ಮೈಸೂರು ದಸರಾ | ನೈರುತ್ಯ ರೈಲ್ವೆಯಿಂದ 51 ಹೆಚ್ಚುವರಿ ವಿಶೇಷ ರೈಲು ಸೇವೆ

September 24, 2025
10:31 PM

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ರಾಜ್ಯ ಹಾಗೂ ಅಂತರಾಜ್ಯದಿಂದ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು, ಶಿವಮೊಗ್ಗ, ತಮಿಳುನಾಡು ಸೇರಿದಂತೆ ಇತರೆ ಸ್ಥಳಗಳಿಂದ 51 ಹೆಚ್ಚುವರಿ ವಿಶೇಷ ರೈಲಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ್ ಧರ್ಮರಾಜ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  51 ವಿಶೇಷ ರೈಲಿನಲ್ಲಿ 11 ಕಾಯ್ದಿರಿಸದ ವಿಶೇಷ ರೈಲು, 27 ಎಕ್ಸ್ ಪ್ರೆಸ್ ವಿಶೇಷ ರೈಲು, 3 ತಾತ್ಕಾಲಿಕ ನಿಲ್ದಾಣ ಸೌಲಭ್ಯಗಳು, 2 ತಾತ್ಕಾಲಿಕ ವಿಸ್ತರಣೆಗಳು ಹಾಗೂ 8 ರೈಲುಗಳು ಅವಧಿ ವಿಸ್ತರಣೆಗಳು ಸೇರಿವೆ ಎಂದು ಮಾಹಿತಿ ನೀಡಿದ್ದಾರೆ. ಜನಸಂದಣಿ ನಿಯಂತ್ರಣಕ್ಕಾಗಿ ಹೆಚ್ಚುವರಿ 70 ಸಿಬ್ಬಂದಿ ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಆರ್ ಪಿಎಫ್ ಹಾಗೂ ಜಿಆರ್ ಪಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ರೈಲ್ವೆ ನಿಲ್ದಾಣದ ಚಲನವಲನಗಳ ಬಗ್ಗೆ 50 ಸಿಸಿಟಿವಿ ಕ್ಯಾಮರಾಗಳ ಮೂಲಕ ನಿಗಾ ಇಡಲಾಗುವುದು ಎಂದು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Ballari homemaker R.J. Sujatha with medicinal plants in her rooftop garden
ತಾರಸಿ ಮೇಲೆ 150ಕ್ಕೂ ಹೆಚ್ಚು ಗಿಡಗಳ ಹಸಿರು ತೋಟ: ಔಷಧಿ ಸಸ್ಯಗಳಿಂದಲೇ ದಿನಬಳಕೆ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿರುವ ಗೃಹಿಣಿ
November 13, 2026
9:01 AM
by: ದ ರೂರಲ್ ಮಿರರ್.ಕಾಂ
Used cooking oil collected from hotels for biodiesel and non-food applications
ಬಳಕೆಯಾದ ಅಡುಗೆ ಎಣ್ಣೆ ವಿಲೇವಾರಿಗೆ ಅಧಿಕೃತ ಆ್ಯಪ್
November 13, 2026
8:30 AM
by: ದ ರೂರಲ್ ಮಿರರ್.ಕಾಂ
PM Modi addressing Kisan Tak Bharat Agriculture Conference 2026.
ಕೃಷಿಯಲ್ಲಿ ಶೇ.4ಕ್ಕೂ ಅಧಿಕ ಬೆಳವಣಿಗೆ, ಬೆಳೆ ವೈವಿಧ್ಯತೆಗೆ ಆದ್ಯತೆ – ರೈತರಿಗೆ ತಂತ್ರಜ್ಞಾನ ಅಳವಡಿಸಿಕೊಳ್ಳಲು ಪ್ರಧಾನಿ ಮೋದಿ ಕರೆ
November 13, 2026
8:04 AM
by: ದ ರೂರಲ್ ಮಿರರ್.ಕಾಂ
ಸಾವಯವ ಮತ್ತು ಪುನರುತ್ಪಾದಕ ಕೃಷಿ – ಮಣ್ಣಿನ ಆರೋಗ್ಯವೇ ಕೃಷಿಯ ಭವಿಷ್ಯ
November 12, 2026
8:48 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror