ಅಡಿಕೆ ಬೆಳೆಗೆ ಕಳೆದ ಹಲವಾರು ಸಮಯಗಳಿಂದ ರೋಗಗಳ ಬಾಧೆ ತೀವ್ರಗೊಂಡಿದೆ. ಎಲೆಚುಕ್ಕಿ ರೋಗ, ಹಳದಿ ಎಲೆರೋಗ ಬಾಧಿಸುತ್ತಿದೆ. ಪರಿಹಾರ ಕಾಣುತ್ತಿಲ್ಲ. ಈಚೆಗೆ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಕೃಷಿ ಸಚಿವರ ಗಮನಕ್ಕೂ ಈ ತರಲಾಗಿತ್ತು. ಈ ಸಂದರ್ಭ 67 ಕೋಟಿ ರೂಪಾಯಿ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ಕೇಂದ್ರ ಬಜೆಟ್‌ಗೂ ಮುನ್ನ ಚರ್ಚೆ ಆರಂಭವಾಗಿದೆ. ರಾಜ್ಯದಿಂದಲೂ ಈ ಸಮಸ್ಯೆಯನ್ನು ನಿಭಾಯಿಸಲು ತನ್ನ ಪಾಲನ್ನು ನಿಗದಿಪಡಿಸುವಂತೆ ಕೇಂದ್ರವು ಕೇಳಿದೆ.…..ಮುಂದೆ ಓದಿ….
ಅಡಿಕೆ ಮಾರುಕಟ್ಟೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಾಕಷ್ಟು ತೆರಿಗೆ ಪಾವತಿಯಾಗುತ್ತದೆ. ಆದರೆ ಅಡಿಕೆ ಬೆಳೆಗಾರರ ಸಮಸ್ಯೆಗೆ ನೆರವು ತೀರಾ ಕಡಿಮೆ ಪ್ರಮಾಣದಲ್ಲಿದೆ ಎಂದು ಈ ಹಿಂದೆಯೇ ಚರ್ಚೆಗಳು ನಡೆಯುತ್ತಿದ್ದವು. ಈ ಬಾರಿ ಅಡಿಕೆ ಹಳದಿ ಎಲೆರೋಗ ಹಾಗೂ ಅಡಿಕೆ ಎಲೆಚುಕ್ಕಿ ರೋಗದ ತೀವ್ರತೆ ಹೆಚ್ಚವಾಗಿ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಅಡಿಕೆ ಬೆಳೆಯಲ್ಲಿನ ರೋಗ ನಿಯಂತ್ರಣ, ಕೀಟ ನಿಯಂತ್ರಣಕ್ಕೆ 67 ಕೋಟಿ ಬಜೆಟ್ ನಿರೀಕ್ಷೆ ಮಾಡಲಾಗಿದೆ.
2025 ರಲ್ಲಿ ಕೃಷಿ ಅಭಿವೃದ್ಧಿ ಮತ್ತು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಬೆಳೆ ನಷ್ಟವನ್ನು ಕಡಿಮೆ ಮಾಡುವ ಬಗ್ಗೆ ಗಮನ ಹರಿಸುವ ಸಾಧ್ಯತೆಯಿದೆ. ಈ ನೆಲೆಯಲ್ಲಿ ಗಿಡಗಳಲ್ಲಿನ ರೋಗಗಳನ್ನು ಎದುರಿಸಲು 67 ಕೋಟಿ ರೂ.ಗಳ ಬಜೆಟ್ ಹಂಚಿಕೆ ಸಾಧ್ಯವಿದೆ. ಕೇಂದ್ರ ಸರ್ಕಾರವು ಫೆಬ್ರವರಿ 1 ರಂದು 2025-26 ರ ಬಜೆಟ್ ಅನ್ನು ಮಂಡಿಸಲಿದೆ. ಈ ಬಜೆಟ್‌ನಲ್ಲಿ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಮೀಸಲಿಟ್ಟ ಮೊತ್ತದಲ್ಲಿ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಈ ಸಂದರ್ಭ ಕೇಂದ್ರವು ಅಡಿಕೆ ಉತ್ಪಾದನೆಗೆ ವಿಶೇಷ ಗಮನ ಹರಿಸುವ ನಿರೀಕ್ಷೆಯಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು, ಈ ಬಾರಿ ಕೃಷಿ ಅಭಿವೃದ್ಧಿ ಹಾಗೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಜತೆಗೆ ಬೆಳೆ ನಷ್ಟ ತಗ್ಗಿಸುವತ್ತ ಗಮನ ಹರಿಸುವ ನಿರೀಕ್ಷೆ ಇದೆ. ಅಡಿಕೆಯಲ್ಲಿನ ರೋಗಗಳನ್ನು ಎದುರಿಸಲು 67 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲು ಶಿಫಾರಸು ಮಾಡಲಾಗಿದೆ. ಅಡಿಕೆ ಬೆಳೆಗೆ ಸಂಬಂಧಿಸಿದ ರೋಗಗಳ ಅಧ್ಯಯನ ಮಾಡಿದ ವಿಜ್ಞಾನಿಗಳ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಜಾರಿಗೊಳಿಸಬಹುದು. ಹೀಗಾಗಿ ಕೇಂದ್ರ ಸರ್ಕಾರವು ಅಡಿಕೆ ಬೆಳೆಗಾರರ ಈ ಸಮಸ್ಯೆಯನ್ನು ನಿಭಾಯಿಸಲು ತನ್ನ ಪಾಲನ್ನು ನಿಗದಿಪಡಿಸುವಂತೆ ಕೇಂದ್ರವು ಕರ್ನಾಟಕ ಸರ್ಕಾರವನ್ನು ಕೇಳಿದೆ.
ಶಿವಮೊಗ್ಗದಲ್ಲಿ ನಡೆದ ಅಡಿಕೆ ಬೆಳೆಗಾರರ ಸಭೆಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕೆ ರೋಗ ಅಡಿಕೆ ಗಿಡಗಳ ಮೇಲೆ ಪರಿಣಾಮ ಬೀರಿದೆ. ಇದಕ್ಕಾಗಿ ರಾಷ್ಟ್ರ ಮಟ್ಟದ ವಿಜ್ಞಾನಿಗಳ ಸಮಿತಿ ರಚಿಸಲಾಗಿತ್ತು. ಸಮಿತಿಯು ಎರಡೂ ರೀತಿಯ ರೋಗಗಳಿಂದ ಬಾಧಿತವಾಗಿರುವ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ರೈತರೊಂದಿಗೆ ಸಮಾಲೋಚನೆ ನಡೆಸಿತು ಎಂದು ಹೇಳಿದ್ದರು. ಹೀಗಾಗಿ ಈಗ ಪರಿಹಾರ ಕ್ರಮಗಳು ಅಗತ್ಯವಿದೆ. ಅಡಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಅಂದು ಹೇಳಿದ್ದರು. ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು 67 ಕೋಟಿ ರೂಪಾಯಿ ಅಗತ್ಯವಿದೆ ಎಂದು ಹೇಳಿದ್ದರು.
In the Budget for the year 2025, there is a potential emphasis on minimizing crop losses, enhancing agricultural development, and integrating modern technology into farming practices. This strategic focus aims to advance the agricultural sector by leveraging innovative technologies to increase efficiency and sustainability. Furthermore, there is a potential budgetary provision of Rs 67 crore specifically designated for addressing diseases affecting betel nut plants. This allocation underscores the government’s commitment to tackling specific challenges within the agricultural industry, thereby supporting the health and productivity of important cash crops.