ಗಣೇಶ ಹಬ್ಬ ವಿಶೇಷವಾಗಿ ನಡೆಯುವುದು ಮುಂಬೈನಲ್ಲಿ. ಲಕ್ಷಾಂತರ ಭಕ್ತರು ಇಲ್ಲಿ ಸೇರುತ್ತಾರೆ. ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ವಿಘ್ನೇಶ್ವರನ ಭಕ್ತರು ಬಗೆಬಗೆಯ ಗಣೇಶ ಮೂರ್ತಿಗಳನ್ನಕೂರಿಸಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸಕಲ ವಿಘ್ನಗಳು ನಿವಾರಣೆಯಾಗಲಿ ವಿನಾಯಕನು ನಂಬಿದ ಭಕ್ತರಿಗೆ ಬುದ್ಧಿ, ಆಯುಷ್ಯ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ದಯಪಾಲಿಸುತ್ತಾನೆ ಎಂಬ ನಂಬಿಕೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡುತ್ತಿದ್ದಾರೆ.
ಈ ಗಣೇಶನಿಗೆ ವೈಭವೋಪೇತ ಅಲಂಕಾರ ಮಾಡಲಾಗುತ್ತಿದ್ದು, ಈ ಸಲ ಅಲಂಕಾರಕ್ಕೆಂದೇ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿ ಬಳಸಲಾಗಿದೆ. ದುಬಾರಿ ಅಲಂಕಾರ ಮತ್ತಿತರ ಕಾರಣಗಳಿಂದಾಗಿ ಈ ಗಣೇಶನಿಗೆ ಪ್ರತಿವರ್ಷ ವಿಮೆ ಕೂಡ ಮಾಡಿಸಲಾಗುತ್ತಿದ್ದು, ಈ ಬಾರಿ 360 ಕೋಟಿ ರೂ.ಗೆ ವಿಮೆ ಮಾಡಿಸಲಾಗಿದೆ. ಕಳೆದ ವರ್ಷ ಜಿಎಸ್‌ಬಿ ಮಂಡಲವು 316.40 ಕೋಟಿ ರೂ. ವಿಮೆ ಮಾಡಿಸಿತ್ತು. ಆದರೆ ಈ ಬಾರಿ ವಿಮೆ ಮೊತ್ತವು 44 ಕೋಟಿ ರೂ. ಹೆಚ್ಚಾಗಿದೆ. ಅದ್ರೆ ಎಷ್ಟು ಪ್ರೀಮಿಯಂ ಪಾವತಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕೃತಗೊಳಿಸಿಲ್ಲ.
Source: News Agencies
ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಹೊಸತನದ ಶೋರೂಮ್ ಅನಾವರಣದ ಅಂಗವಾಗಿ ಮೇ 9…
ಮುಳಿಯ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ…
ರಾಜ್ಯದ 6 ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗುವಂತೆ ಶೀಥಲೀಕರಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದು…
ದೇಶದ ಸೈನಿಕರಿಗೆ ಗೌರವ ಸಲ್ಲಿಸಿ ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ನಾಳೆ…