ಭಾರತದ ರಬ್ಬರ್ ಉದ್ಯಮವು ಈ ಬಾರಿ ಶೇ.5 ರಷ್ಟು ಹೆಚ್ಚು ರಬ್ಬರ್ ಬಳಕೆಯ ನಿರೀಕ್ಷೆಯಲ್ಲಿದೆ. ಹೀಗಾಗಿ ಈ ವರ್ಷ 5% ಹೆಚ್ಚಿನ ರಬ್ಬರ್ ಉತ್ಪಾದನೆಯನ್ನು ರಬ್ಬರ್ ಉದ್ಯಮವು ನಿರೀಕ್ಷೆ ಮಾಡುತ್ತದೆ ಎಂದು ಅಖಿಲ ಭಾರತ ರಬ್ಬರ್ ಇಂಡಸ್ಟ್ರಿ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಹಣಕಾಸು ವರ್ಷದಲ್ಲಿ ಭಾರತದ ನೈಸರ್ಗಿಕ ರಬ್ಬರ್ ಉತ್ಪಾದನೆಯು 8 ಲಕ್ಷ ಮೆಟ್ರಿಕ್ ಟನ್ ಆಗಿತ್ತು. ಈ ವರ್ಷ ಇದಕ್ಕಿಂತ ಶೇ.5 ರಷ್ಟು ಹೆಚ್ಚು ರಬ್ಬರ್ ಉತ್ಪಾದನೆಯ ನಿರೀಕ್ಷೆಯಲ್ಲಿದ್ದೇವೆ ಎಂದು ರಮೇಶ್ ಹೇಳಿದ್ದಾರೆ. Economic Times ಗೆ ನೀಡಿದ ಮಾಹಿತಿಯಲ್ಲಿ ಈ ಅಂಶವನ್ನು ರಮೇಶ್ ಬಹಿರಂಗಪಡಿಸಿದ್ದಾರೆ. ಬೆಳೆಯುತ್ತಿರುವ ಅಟೊಮೊಬೈಲ್ ಕ್ಷೇತ್ರದ ಕಾರಣದಿಂದ ಟಯರ್ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ರಬ್ಬರ್ ಬೇಡಿಕೆ ಹೆಚ್ಚಿದೆ. ರಬ್ಬರ್ ಉದ್ಯಮದ ಬೆಳವಣಿಗೆಯ ಹಿಂದಿನ ದೊಡ್ಡ ಅಂಶ ಆಟೋಮೊಬೈಲ್ ಉದ್ಯಮದ ಬೆಳವಣಿಗೆ.
ಕಳೆದ ವರ್ಷ ಬೇಡಿಕೆಯ ಸರಿಯಾದ ಪೂರೈಕೆ ಇಲ್ಲದ ಕಾರಣದಿಂದ ಭಾರತದಲ್ಲಿ ಹೆಚ್ಚುತ್ತಿರುವ ರಬ್ಬರ್ ಬೇಡಿಕೆಯಿಂದಾಗಿ ಕಳೆದ ಹಣಕಾಸು ವರ್ಷದಲ್ಲಿ ಥೈಲ್ಯಾಂಡ್, ಮಲೇಷ್ಯಾ, ಶ್ರೀಲಂಕಾ ಮತ್ತು ವಿಯೆಟ್ನಾಂನಿಂದ ಸುಮಾರು 5 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗಿದೆ ಎಂದು ರಮೇಶ್ ಕೇಜ್ರಿವಾಲ್ ಹೇಳಿದ್ದಾರೆ.
ಈಗಿನಂತೆ ಎ.1 ರಿಂದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ…
ಪರಿಸರದ ಮೇಲೆ ಮೈಕ್ರೋಪ್ಲಾಸ್ಟಿಕ್ಗಳ ಪರಿಣಾಮವನ್ನು ತಗ್ಗಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಸಂಶೋಧನೆಗಳು ಹೇಳುತ್ತವೆ.…
ಮಿಜೋರಾಂನ ಕೊಲಾಸಿಬ್ ಜಿಲ್ಲೆಯಲ್ಲಿ ಸುಮಾರು 130 ಹೆಕ್ಟೇರ್ಗಳಷ್ಟು ಅರಣ್ಯ ಪ್ರದೇಶ ಸುಟ್ಟುಹೋಗಿರುವ ಬಗ್ಗೆ…
ಕಳೆದ 8 ವರ್ಷಗಳಲ್ಲಿ 11 ಶತಕೋಟಿ ಘನ ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನದನ್ನು…
ಹಾಲಿನ ದರವನ್ನ 4 ರೂ. ಹೆಚ್ಚಳ ಮಾಡಿರುವ ಸರ್ಕಾರದ ನಿರ್ಧಾರವನ್ನ ಮೈಮುಲ್ ಅಧ್ಯಕ್ಷ…