ಆಧುನಿಕ ಹಾಲಿನ ಗುಣಮಟ್ಟ | ದೇಸೀ ದನಗಳ ಶ್ರೇಷ್ಟತೆ ಏನು ? | ಕೃಷಿಕ ಎ ಪಿ ಸದಾಶಿವ ಹೇಳುತ್ತಾರೆ ಇಲ್ಲಿ.. |

October 17, 2021
10:47 AM

ಆಧುನಿಕ ಹಸುಗಳ ಹಾಲು ಹಾಲಾಹಲ, ದೇಸಿ ದನಗಳ ಹಾಲು ಅಮೃತ ಸಮಾನ ಇಂತಹ ಮಾತುಗಳು ಅಲ್ಲಲ್ಲಿ ಆಗಾಗ ಲೇಖನಗಳ ಮೂಲಕ ಭಾಷಣಗಳ ಮೂಲಕ ಕೇಳಿಬರುತ್ತವೆ. ಒಂದಷ್ಟು ಜನರಿಗೆ ಇರಿಸು ಮುರುಸಾಗಿ ಆಧುನಿಕ ಹಾಲನ್ನು ಸಮರ್ಥಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ. ಕಳೆದ ಐದು ವರ್ಷದ ಹಿಂದಿನ ವರೆಗೆ ನಾನು ಇದೇ ಸಮರ್ಥನೆಯನ್ನು ಮಾಡುತ್ತಿದ್ದೆ. ಯಾವಾಗ ಕೃಷಿ ಸಹಾಯಕರ ಸಮಸ್ಯೆ ತೀವ್ರವಾಯಿತೋ, ಆಗ ಹಸುಗಳ ಅನಾರೋಗ್ಯವು ಬೆಟ್ಟದಷ್ಟು ದೊಡ್ಡ ಸಮಸ್ಯೆಯಾಯಿತು.

ಆದರೆ, ನಾನು ನಂಬಿದ ಸಾವಯವ ಕೃಷಿಗೆ,ಸ್ವಾವಲಂಬಿ ಕೃಷಿಗೆ ಹಸುವಿನ ಗೊಬ್ಬರಕ್ಕೆ ಸಮಾನವಾದ ಬೇರೆ ಯಾವುದೂ ನನಗೆ ಕಂಡುಬರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ದೇಶಿ ಹಸು ಗಳನ್ನು ಸಾಕುವ ಕಡೆಗೆ ಮುಖ ಮಾಡಿದೆ. ದೇಶಿ ಹಸುಗಳ ಒಳಿತು-ಕೆಡುಕುಗಳ ಬಗ್ಗೆ ಆಧುನಿಕ ಹಸುಗಳ ಸಮಸ್ಯೆಯ ಬಗ್ಗೆ ನಾನು ಈಗಾಗಲೇ ಬರೆದಿರುತ್ತೇನೆ. ಆಧುನಿಕ ಹಾಲಿನ ಗುಣಮಟ್ಟದ ಬಗ್ಗೆ ನನ್ನ ತರ್ಕಕ್ಕೆ ನಿಲುಕಿದ ಕೆಲವು ವಿಷಯಗಳನ್ನು ಪ್ರಸ್ತಾಪಿಸಬೇಕು ಅನಿಸಿತು…

  • ತೋಟದಲ್ಲಿ ಅಡಿಕೆ ಗಿಡಗಳಿಗೆ ಬೀಜಗಳನ್ನು ಆಯ್ಕೆಮಾಡುವಾಗ ರೋಗರಹಿತ ಮರಗಳನ್ನು, ವರುಷ ವರುಷವೂ ಚೆನ್ನಾದ ಫಸಲು ಬರುವ ಮರಗಳನ್ನು, ನಡು ಪ್ರಾಯದ ಮರಗಳನ್ನು ಆಯ್ಕೆ ಮಾಡುವುದು ಯಾಕೆ?
  • ತರಕಾರಿ ಬೀಜಗಳನ್ನು ಸಂಗ್ರಹಿಸುವಾಗ ಆರಂಭದ ಫಸಲಿನ ಕಾಯಿಗಳ ಬೀಜವನ್ನು ಸಂಗ್ರಹಿಸುವುದಲ್ಲದೆ ಕೊನೆಯಲ್ಲಿ ಬಂದ,ರೋಗ ಬಂದ ಮೇಲಿನ ಬೀಜಗಳನ್ನು ಸಂಗ್ರಹಿಸುವ ಕ್ರಮ ಇದೆಯೇ?
  •  ದನಕರುಗಳಲ್ಲಿಯೇ ಆಗಲಿ ಹೋರಿಯನ್ನು ಆಯ್ಕೆಮಾಡುವಾಗ ರೋಗರಹಿತ, ಉತ್ತಮ ಹಾಲು ಕೊಡುವ ದನಗಳ ಕರುಗಳನ್ನು ಆಯ್ಕೆ ಮಾಡುವುದು ಯಾಕೆ?
  •  ವಧು ವರರ ಆಯ್ಕೆಮಾಡುವಾಗ ದುಶ್ಚಟಗಳಿಲ್ಲದ,ಅನುವಂಶಿಕ ಕಾಯಿಲೆಗಳು ಇಲ್ಲದ ಕುಟುಂಬವನ್ನು ಆಯ್ಕೆ ಮಾಡುವುದು ಯಾಕೆ?
  •  ತಂದೆ-ತಾಯಿಗಳಿಗೆ ತೀವ್ರ ಅನಾರೋಗ್ಯ ಸಮಸ್ಯೆ ಬರುವುದಕ್ಕೆ ಮೊದಲೇ ಮಕ್ಕಳಾಗಬೇಕು ಎಂದು ಹೇಳುವುದು ಯಾಕೆ?
  •  ಅತಿಯಾದ ಅಮಲು ಪದಾರ್ಥ ಸೇವಿಸಿ ಪ್ರತಿನಿತ್ಯ ಜಗಳವಾಡಿಕೊಂಡು ಬೆಳೆಯುವ ಸಂಸಾರದಲ್ಲಿ ಬೆಳೆದ ಮಕ್ಕಳು ಅದೇ ರೀತಿ ಆಗುವುದು ಯಾಕೆ?
  •  ಕಲಬೆರಕೆ ಇಲ್ಲದ ಶುದ್ಧವಾದ ಆಹಾರವನ್ನು ಬಯಸುವುದು ಯಾಕೆ?

ಇಂತಹ ಹಲವಾರು ಪ್ರಶ್ನೆಗಳು ನಮ್ಮ ಮುಂದೆ ಪ್ರತಿನಿತ್ಯ ಕಾಣುತ್ತದೆ. ಅಲ್ಲೆಲ್ಲಾ ಉತ್ತಮವಾದುದನ್ನೇ ಶುದ್ಧವಾದುದನ್ನೇ ಬಯಸುವ ನಾವು ತಾಯಿ ಹಾಲಿನ ನಂತರದ ಅತ್ಯಂತ ಉತ್ಕೃಷ್ಟ ಆಹಾರವಾದ ಹಾಲಿನಲ್ಲಿ ಶುದ್ಧತೆಯನ್ನು ಪರಿಗಣಿಸಬೇಡವೇ?

ಅನುದಿನವು ಒಂದಲ್ಲ ಒಂದು ಸಮಸ್ಯೆಗಳಿಂದ( ನಾನು ಈ ಹಿಂದೆ ಬರೆದಂತೆ) ಬಳಲುವ ದನಗಳ ಹಾಲು ಯಾವುದೇ ಸಮಸ್ಯೆಗಳಿಲ್ಲದೆ, ಯಾವುದೇ ಔಷಧೀಯ ಪರಿಹಾರಗಳಿಲ್ಲದೆ ಬದುಕುವ ದನಗಳ ಹಾಲಿಗೆ ಸಮವಾದೀತೇ? ಸ್ವಲ್ಪ ಬಿಸಿಲಿಗೆ ಹೋದರೂ ಏದುಸಿರು ಬಿಡುವ ಅಥವಾ ಸೂರ್ಯಾಘಾತಕ್ಕೆ ಒಳಗೊಳ್ಳುವ ದನಗಳ ಹಾಲು ಎಂತಹ ಬಿಸಿಲನ್ನಾದರೂ ಜೀರ್ಣಿಸಿಕೊಂಡು ಮೇದು ಬರುವ ದನಗಳ ಹಾಲಿಗೆ ಸಮವಾಗಬಹುದೇ?

ದೇಸಿ ದನಗಳನ್ನು ಸಾಕಿದ ಮೇಲಿನ ಅನುಭವ ಮತ್ತೆ ಮತ್ತೆ ಅದರ ಶ್ರೇಷ್ಠತೆಯನ್ನು ಸಾರಿ ಹೇಳುತ್ತದೆ.

# ಎ.ಪಿ. ಸದಾಶಿವ ಮರಿಕೆ

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಸುನಿತಾ ವಿಲಿಯಮ್ಸ್ ಈ ಸಮಾಜಕ್ಕೆ ಸ್ಫೂರ್ತಿ ಏಕೆ…?
March 17, 2025
10:34 AM
by: ವಿವೇಕಾನಂದ ಎಚ್‌ ಕೆ
ಮುಂದಿನ ಸೂರ್ಯಗ್ರಹಣದ ಪ್ರಭಾವಗಳು ಏನು..? ಯಾವ ರಾಶಿಯವರಿಗೆ ಉತ್ತಮ..?
March 17, 2025
6:13 AM
by: ದ ರೂರಲ್ ಮಿರರ್.ಕಾಂ
ಅಂತರಂಗ | ಸ್ವಾರ್ಥರಹಿತ ಬೇಡಿಕೆಗಳಿಗೆ ರಾಜಕೀಯದಲ್ಲಿ ಮಾನ್ಯತೆಯಿಲ್ಲ…!
March 16, 2025
8:13 AM
by: ರಮೇಶ್‌ ದೇಲಂಪಾಡಿ
ಬದುಕು ಪುರಾಣ | ಎಲ್ಲರೊಳಗೂ ‘ಕುಂಭಕರ್ಣ’ನಿದ್ದಾನೆ!
March 16, 2025
8:00 AM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror