Advertisement
ಸುದ್ದಿಗಳು

ಅಡಿಕೆ ಬೆಳೆಗಾರರಿಗೂ ಧಾರಣೆಯ ಲಾಕ್ಡೌನ್ ? | ಕಾಂಗ್ರೆಸ್ ಮುಖಂಡ ವೆಂಕಪ್ಪ ಗೌಡ ಪ್ರಶ್ನೆ

Share

ಸುಳ್ಯ: ಲಾಕ್ಡೌನ್ ಹಿನ್ನೆಲೆಯಲ್ಲಿ ಅಡಿಕೆ , ಕೊಕೋವನ್ನು  ಕ್ಯಾಂಪ್ಕೋ ಸಂಸ್ಥೆ ಹಾಗೂ ಗೇರು ಬೀಜವನ್ನು ಸಹಕಾರಿ ಸಂಸ್ಥೆಗಳು ಖರೀದಿ ಮಾಡಲು ದಕ ಜಿಲ್ಲಾಡಳಿತ ಜವಾಬ್ದಾರಿ ವಹಿಸಿಕೊಟ್ಟಿರುದು ಶ್ಲಾಘನೀಯ. ಈ ಮೂಲಕ ಖರೀದಿ ಮಾಡುತ್ತಿರುವುದೂ ಅಭಿನಂದನೀಯ. ಆದರೆ ಅಡಿಕೆಗೆ 250 ರೂಪಾಯಿ ಹಾಗೂ ಗೇರುಬೀಜಕ್ಕೆ 70 ರೂಪಾಯಿಗೆ ಕಡಿಮೆಯಾಗದಂತೆ ಖರೀದಿ ಮಾಡಲು ನಿರ್ಧರಿಸಿತ್ತು. ಆದರೆ ಇಂದು ಅದೇ ಎಪಿಎಂಸಿ ಯಾರ್ಡ್ ನಲ್ಲಿ ಖಾಸಗಿ ವ್ಯಾಪಾರಿಗಳು ಅಡಿಕೆ ಹಾಗೂ ಕೊಕೋ, ಗೇರುಬೀಜ ಉತ್ತಮ ದರದಲ್ಲಿ  ಖರೀದಿ ಮಾಡುತ್ತಿದ್ದಾರೆ. ಅಡಿಕೆ ಬೆಳೆಗಾರರಿಗೆ ಧಾರಣೆಯಲ್ಲೂ ಲಾಕ್ಡೌನ್ ಇದೆಯೇ ಎಂದು ಕಾಂಗ್ರೆಸ್ ಮುಖಂಡ ವೆಂಕಪ್ಪ ಗೌಡ ಹೇಳಿದ್ದಾರೆ.

ಈ ಹಿಂದೆ ಅಡಿಕೆ ಕೆಜಿಗೆ 250 ರೂಪಾಯಿಗೆ ಕಡಿಮೆಯಾಗದಂತೆ ಹಾಗೂ ಗೇರುಬೀಜ 70 ರೂಪಾಯಿಗೆ ಕಡಿಮೆಯಾಗದಂತೆ ಖರೀದಿ ಮಾಡಲು ಈ ಹಿಂದೆ ಸಂಸ್ಥೆಗಳು ನಿರ್ಧರಿಸಿತ್ತು. ಇಂದು ಸುಳ್ಯ ಎಪಿಎಂಸಿ ಯಾರ್ಡ್ ನಲ್ಲಿ ಕ್ಯಾಂಪ್ಕೋ ಅಡಿಕೆಗೆ 250 – 255  ರೂಪಾಯಿ ದರಲ್ಲಿ ಖರೀದಿ ಮಾಡಿದರೆ  ಅದೇ ಯಾರ್ಡನಲ್ಲಿದ್ದ ಖಾಸಗಿ ವ್ಯಾಪಾರಿಗಳು 265  ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ. ಅದೇ ರೀತಿ ಗೇರು ಬೀಜಕ್ಕೆ ರೂ 85 ಕ್ಕೆ ಖರೀದಿ ಮಾಡಲಾಗುತ್ತಿದೆ.ಇದಕ್ಕೆ ರೈತಾಪಿ ವರ್ಗದವರು ಏನು ಹೇಳಬೇಕು ?. ಇದೂ ಲಾಕ್ಡೌನ್ ? ಎಂದು ಪ್ರಶ್ನಿಸಿದ್ದಾರೆ.

ಇದೆಲ್ಲಾ ಇದ್ದರೂ ಜನಪ್ರತಿನಿಧಿಗಳು ಇದಕ್ಕೂ ಅವರಿಗೂ ಸಂಬಂಧವೇ ಇಲ್ಲದಂತೆ ಕೂತಿರುದು ಸರಿಯೇ ?. ಇದೊಂದು ಸರಕಾರೀ ಸಂಸ್ಥೆಯಾಗಿದ್ದು ರೈತರನ್ನು ದರೋಡೆ ಮಾಡಿದಂತೆ ಅಲ್ವೇ ?  ಬೆಳೆಗಾರರಿಗೆ ಮಾಡುವ ಅನ್ಯಾಯ ಅಲ್ಲವೇ ? ವಾರಾಣಸಿ ಸುಬ್ರಾಯ ಭಟ್ ಅವರ ನೇತೃತ್ವದಲ್ಲಿ ಅಂದು ಹುಟ್ಟು ಹಾಕಿದ ಸಂಸ್ಥೆಯ ಉದ್ದೇಶ ರೈತ ಸಂಕಷ್ಟದಲ್ಲಿದ್ದಾಗ ಅವನ ಸಹಾಯಕ್ಕೆ ಧಾವಿಸಬೇಕು ಎಂಬುದಾಗಿತ್ತು.  ಆದರೆ  ಈಗಿನ ಆಡಳಿತದಲ್ಲಿ ಅದರ ಧ್ಯೇಯೋದ್ದೇಶ  ಬದಲಾಯಿತೇ ? ಈ ಸಂಕಷ್ಟ ಕಾಲದಲ್ಲೂ ರೈತರ ಶೋಷಣೆಯೇ ? ಇದನ್ನು ಕೇಳುವ ಸ್ವಭಾವದ ಜನಪ್ರತಿನಿಧಿಗಳು ಸುಳ್ಯಕ್ಕೆ ಇಲ್ಲದಂತಾಗಿರುದು ನಮ್ಮ ದುರಂತವೇ ಸರಿ ಎಂದು ವೆಂಕಪ್ಪ ಗೌಡ ಹೇಳಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

18 hours ago

ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!

ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…

18 hours ago

ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌

ಪಡಿತರ ಚೀಟಿಗೆ ಆಧಾರ್‌ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…

19 hours ago

ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ

ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…

19 hours ago

ಇಂಧನ ಮಾತ್ರವಲ್ಲ, ಕೃಷಿಗೂ ಹೊಸ ಮಾರುಕಟ್ಟೆ: ಎಥೆನಾಲ್‌ ಮಿಶ್ರಣ ಕೃಷಿ ವೈವಿಧ್ಯೀಕರಣಕ್ಕೆ ಹೆಜ್ಜೆ ಎಂದ ಗಡ್ಕರಿ

ಎಥೆನಾಲ್‌ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…

19 hours ago

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

2 days ago