Advertisement
ಸುದ್ದಿಗಳು

ಕಾಶ್ಮೀರ ಕಣಿವೆಯ ಕಾಡುಗಳಲ್ಲಿ ಅಳಿವಿನ ಅಂಚಿನಲ್ಲಿರುವ ಅಪರೂಪದ ಕಾಡು ಮೇಕೆ

Share

ಕಾಶ್ಮೀರ ಕಣಿವೆಯ ಕಾಡುಗಳಲ್ಲಿ ಅತ್ಯಂತ  ಗಮನ ಸೆಳೆಯುವ ಪೀರ್ ಪಂಜಾಲ್ ಪರ್ವತಶ್ರೇಣಿಯಲ್ಲಿ ಕಡಿದಾದ ಬಂಡೆಗಳ ಮೇಲೆ ಒಂದೊಂದು ಕಲ್ಲಿನ ಅಂಚಿನಿಂದ ಇನ್ನೊಂದಕ್ಕೆ ಜಿಗಿಯುತ್ತಾ ಸಂಚರಿಸುವ ಪ್ರಾಣಿ ಕಾಶ್ಮೀರ್ ಮಾಕ್ಹೋರ್. ಇದು ವಿಶ್ವದ ಅತಿದೊಡ್ಡ ಕಾಡು ಮೇಕೆಗಳಲ್ಲಿ ಒಂದಾಗಿದ್ದು, ಸುಮಾರು 101 ಕೆಜಿ ತೂಕವಿರುತ್ತದೆ. ಉದ್ದವಾದ, ಸುರುಳಿಯಾಕಾರದ ಕಾರ್ಕ್‌ಸ್ಕ್ರೂ ಕೊಂಬುಗಳು, ಗಲ್ಲ–ಕುತ್ತಿಗೆ–ಭುಜಗಳ ಮೇಲೆ ಹರಡುವ ರಫ್ ಮತ್ತು ಕಂದು ಬಣ್ಣದ ಗಟ್ಟಿಮುಟ್ಟಾದ ಮೈಕಟ್ಟು ಇದಕ್ಕೆ ವಿಶೇಷ ಆಕರ್ಷಣೆ ನೀಡುತ್ತವೆ.

ಅದ್ಭುತ ಚುರುಕುತನ ಹೊಂದಿರುವ ಈ ಪರ್ವತ ಮೇಕೆಗಳು, ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು ಸುಮಾರು 90 ಡಿಗ್ರಿಯಷ್ಟು ಇಳಿಜಾರುಗಳಲ್ಲಿಯೂ ಸುಲಭವಾಗಿ ಸಂಚರಿಸಬಲ್ಲವು. ಇವುಗಳನ್ನು ನೋಡಿದರೆ ಪರ್ವತಗಳೇ ಜೀವಂತ ರೂಪ ಪಡೆದುಕೊಂಡಂತೆಯೇ ಕಾಣುತ್ತದೆ.

ಹಿಂದೂ ಕುಶ್–ಹಿಮಾಲಯನ್ ಪ್ರದೇಶದಲ್ಲಿ ಮಾರ್ಖೋರ್‌ನ ಮೂರು ಉಪಜಾತಿಗಳು ಕಂಡುಬರುತ್ತವೆ. ಪ್ರತಿಯೊಂದು ಉಪಜಾತಿಯನ್ನೂ ಅದರ ಕೊಂಬಿನ ತಿರುಚುವಿಕೆ ಮೂಲಕ ಗುರುತಿಸಲಾಗುತ್ತದೆ. ಕಾಶ್ಮೀರ ಮಾರ್ಖೋರ್ ಭಾರತದಲ್ಲಿ ಬಹುಕಾಲ ಅಳಿದುಹೋಗಿದೆ ಎಂದು ಭಾವಿಸಲಾಗಿತ್ತು. ಆದರೆ 2004ರಲ್ಲಿ ಜಮ್ಮು ಮತ್ತು ಕಾಶ್ಮೀರ ವನ್ಯಜೀವಿ ಸಂರಕ್ಷಣಾ ಇಲಾಖೆ ಹಾಗೂ ಪ್ರಕೃತಿ ಸಂರಕ್ಷಣಾ ಪ್ರತಿಷ್ಠಾನದ ಸಹಯೋಗದಲ್ಲಿ Wildlife Trust of India ನಡೆಸಿದ ರಾಜ್ಯವ್ಯಾಪ್ತಿ ಸಮೀಕ್ಷೆಯಲ್ಲಿ ಈ ಮೇಕೆ ಬೆಳಕಿಗೆ ಬಂದಿದೆ.

ಸಮೀಕ್ಷೆಯ ಪ್ರಕಾರ, ಪೀರ್ ಪಂಜಾಲ್‌ನ ಬನಿಹಾಲ್ ಪಾಸ್‌ನಿಂದ ಝೀಲಂ ನದಿಯ ಉತ್ತರಕ್ಕೆ ಶಂಶಬರಿ ಶ್ರೇಣಿವರೆಗೆ ಅದರ ಐತಿಹಾಸಿಕ ವ್ಯಾಪ್ತಿಯಲ್ಲಿ ಕೇವಲ 300ರಿಂದ 350 ಮಾರ್ಖೋರ್‌ಗಳು ಮಾತ್ರ ಉಳಿದುಕೊಂಡಿವೆ. ಇಂದು ಕಾಜಿನಾಗ್ ಶ್ರೇಣಿಯು ಭಾರತದಲ್ಲಿ ಇದರ ಕೊನೆಯ ಪ್ರಮುಖ ಭದ್ರಕೋಟೆಯಾಗಿ ಉಳಿದಿದೆ. ಇದಲ್ಲದೆ ಶೋಪಿಯಾನ್‌ನ ಹಿರ್ಪೋರಾ ವನ್ಯಜೀವಿ ಅಭಯಾರಣ್ಯ, ಪೂಂಚ್‌ನ ತಟ್ಟಕುಟಿ ವನ್ಯಜೀವಿ ಅಭಯಾರಣ್ಯ ಮತ್ತು ಖಾರಾ ಗಲಿ ಸಂರಕ್ಷಣಾ ಮೀಸಲು ಪ್ರದೇಶಗಳಲ್ಲಿ ಸಣ್ಣ, ವಿಭಜಿತ ಜನಸಂಖ್ಯೆಗಳು ಇನ್ನೂ ಕಂಡುಬರುತ್ತಿವೆ.

ಪರಿಸರದ ದೃಷ್ಟಿಯಿಂದ ಮಾರ್ಖೋರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇವು ಮಿಶ್ರ ಆಹಾರ ಪದ್ಧತಿಯನ್ನು ಹೊಂದಿದ್ದು, ಹುಲ್ಲುಗಳು, ಗಿಡಮೂಲಿಕೆಗಳು, ಪೊದೆಗಳು, ಎಲೆಗಳು ಹಾಗೂ ಕೊಂಬೆಗಳನ್ನು ತಿನ್ನುತ್ತವೆ. ಇದರಿಂದ ಅತಿಯಾದ ಸಸ್ಯ ಬೆಳವಣಿಗೆಯನ್ನು ನಿಯಂತ್ರಿಸಿ, ಮಣ್ಣಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತವೆ. ಮಾರ್ಖೋರ್‌ಗಳ ಆರೋಗ್ಯಕರ ಜನಸಂಖ್ಯೆ ಎಂದರೆ ಆರೋಗ್ಯಕರ ಪರ್ವತ ಪರಿಸರ ವ್ಯವಸ್ಥೆಯ ಸಂಕೇತ. ಜೊತೆಗೆ ಹಿಮ ಚಿರತೆ, ಸಾಮಾನ್ಯ ಚಿರತೆ ಮತ್ತು ತೋಳಗಳಂತಹ ಪರಭಕ್ಷಕಗಳಿಗೆ ಇವು ಪ್ರಮುಖ ಬೇಟೆಯಾಗಿ ಆಹಾರ ಸರಪಳಿಯಲ್ಲಿ ಅವಿಭಾಜ್ಯ ಪಾತ್ರ ವಹಿಸುತ್ತವೆ.

Advertisement

ಆಗಸ್ಟ್ 2025ರಲ್ಲಿ ಜರ್ನಲ್ ಫಾರ್ ನೇಚರ್ ಕನ್ಸರ್ವೇಶನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮಾಕ್ಹೋರ್ ಒಂದು ಶ್ರೇಣಿ-ನಿರ್ಬಂಧಿತ ಪರ್ವತ ಗೊರಸುಳ್ಳ ಪ್ರಾಣಿ. ಮೇ ಮತ್ತು ಜೂನ್ ತಿಂಗಳುಗಳಲ್ಲಿ ಮಾರ್ಖೋರ್‌ಗಳ ಸಂತಾನೋತ್ಪತ್ತಿ ಅವಧಿ ಆರಂಭವಾಗುತ್ತದೆ. ಮೇ ಮತ್ತು ಸೆಪ್ಟೆಂಬರ್ ನಡುವೆ ಕಾಜಿನಾಗ್ ಪ್ರದೇಶಕ್ಕೆ ಮಾತ್ರವೇ ಸುಮಾರು 15,000 ಕುರಿ ಮತ್ತು ಮೇಕೆಗಳು ಪ್ರವೇಶಿಸುತ್ತವೆ. ಪರಿಸರ ಸಮತೋಲನ ಮತ್ತು ಅಪರೂಪದ ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ, ಕಾಶ್ಮೀರ ಮಾರ್ಖೋರ್ ಉಳಿವಿಗೆ ತಕ್ಷಣದ ಹಾಗೂ ಪರಿಣಾಮಕಾರಿ ಸಂರಕ್ಷಣಾ ಕ್ರಮಗಳು ಅತ್ಯಾವಶ್ಯಕವೆಂದು ತಜ್ಞರು ಎಚ್ಚರಿಸುತ್ತಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!

ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…

2 hours ago

ಕಳಪೆ ಅಡಿಕೆ ಪತ್ತೆ | 15.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…

3 hours ago

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ

ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್‌ Z ಗಾಗಿ…

11 hours ago

ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ

ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…

12 hours ago

ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?

ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…

12 hours ago

ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾನ್‌ ಅವರು…

12 hours ago