MIRROR FOCUS

ಬತ್ತಿದ ನದಿಗೆ ನೀರು ಹರಿಸಿದ ಕರುಣಾಮಯಿ ಕೃಷಿಕ | ವನ್ಯಜೀವಿಗಳ ದಾಹ ನೀಗಿಸಲು ಶಿವಮೊಗ್ಗದ ರೈತನ ಹೊಸ ಪ್ರಯತ್ನ

Share

 ನದಿ ಪಾತ್ರದಲ್ಲಿ ವಾಸಿಸುವ ಅನೇಕ ಕೃಷಿಕರು(Farmer) ನದಿ ನೀರನ್ನು(Watre) ಅವಲಂಬಿಸಿ ಕೃಷಿ ಚಟುವಟಿಕೆ(Agriculture) ಮಾಡುತ್ತಾರೆ. ಹಾಗೆ ಬೇಸಗೆಯಲ್ಲಿ(summer) ಬೋರ್‌ ವೆಲ್‌(Bore well), ಬಾವಿ(Well), ಕೆರೆ(Lake) ಬತ್ತಿದಾಗ ಅನೇಕರು ಮೊರೆ ಹೋಗೋದು ನದಿ ನೀರನ್ನು(River water). ಆದರೆ ನದಿ ನೀರೆ ಬತ್ತಿ ಹೋದರೆ ಏನು ಮಾಡೋದು. ಮನುಷ್ಯರಾದ ನಾವು ಹೇಗೋ ಬೇರೆಡೆ ಹೋಗಿ ನೀರು ತರಬಹುದು. ಆದರೆ ಪ್ರಾಣಿ ಪಕ್ಷಿಗಳು(Animal-Birds) ಏನು ಮಾಡೋದು. ಆದರೆ ಇಲ್ಲೋಬ್ಬ ರೈತ ಕೇವಲ ಪ್ರಾಣಿ ಪಕ್ಷಿಗಳಿಗಾಗಿ ನದಿಗೇ ತನ್ನ ಕೊಳವೇ ಬಾವಿಯಿಂದ ನೀರನ್ನು ಹರಿಸುತ್ತಿದ್ದಾರೆ.

Advertisement

ಶಿವಮೊಗ್ಗ ಜಿಲ್ಲೆಯ ರೈತನೊಬ್ಬ ನದಿಗೆ (River) ನೀರು ಹಾಯಿಸುವ ಕೆಲಸ ಮಾಡುತ್ತಿದ್ದಾರೆ : ಹೌದು, ಹೊಸನಗರ ತಾಲೂಕಿನ ಅರಸಾಳು ಗ್ರಾಮದ ಸುಡೂರಿನ ಮಂಜುನಾಥ ಭಟ್‌ ಎಂಬ ರೈತರು ಈ ರೀತಿಯಾಗಿ ನದಿಗೆ ನೀರು ಹರಿಸುವ ಕಾಯಕ ಮಾಡುತ್ತಾ ಬಂದಿರುವುದಾಗಿ ‘ಉದಯವಾಣಿ’ ವರದಿ ಮಾಡಿದೆ. ಇವರ ಕೃಷಿ ಜಮೀನಿಗೆ ಪಕ್ಕದಲ್ಲೇ ಕುಮುದ್ವತಿ ನದಿ ಹರಿಯುತ್ತದೆ. ಆದರೆ, ಈ ಬಾರಿಯ ಸುಡು ಬಿಸಿಲಿನಿಂದ ನದಿಯೂ ಬತ್ತಿ ಹೋಗಿದೆ.

ಪ್ರತಿ ಬೇಸಿಗೆಯಲ್ಲೂ ಈ ಕುಮುದ್ವತಿ ನದಿಯನ್ನೇ ಪ್ರಾಣಿ, ಪಕ್ಷಿಗಳು ಅವಲಂಬಿಸಿಕೊಂಡು ಬಂದಿದೆ. ಈ ಸಲ ನದಿಯಲ್ಲೇ ನೀರು ಇಲ್ಲದ್ದಾಗಿದ್ದು ಪ್ರಾಣಿ, ಪಕ್ಷಿಗಳ ದಾಹಕ್ಕೆ ಮಂಜುನಾಥ ಭಟ್‌ ಅವರು ಪರಿಹಾರ ಕಂಡುಕೊಂಡಿದ್ದಾರೆ. ಪ್ರತಿದಿನ ತಮ್ಮ ಕೃಷಿಗೆ ಬಳಸುವ ಕೊಳವೆಬಾವಿಯ ನೀರನ್ನು ಪೈಪ್‌ ಬಳಸಿ ನದಿಗೆ ಜೋಡಿಸಿ ನೀರು ಹರಿಸುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಒಂದು ವೇಳೆ ಕರೆಂಟ್‌ ಇಲ್ಲದೇ ಹೋದಲ್ಲಿ ಡೀಸೆಲ್‌ ಎಂಜಿನ್‌ ಮೋಟಾರ್‌ ಬಳಸಿ ನೀರು ಹರಿಸುತ್ತಾ ಬಂದಿದ್ದಾರೆ. ಇದರಿಂದಾಗಿ ವನ್ಯಜೀವಿಗಳು ನೀರು ಕುಡಿದು ತಮ್ಮ ದಾಹವನ್ನು ನೀಗಿಸಿಕೊಳ್ಳುತ್ತಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 07-04-2025 | ಕೆಲವೆಡೆ ಇಂದೂ ಮಳೆ ನಿರೀಕ್ಷೆ | ಎ.9 ರಿಂದ ಅಲ್ಲಲ್ಲಿ ಸಾಧಾರಣ ಮಳೆಯ ಸಾಧ್ಯತೆ |

ಇಂದು ಕೆಲವು ಕಡೆ ಮಳೆ ನಿರೀಕ್ಷೆ ಇದೆ. ಈಗಿನಂತೆ ರಾಜ್ಯದ ಎಪ್ರಿಲ್ 9ರಿಂದ…

51 minutes ago

ಜೇನು ಹುಳಗಳ ಸಂಖ್ಯೆ ಗಣನೀಯ ಇಳಿಕೆ | ಜೇನು ಕುಟುಂಬ ಉಳಿಸುವ ಅಭಿಯಾನ |

ವಿಶ್ವದ ಪ್ರಮುಖವಾದ 107 ಬೆಳೆಗಳಲ್ಲಿ ಸುಮಾರು 70% ಗೆ ಬೆಳೆಗಳು ಜೇನುನೊಣಗಳಂತಹ ಪರಿಸರ…

3 hours ago

ಹುಲಿಸಂರಕ್ಷಿತ ಪ್ರದೇಶಲ್ಲಿ ರಾತ್ರಿ ಸಂಚಾರ ನಿಷೇಧ | ನಿಷೇಧ ತೆರವುಗೊಳಿಸದಂತೆ ಒತ್ತಾಯಿಸಿ ಪ್ರತಿಭಟನೆ

ಬಂಡಿಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧ  ತೆರವುಗೊಳಿಸಬಾರದು ಎಂದು…

8 hours ago

ರಾಜ್ಯದಲ್ಲಿ 100 ಹೊಸ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ನಿರ್ಧಾರ | ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ 100 ಹೊಸ ವಿದ್ಯುತ್ ಉಪ ಕೇಂದ್ರಗಳನ್ನು ಸ್ಪಾಪಿಸಲಾಗುವುದು ಎಂದು ಇಂಧನ ಸಚಿವ…

8 hours ago

ದೇಶದ ಜಿಡಿಪಿ 4.5ಲಕ್ಷ ಕೋಟಿ ರೂಪಾಯಿ ಏರಿಕೆ ಸಾಧ್ಯತೆ | ನಿರ್ಮಲಾ ಸೀತಾರಾಮನ್‌ ಅಭಿಪ್ರಾಯ

ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ಬಂದರೆ ಭಾರತವು ಶೇಕಡ 1.5…

9 hours ago

ಬೆಂಗಳೂರಿನಲ್ಲಿ ಗುಡುಗು ಸಹಿತ ಹಗುರ ಮಳೆಯ ಸಾಧ್ಯತೆ | ಹವಾಮಾನ ಇಲಾಖೆ

ಬೆಂಗಳೂರಿನಲ್ಲಿ ಭಾಗಶಃ ಮೋಡಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಹಗುರ ಮಳೆಯಾಗಲಿದೆ ಎಂದು…

9 hours ago