ಮಾವಿಗೆ ಸಿಂಪಡಿಸಿದ ಔಷಧಿ ವಾಸನೆಗೆ 40 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಅಸ್ವಸ್ಥ…?

February 10, 2024
12:33 PM

ನಾವು ಬೆಳೆದ ಬೆಳೆ(Crop) ಚೆನ್ನಾಗಿ ಬರಬೇಕು. ಯಾವುದೇ ಕೀಟ(Insect), ಹುಳ, ಹಕ್ಕಿಗಳಿಂದ (Birds) ಬಾಧೆಗೆ ಒಳಗಾಗಬಾರದು ಅನ್ನುವುದು ಪ್ರತಿಯೊಬ್ಬ ರೈತನ(Farmer) ಆಸೆ. ಯಾವ ರೈತನೂ ತನಗೆ ಬರುವ ಫಸಲನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಇದಕ್ಕೆ ಅವನು ಮೊರೆ ಹೋಗೋದು ರಾಸಾಯನಿಕ(Chemical) ಸಿಂಪಡಣೆ(Pesticides). ಇದರಿಂದ ಆತನ ಬೆಳೆಯೇನೋ ಚೆನ್ನಾಗಿ ಬರಬಹುದು. ಆದರೆ ಅದನ್ನು ತಿಂದ ಮಾನವ(Human), ಹುಳು ಹುಪ್ಪಟೆ, ಪಕ್ಷಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ರೈತ ಹೀಗೆ ಮಾಡಿ ಏನೆಲ್ಲ ಅನಾಹುತ ಸಂಭವಿಸಬಹುದು..?  ಇದೊಂದು ಉದಾಹರಣೆ ಇದೆ.

ಶಾಲೆಗೆ(School)) ಹೊಂದಿಕೊಂಡಂತಿರುವ ಮಾವಿನ ತೋಟಕ್ಕೆ(Mango Farm) ಸಿಂಪಡಿಸಿದ ಔಷಧಿಯ ವಾಸನೆಯಿಂದ 40 ವಿದ್ಯಾರ್ಥಿಗಳು(Students), ಇಬ್ಬರು ಶಿಕ್ಷಕರು ಅಸ್ವಸ್ಥರಾದ ಘಟನೆ ತುಮಕೂರು(Tumkuru) ಜಿಲ್ಲೆ ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿಯ ಅಂಬಾ ಭವಾನಿ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅವರೆಲ್ಲಾ ಈಗ ಗುಣಮುಖರಾಗಿದ್ದಾರೆ. ಬುಧವಾರ ಶಾಲೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಮಧ್ಯಾಹ್ನದ ಊಟಕ್ಕೆ ಇವರು ಮೊಸರನ್ನ ಸೇವಿಸಿದ್ದರು.

ಇದೇ ವೇಳೆ, ಶಾಲೆಗೆ ಹೊಂದಿಕೊಂಡಂತಿರುವ ಮಾವಿನ ತೋಟಕ್ಕೆ ಔಷಧಿಯನ್ನು ಸಿಂಪಡಿಸುತ್ತಿದ್ದರು. ಈ ಸಂದರ್ಭದಲ್ಲಿ ವಾಸನೆ ಉಂಟಾಗಿದ್ದು, ಶಾಲೆಯ ಕಿಟಕಿಗಳನ್ನು ಹಾಕಿಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ನಂತರ, ಮನೆಗೆ ಹೋಗಿ ರಾತ್ರಿ ಊಟ ಮಾಡಿ ಮಲಗಿದರು. ಗುರುವಾರ ಬೆಳಗಿನ ಜಾವ ಇವರಿಗೆ ನಿತ್ರಾಣ, ರಕ್ತಭೇದಿ, ವಾಂತಿ, ತಲೆನೋವು ಸೇರಿ ಹಲವು ಸಮಸ್ಯೆಗಳು ಉಂಟಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಯಿತು.

ಈ ಪ್ರಕರಣದಲ್ಲಿ ಡಿಎಚ್‌ಒ ಡಾ. ಮಂಜುನಾಥ್‌ ಆಸ್ಪತ್ರೆಗೆ ಭೇಟಿ ನೀಡಿದರು. ಬಳಿಕ ಮಾತನಾಡಿ, ಪ್ರಾಥಮಿಕ ವರದಿ ಪ್ರಕಾರ ಆಹಾರದಲ್ಲಿ ವ್ಯತ್ಯಾಸವಾಗಿರುವ ಕಾರಣ ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು , ಕ್ರಿಮಿನಾಶಕದಿಂದಲ್ಲ. ಶಾಲಾ ಮಕ್ಕಳನ್ನು ಹೊರತುಪಡಿಸಿದರೆ ಶಾಲೆಯ ಅಕ್ಕಪಕ್ಕ ವಾಸವಿರುವ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆಯಾಗಿಲ್ಲ ಬಿಸಿಯೂಟದ ಬದಲು ಮೋಸರನ್ನ ನೀಡಿದ್ದೆ ಘಟನೆಗೆ ಕಾರಣವಾಗಿದೆ. ಶಾಲೆಯ ಆಡಳಿತ ಮಂಡಳಿಯವರು ಹಾಗು ಶಿಕ್ಷಕರು ಪ್ರಕರಣವನ್ನು ಮುಚ್ಚಿಹಾಕಲು ಮಾವಿನ ಗಿಡಗಳಿಗೆ ಔಷಧಿ ಸಿಂಪಡಣೆ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುತ್ತಿರುವುದು ಈಗ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ತೋಟಗಳಿಗೆ ಸವಾಲಾಗಿರುವ ಎಲೆಚುಕ್ಕಿ ರೋಗ – ವಿಜ್ಞಾನ ಏನು ಹೇಳುತ್ತದೆ?
January 9, 2026
7:43 AM
by: ಮಹೇಶ್ ಪುಚ್ಚಪ್ಪಾಡಿ
ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ
January 8, 2026
10:40 PM
by: ದ ರೂರಲ್ ಮಿರರ್.ಕಾಂ
ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ
January 8, 2026
10:34 PM
by: ದ ರೂರಲ್ ಮಿರರ್.ಕಾಂ
ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ
January 8, 2026
9:25 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror