಯ ಭೂಕಂಪವು ಒಂದು ಮೀಟರ್ ಎತ್ತರದ ಸುನಾಮಿ ಅಲೆಗಳನ್ನು ಸೃಷ್ಟಿಸಿತು. ಭೂಕಂಪದ ತೀವ್ರತೆಗೆ ಕಟ್ಟಡಗಳು ನೆಲಕ್ಕುರುಳಿವೆ, ಪ್ರಮುಖ ಬಂದರು ಬೆಂಕಿ ಅವಘಡಕ್ಕೆ ಕಾರಣವಾಯಿತು, ರಸ್ತೆಗಳು ಬಿರುಕು ಬಿಟ್ಟಿವೆ. ಜಪಾನ್‌ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದಾಗಿ ಹಲವಾರು ಸಾವುನೋವುಗಳು, ಕಟ್ಟಡ ಕುಸಿತಗಳು ಮತ್ತು ಬೆಂಕಿ ಸೇರಿದಂತೆ ಬಹಳ ವ್ಯಾಪಕ ಹಾನಿಯಾಗಿದೆ ಎಂದು ವಿಪತ್ತು ನಿರ್ವಹಣಾ ಸಭೆಯ ಬಳಿಕ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ತಿಳಿಸಿದ್ದಾರೆ.

ವಾಜಿಮಾ ಬಂದರಿನಲ್ಲಿ ಏಳು ಮಂದಿ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ. ಏರಿಯಲ್ ನ್ಯೂಸ್ ಫೂಟೇಜ್ ಬಂದರಿನಲ್ಲಿ ಭೂಕಂಪದಿಂದ ಬೆಂಕಿ ಅವಘಡ ಸಂಭವಿಸಿತು. ಏಳು ಅಂತಸ್ತಿನ ಕಟ್ಟಡವು ಕುಸಿದಿದೆ. ಈ ಪ್ರದೇಶದಲ್ಲಿ ಸುಮಾರು 45,000 ಕುಟುಂಬಗಳು ವಿದ್ಯುತ್‌ ಸಮಸ್ಯೆಯಿಂದ ಕತ್ತಲಲ್ಲಿ ಜೀವನ ನಡೆಸುವಂತಾಗಿದೆ. ಘಟನೆಯಲ್ಲಿ ಇದುವರೆಗೆ ಒಟ್ಟು 30 ಮಂದಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಭೂಕಂಪದ ಕೇಂದ್ರಬಿಂದು ಬಳಿ ಕೇವಲ 5,000 ಮನೆಗಳಿರುವ ಕರಾವಳಿ ಪಟ್ಟಣವಾದ ಸುಜುದಲ್ಲಿ,  1,000 ಮನೆಗಳು ನಾಶವಾದವು ಎಂದು ವರದಿಯಾಗಿದೆ.

 

ಭೂಕಂಪದ ತೀವ್ರತೆ 7.5ರಷ್ಟಿತ್ತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ತಿಳಿಸಿದೆ. ಜಪಾನ್‌ನ ಹವಾಮಾನ ಸಂಸ್ಥೆ ಇದನ್ನು 7.6 ಎಂದು ಹೇಳಿದೆ. ಇಶಿಕಾವಾ, ನೈಕತಾ ಮತ್ತು ಟೊಯಾಮಾ ನಗರಗಳ ಕರಾವಳಿ ತೀರಗಳಲ್ಲಿ ಸುನಾಮಿ (Tsunami) ಎಚ್ಚರಿಕೆ ನೀಡಲಾಗಿದೆ. ಇಶಿಕಾವಾ ಜಿಲ್ಲೆಯ ಕರಾವಳಿ ನೋಟೋಗೆ 5 ಮೀಟರ್ ಎತ್ತರದವರೆಗಿನ ಬೃಹತ್ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ. ನೈಗತ ಮತ್ತು ಟೊಯಾಮಾ ಸೇರಿದಂತೆ ಉಳಿದ ಕೆಲವು ಕರಾವಳಿ ತೀರಗಳಲ್ಲಿ 3 ಮೀಟರ್‍ವರೆಗೂ ಅಲೆಗಳು ಏಳಬಹುದು ಎಂದು ಜಪಾನ್ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

13 people have died as a result of 155 earthquakes (Earthquakes) occurred in Japan in one day. An earthquake occurred in the New Year and caused huge casualties. A 7.5-magnitude earthquake in Ishikawa Prefecture on the main island of Honshu generated tsunami waves up to one meter high.

- ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬದುಕಿನ “ಬ್ಯಾಗೇಜ್‌” ಇಳಿಸುವ ಸಮಯ ಇದು

ಹಳೆಯ ನೋವು, ಕೋಪ, ತಿರಸ್ಕಾರ ಮತ್ತು ನಿರೀಕ್ಷೆಗಳ ಭಾರವನ್ನು ಹೊಸ ಸಂಬಂಧಗಳ ಮೇಲೆ…

12 hours ago

ರೈತರಿಗೆ ವಿದ್ಯುತ್‌ ಶಾಕ್ – ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕಡಿತ- ಪರ್ಯಾಯ ಶಕ್ತಿಯ ಬಗ್ಗೆ ಯೋಚಿಸಲು ಸಕಾಲ

ಮಳೆ ಕೊರತೆ ಮತ್ತು ಜಲವಿದ್ಯುತ್ ಉತ್ಪಾದನೆ ಕುಸಿತದ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ…

18 hours ago

ಅ.29 ರಿಂದ ನ.11 ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ -12 ದಿನ ಸಾರ್ವಜನಿಕ ದರ್ಶನ

ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಅಕ್ಟೋಬರ್…

18 hours ago

ಪಿಎಂ-ಕುಸುಮ್ ಯೋಜನೆಯಿಂದ ರೈತರ ನೀರಾವರಿಗೆ ಸೌರಶಕ್ತಿ

ಪಿಎಂ-ಕುಸುಮ್ ಯೋಜನೆಯಡಿ ರೈತರ ನೀರಾವರಿ ಪಂಪ್‌ಗಳಿಗೆ ಸೌರಶಕ್ತಿ ಅಳವಡಿಸುವ ಮೂಲಕ ಡೀಸೆಲ್ ಅವಲಂಬನೆ…

19 hours ago

ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಬೆಂಕಿ – ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಘಟನೆ

ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡು…

19 hours ago

531 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ – ಈಗಲೇ ಮಾಡಬೇಕಾದ ಮುಂಜಾಗ್ರತಾ ಕ್ರಮಗಳು ಏನು..?

ಕರ್ನಾಟಕದ 111 ತಾಲೂಕುಗಳ ವ್ಯಾಪ್ತಿಯ 531 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು,…

19 hours ago