ಸ್ನೇಹಿತರು ಜೊತೆಗಿದ್ರೆ ಏನು ಬೇಕಾದರು ಮಾಡಬಹುದು ಅನ್ನೋದಕ್ಕೆ ಇದು ಸ್ಪಷ್ಟ ಉದಾಹರಣೆ.. ಹಣೆ ಬರಹ ಎಷ್ಟೇ ಕೆಟ್ಟಿದ್ರು ಸ್ನೇಹಕ್ಕೆ ಅದನ್ನು ಸರಿ ಮಾಡುವ ತಾಕತ್ತು ಇರುತ್ತದೆ.
ಪ್ರತಿ ಬೇಸಿಗೆಯಲ್ಲೂ ಜೆಸ್ಸಿ ಸಾಬು ಮತ್ತು ಅವರ ಕುಟುಂಬಕ್ಕೆ ಅಗ್ನಿ ಪರೀಕ್ಷೆ. ಪತಿ ಸಾಬು ಮತ್ತು ಮೂವರು ಮಕ್ಕಳೊಂದಿಗೆ ಕೇರಳದ ಪತ್ತನಂತಿಟ್ಟದ ನಾರಣಮ್ಮೂಜಿಯಲ್ಲಿ ವಾಸಿಸುವ 45 ವರ್ಷದ ಜೆಸ್ಸಿ ಅವರು ಬೇಸಿಗೆಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರು.
ಆದರೆ, ಈ ಬಾರಿ ಅವರು ತುಂಬಾ ನಿರಾಳವಾಗಿದ್ದಾರೆ. ತನ್ನ ಮನೆಯ ಆವರಣದಲ್ಲಿಯೇ ಕುಡಿಯುವ ನೀರಿಗಾಗಿ ಬಾವಿ ತೋಡಲು ಸಹಾಯ ಮಾಡಿದ ಏಳು ಮಹಿಳೆಯರಿಗೆ ಧನ್ಯವಾದ ಹೇಳಿದ್ದಾರೆ.
ಪ್ರತಿ ವರ್ಷ ನೀರಿನ ಕೊರತೆ ಎದುರಿಸುತ್ತಿದ್ದರೂ, ಈ ಬಾರಿ ತಾಪಮಾನದ ತೀವ್ರ ಏರಿಕೆಯು ನಾರಣಮ್ಮೂಜಿ ಪಂಚಾಯಿತಿಯ ವಾರ್ಡ್ 2 ರಲ್ಲಿ ವಾಸಿಸುವ ಈ ಕುಟುಂಬವನ್ನು ಮತ್ತಷ್ಟು ಕಂಗೇಡಿಸಿತು. 2,000 ಲೀಟರ್ ನೀರಿಗೆ ಖಾಸಗಿ ಟ್ಯಾಂಕರ್‌ಗಳಿಗೆ 1,000 ರೂ. ಪಾವತಿಸಬೇಕಾಗಿತ್ತು. ಈ ನೀರು ಕೇವಲ ಒಂದು ವಾರಕ್ಕೆ ಸಾಕಾಗುತ್ತಿತ್ತು. ಪ್ರತಿ ಬೇಸಿಗೆಯಲ್ಲಿ ಬಟ್ಟೆ ಒಗೆಯಲು ಸುಮಾರು 7 ಕಿ.ಮೀ ದೂರದ ಪಂಪಾ ನದಿಗೆ ಹೋಗಲು ಜೆಸ್ಸಿ ಅವರು 400 ರೂ. ಆಟೋರಿಕ್ಷಾ ಬಾಡಿ ನೀಡುತ್ತಿದ್ದಾರೆ.
ವರ್ಷವಿಡೀ ಕುಡಿಯುವ ನೀರಿಗಾಗಿ ಈ ಕುಟುಂಬ ಟ್ಯಾಂಕರ್ ಲಾರಿಗಳ ಮೇಲೆ ಅವಲಂಬಿತವಾಗಿದ್ದರೂ, ಬೇಸಿಗೆಯಲ್ಲಿ ಬೆಲೆ ತೀವ್ರವಾಗಿ ಹೆಚ್ಚಾಗುತ್ತದೆ. ಒಂದು ಬಾವಿ ತೋಡಿದರೆ ತಮ್ಮ ನೀರಿನ ಸಮಸ್ಯೆ ಪರಿಹಾರವಾಗಬಹುದಾದರೂ, ಬಾವಿ ತೋಡುವ ಕಾರ್ಮಿಕರಿಗೆ ಪಾವತಿಸಲು ಅವರ ಬಳಿ ಹಣ ಇರಲಿಲ್ಲ. ಹೀಗಾಗಿ ತಾವೇ ಬಾವಿ ತೋಡಲು ನಿರ್ಧರಿಸಿ ಮಾ.2ರಂದು ಕಾಮಗಾರಿ ಆರಂಭಿಸಿದ್ದರು.
ತಮ್ಮ ಸ್ನೇಹಿತೆಯ ಕಷ್ಟವನ್ನು ಮನಗಂಡ ಮಹಿಳೆಯರು, ಮರಿಯಮ್ಮ ಥಾಮಸ್(52), ಲೀಲಮ್ಮ ಜೋಸ್(50), ಉಷಾಕುಮಾರಿ (51), ಲಿಲ್ಲಿ ಕೆಕೆ(51), ಕೊಚುಮೋಲ್(49), ರೆಜಿಮೋಲ್(42), ಮತ್ತು ಅನು ಥಾಮಸ್(34) ಅವರು ಜೆಸ್ಸಿ ಸಹಾಯ ಮಾಡಲು ಮತ್ತು ಉಚಿತವಾಗಿ ಕೆಲಸ ಮಾಡಲು ನಿರ್ಧರಿಸಿದರು.
“ಅವರಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಅಂತ ನನಗೆ ಅರ್ಥವಾಗುತ್ತಿಲ್ಲ. 4 ಮೀಟರ್ ವರೆಗೆ ಅಗೆದಾಗ ಸ್ವಲ್ಪ ನೀರು ನೋಡಿದೆವು. ನಾವು ಸುಮಾರು 7 ಮೀಟರ್ ಆಳಕ್ಕೆ ಹೋದರೆ ನೀರು ಸಿಗುತ್ತದೆ ಎಂದು ಭಾವಿಸಿದ್ದೇವೆ. ಬಂಡೆಗಳಿಂದ ಕೂಡಿದ ಭೂಮಿ ಕೊರೆಯುವುದು ಸವಾಲಾಗಿತ್ತು. ಆದಾಗ್ಯೂ, ನೀರು ಬರುವವರೆಗೆ ಬಿಡುವುದು ಬೇಡ ಎಂದು ನಾವು ನಿರ್ಧರಿಸಿದ್ದೇವೆ” ಎಂದು ಜೆಸ್ಸಿ ಹೇಳಿದ್ದಾರೆ.
ಗುಜರಾತ್ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾದಲ್ಲಿ ಪಾನ್ ಬೀಡಾಕ್ಕೆ ಬಳಕೆ ಮಾಡುವ ಅಡಿಕೆ ಬೆಲೆ…
ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ…
ಪ್ರಕೃತಿಯಲ್ಲಿ ಇರುವ ಡಿಎನ್ಎ, ಪ್ರೋಟೀನ್ಗಳಂತೆ ಪ್ಲಾಸ್ಟಿಕ್ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ…
2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು…
ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)…
ಗ್ರಾಮೀಣ ವಿದ್ಯುದ್ದೀಕರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಉಪಯುಕ್ತತೆ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಬಳಸಿದ ರೈತರಿಗೆ…