1998 OR2 ಎಂಬ ಹೆಸರಿನ ಕ್ಷುದ್ರ ಗ್ರಹವೊಂದು ಭಾರತೀಯ ಕಾಲಮಾನ ಪ್ರಕಾರ ಈ ಮಧ್ಯಾಹ್ನ 3.26 ಕ್ಕೆ ಭೂಮಿಯ ಸಮೀಪ ಹಾದು ಹೋಗಲಿದೆ ಎಂದು ನಾಸಾ ತಿಳಿಸಿದೆ.
ವಿಶ್ವದಾದ್ಯಂತ ಕೊರೊನಾ ಸೋಂಕು ಬಾಧಿಸಿರುವ ಈ ಸಮಯದಲ್ಲಿ ವಿಚಿತ್ರವೆಂದರೆ ಮುಖಕವಚ ಧರಿಸಿದಂತೆ ದೂರದರ್ಶಕದಲ್ಲಿ ಮಾತ್ರ ಕಾಣಬಹುದಾದ ಈ ಕ್ಷುದ್ರ ಗ್ರಹ ಭೂಕಕ್ಷೆಗಿಂತ 6.2 ಮಿಲಿಯನ್ ಕಿ.ಮೀ.ದೂರದಲ್ಲಿ ಹಾದುಹೋಗಲಿದ್ದು , ಭೂಮಿಗೆ ಯಾವುದೇ ಹಾನಿ ತಂದೊಡ್ಡದು ಎಂದು ನಾಸಾ ತಿಳಿಸಿದೆ.
ಎವರೆಸ್ಟ್ ಶಿಖರದಷ್ಟು ಅಂದರೆ ಹೆಚ್ಚು ಕಡಿಮೆ 1.5 ಕಿ.ಮೀ.ನಷ್ಟು ದೊಡ್ಡದಾದ ಈ ಕ್ಷುದ್ರ ಗ್ರಹದ ಪಥವನ್ನು ಅಮೇರಿಕಾದ ಬಾಹ್ಯಾಕಾಶದಿಂದ ಸಂಸ್ಥೆ – ನಾಸಾ ಅನೇಕ ದಿನಗಳಿಂದ ಗಮನಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭೂಕಕ್ಷೆಯ ಸಮೀಪ ಹಾದುಹೋಗುತ್ತಿರುವ ದೊಡ್ಡಮಟ್ಟಿನ ಕ್ಷುದ್ರ ಗ್ರಹ ಇದೆಂದು ಹೇಳಲಾಗುತ್ತಿದೆ. ಸಹಸ್ರಾರು ವರ್ಷಗಳ ಹಿಂದೆ ಭೂಮಿಯ ಮೇಲೆ ಕ್ಷುದ್ರ ಗ್ರಹ ಪತನದಿಂದಾಗಿ ಡೈನೋಸಾರ್ ನಂತಹ ಬೃಹತ್ ಜೀವಿಗಳ ನಾಶ ಆಗಿರಹುದು ಎಂದು ಅಂದಾಜಿಸಲಾಗಿದೆ. ಇಷ್ಟೊಂದು ದೊಡ್ಡಪ್ರಮಾಣದ ಕ್ಷುದ್ರ ಗ್ರಹ ಪತನವಾದರೆ ಅಣುಬಾಂಬಿಗಿಂತಲೂ ಅದಷ್ಟೋ ಅಧಿಕ ಪ್ರಮಾಣದ ಹಾನಿ ಸಂಭವಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಮಾಹಿತಿ :
ಪಿ ಜಿ ಎಸ್ ಎನ್ ಪ್ರಸಾದ್
ಕೋವಿಡ್-19 ಈಗ ನಮ್ಮ ಜೀವನದ ಭಾಗ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್…
ದಕ್ಷಿಣಕನ್ನಡ, ಉಡುಪಿ, ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆಯಾಗುತ್ತಿದೆ.…
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ 2 ಅಥವಾ 3…
ಕಳೆದ 16 ವರ್ಷಗಳ ದಾಖಲೆಗಳ ಪ್ರಕಾರ ನಿಗದಿತ ದಿನಕ್ಕಿಂತ ಮೊದಲೇ ಈ ಬಾರಿ…
ಉತ್ತಮ ಮಳೆಗೆ ಅರಣ್ಯ ಪ್ರದೇಶವೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ, ಮಳೆ ಹನಿಗಳಿಗೆ ಮೈಯೊಡ್ಡಿದ…
ರಾಜ್ಯದ ಅಡಿಕೆ ಬೆಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕ ಇಲ್ಲ.…