ಪುತ್ತೂರು: ಅಡಿಕೆ ಮಾರುಕಟ್ಟೆ ಈಗ ಏರಿಕೆಯ ಹಾದಿಯಲ್ಲಿದೆ. ಕಳೆದ ಎರಡು ವಾರಗಳಿಂದ ಅಡಿಕೆ ಧಾರಣೆ ಏರಿಕೆಯಾಗುತ್ತಿದೆ. ಆದರೆ ಮಾರುಕಟ್ಟೆ ಕಡೆಗೆ ಈಗ ಅಡಿಕೆ ಬೆಳೆಗಾರರು ಕೂಡಾ ನಿಗಾ ವಹಿಸಬೇಕಾದ ಅಗತ್ಯ ಇದೆ. ಜನವರಿ ವೇಳೆಗೆ ಬರ್ಮಾದಿಂದ ಅಡಿಕೆಯು ಕಳ್ಳ ದಾರಿ ಮೂಲಕ ಬರುವ ಸಾಧ್ಯತೆ ಇದೆ. ಕಳೆದ ವರ್ಷವೂ ಇದೇ ಮಾದರಿಯಲ್ಲಿ ಜನವರಿಯಲ್ಲಿ ಅಡಿಕೆ ಕಳ್ಳ ದಾರಿಯಲ್ಲಿ ಬಂದಿತ್ತು. ಅದು ಕಳಪೆ ಗುಣಮಟ್ಟದ ಅಡಿಕೆಯಾಗಿದ್ದರೂ ಇಲ್ಲಿನ ಮಾರುಕಟ್ಟೆಯ ಮೇಲೆ ಒಮ್ಮೆಲೇ ಹೊಡೆತ ನೀಡಬಹುದಾಗಿದೆ.
ಸದ್ಯಕ್ಕೆ ಅಡಿಕೆ ಮಾರುಕಟ್ಟೆಯಲ್ಲಿ ಸಂಸತಸ ವಾತಾವರಣ ಇದೆ. ಡಿಸೆಂಬರ್ ನಂತರ ಇದೇ ಸಂತಸ ಉಳಿಯಬೇಕಾದರೆ ಮಾರುಕಟ್ಟೆಯಲ್ಲಿ ಹಿಡಿತ ಇರಲೇ ಬೇಕಿದೆ. ಅನಗತ್ಯ ಏರಿಕೆ ಹಾಗೂ ಇಳಿಕೆ ಸಾಮಾನ್ಯ ಅಡಿಕೆ ಬೆಳೆಗಾರರ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈಗಲೇ ಹಿಡಿತ ಹಾಗೂ ನಿಯಂತ್ರಣ ಅಗತ್ಯವಿದೆ. ಕಳೆದ ಬಾರಿ ಕೊಳೆರೋಗ ವಿಪರೀತ ಬಾಧಿಸಿದ ಕಾರಣದಿಂದ ಅಡಿಕೆಯ ಕೊರತೆ ಮಾರುಕಟ್ಟೆಯಲ್ಲಿದೆ. ಈ ನಡುವೆ ಬರ್ಮಾದಿಂದ ಅಡಿಕೆ ಬರಲು ಸಿದ್ಧತೆ ನಡೆಸಿದೆ. ಇದು ಕಳಪೆ ಗುಣಮಟ್ಟದ ಅಡಿಕೆಯಾದರೂ ಈಗಿನ ಪರಿಸ್ಥಿತಿಯಲ್ಲಿ ಈ ಅಡಿಕೆ ಆಮದು ತಡೆಗೆ ಸಾಧ್ಯವಿಲ್ಲ.
ಶ್ರೀಲಂಕಾ, ಬಾಂಗ್ಲಾ ಮೊದಲಾದ ಕಳ್ಳದಾರಿಯಲ್ಲಿ ಅಡಿಕೆ ಬರದಂತೆ ತಡೆಗೆ ಕೇಂದ್ರ ಸರಕಾರ ವ್ಯವಸ್ಥೆ ಮಾಡಿದ್ದರೂ ಭಾರತದೊಳಗೆ ಅಡಿಕೆ ತರಲು ಪ್ರಯತ್ನ ನಡೆಸಿದ್ದಾರೆ ಎಂಬ ಸುಳಿವು ಲಭ್ಯವಾಗಿದ್ದು ಜನವರಿ 15 ರ ಹೊತ್ತಿಗೆ ಭಾರತದೊಳಕ್ಕೆ ಆಗಮಿಸಿ ಇಲ್ಲಿನ ಅಡಿಕೆ ಜೊತೆ ಸೇರಿಸುವ ಪ್ರಯತ್ನ ನಡೆದಿದೆ. ಹೀಗಾಗಿ ಅಡಿಕೆ ಮಾರುಕಟ್ಟೆ, ಧಾರಣೆಗೆ ಈಗಲೇ ನಿಯಂತ್ರಣ ಬೇಕಿದೆ. ಸದ್ಯ ಅನಗತ್ಯವಾಗಿ ಮಾರುಕಟ್ಟೆ ಏರಿಳಿಕೆ ಮಾಡಿ ನಂತರ ಬರ್ಮಾ ಅಡಿಕೆ ಜೊತೆ ಸೇರಿಸಿ ಮಾರಾಟ ಮಾಡುವ ಆಟವೊಂದು ಸಜ್ಜಾಗುತ್ತಿದೆ. ಅಡಿಕೆ ಬೆಳೆಗಾರರು ಈಗ ಮಾರುಕಟ್ಟೆ ಅಧ್ಯಯನ ನಡೆಸಿ ಅಡಿಕೆಯನ್ನು ಮಾರುಕಟ್ಟೆಗೆ ಬಿಟ್ಟರೆ ಜನವರಿ ನಂತರ ಎಪ್ರಿಲ್- ಮೇ ವರೆಗೂ ಅಡಿಕೆ ಧಾರಣೆ ಸ್ಥಿರತೆ ಕಾಣಬಹುದು.
ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…
ʼಕಾಯಕ ಗ್ರಾಮʼ ಯೋಜನೆಯಡಿ ಹಿಂದುಳಿ ದಿರುವ ಗ್ರಾಮ ಪಂಚಾಯತಿಯನ್ನು ದತ್ತು ಸ್ವೀಕಾರ ಮಾಡಬೇಕೆಂದು…
ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು…
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿಗೆ ಸೂರ್ಯಕಾಂತಿ ಖರೀದಿಗೆ ಕೇಂದ್ರ ಅನುಮತಿ…
ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಅವರು ಅಗಿಲೆಯಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ…
ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಕರಾವಳಿ ಆಂಧ್ರಪ್ರದೇಶ, ಯಾಣಂ, ರಾಯಲಸೀಮಾ, ತೆಲಂಗಾಣ, ಕರ್ನಾಟಕ,…