Opinion

ಬೆಂಗಳೂರಿನಿಂದ ಉತ್ತರಕಾಶಿಗೆ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಹೋದ ಸೈನಿಕರ ತಂಡ : ಯಾರು ಈ ಮದ್ರಾಸ್ ಸ್ಯಾಪರ್ಸ್..?

Share

ಈಗ ಹದಿನೈದು ದಿನಗಳಿಂದ ಉತ್ತರಕಾಶಿಯ(Uttarakashi) ಬಳಿಯಲ್ಲಿ ನಿರ್ಮಾಣದ ಹಂತದಲ್ಲಿದ್ದ ಸುರಂಗವೊಂದು(Tunnel) ಮಧ್ಯದಲ್ಲಿ ಕುಸಿದು, ಅಲ್ಲಿ ಕೆಲಸಮಾಡುತ್ತಿದ್ದ 41 ಜನ ಕಾರ್ಮಿಕರು(Workers) ಅಲ್ಲಿ ಸಿಲುಕಿಹಾಕಿಕೊಂಡಿದ್ದಾರೆ. ಸಮಾಧಾನದ ವಿಷಯವೆಂದರು ಎಲ್ಲರೂ ಸುರಕ್ಷಿತವಾಗಿದ್ದಾರೆ. ಒಂದು ತುರ್ತಾಗಿ ಕೊರೆದ ಆರು ಇಂಚಿನ ಪೈಪಿನ ಮುಖಾಂತರ ಅವರಿಗೆ ಆಮ್ಲಜನಕ, ಆಹಾರ, ಔಷಧಿ(Oxygen, Food, Medicine) ಮತ್ತು ಅವಶ್ಯಕ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿದೆ. ಈ ಪರಿಹಾರ ಕಾರ್ಯಕ್ಕೆ ಬೇಕಾದ ಆಧುನಿಕ ಆಗುರ್ ಎನ್ನುವ ಕೊರೆಯುವ ಯಂತ್ರವನ್ನು ಭಾರತೀಯ ವಾಯುಸೇನೆಯ(Indian Army) ವಿಮಾನ ಅಮೆರಿಕಾದಿಂದ(America) ತೆಗೆದುಕೊಂಡು ಬಂತು. ಆದರೆ ಈ ಯುಂತ್ರವೂ ಕೊರೆಯುತ್ತಿದ್ದಾಗ ಶಿಲಾಖಂಡರಾಶಿಯಲ್ಲಿ ಸಿಕ್ಕಿಹಾಕಿಕೊಂಡು ಮುರಿದೇ ಹೋಯಿತು. ಹೇಗೋ ಮಾಡಿ ಆ ಯಂತ್ರವನ್ನು ಹೊರಗೆ ಎಳೆಯಲಾಗಿದೆ.

Advertisement

ಜನರಲ್ ವಿ.ಕೆ. ಸಿಂಗ್ ರವರು ಈ ಕಾರ್ಯಾಚರಣೆಯ ಬಗ್ಗೆ ತೀವ್ರ ಕಾಳಜಿ ವಹಿಸಿದ್ದಾರೆ. ಇನ್ನೇನು ಹತ್ತು ಮೀಟರಿನಷ್ಟು ಕೊರೆದರೆ ಆ ಕಾರ್ಮಿಕರನ್ನು ಹೊರತೆಗೆದು ರಕ್ಷಿಸಬಹುದು, ಆದರೆ ಅದು ಅಷ್ಟು ಸುಲಭದ ಕೆಲಸವಲ್ಲಾ, ಅಲ್ಲಿ ಬಂಡೆಗಳು ಸಿಕ್ಕರೆ ಅವುಗಳನ್ನು ಕೊರೆಯುವಾಗ ಮತ್ತೊಮ್ಮೆ ಆ ಸುರಂಗ ಕುಸಿದುಬಿಡುವ ಅಪಾಯವಿದೆ. ಈಗ ಬೆಂಗಳೂರಿನಿಂದ 30 ಸೈನಿಕರ ತಂಡವೊಂದನ್ನು ಉತ್ತರಕಾಶಿಗೆ ಕಳುಹಿಸಿಕೊಡಲಾಗಿದೆ.

ಮದ್ರಾಸ್ ಸ್ಯಾಪರ್ಸ್(Madras sappers) ಎನ್ನುವ ಹೆಸರಿನ ಈ ತಂಡ ಪರಂಪರಾಗತವಾಗಿ, ಅಂದರೆ ಸುಮಾರು ಎರಡು ಶತಕಗಳ ಕಾಲುವೆ ತೋಡುವ, ಕಂದಕ ಕೊರೆಯುವ ಮತ್ತು ಸುರಂಗಗಳನ್ನು ನಿರ್ಮಿಸುವ ಅನುಭವ ಇರುವ ಸೈನ್ಯದ ತಂಡ(Army). ತಂಬಿ ಎನ್ನುವ ಈ ಸೈನಿಕರ ಘಟಕ, ಬೆಂಗಳೂರಿನಲ್ಲಿ(Bengaluru) ಈಗ ಸುಮಾರು 190 ವರ್ಷಗಳಿಂದ ನೆಲಸಿದ್ದಾರೆಂದರೆ ಆಶ್ಚರ್ಯವಾಗಬಹುದು. ಇನ್ನೂ ಐತಿಹಾಸಿಕ ಅಚ್ಚರಿ ಏನೆಂದರೆ ಇವರನ್ನು ಮದ್ರಾಸಿನಿಂದ (Madras)ಕರೆತರಲು ಮದ್ರಾಸಿನಿಂದ ಬೆಂಗಳೂರಿಗೆ ರೈಲು ಸಂಪರ್ಕ(Rail) ನಿರ್ಮಿಸಿ. ಬೆಂಗಳೂರಿನ ದಂಡು ರೈಲ್ವೆ ನಿಲ್ದಾಣವನ್ನು ನಿರ್ಮಿಸಲಾಯಿತು. ಅಸಲಿಗೆ ಕಬ್ಬನ್ ಪಾರ್ಕಿನಿಂದ(Cubben Park) ಹಿಡಿದು ಬೆಂಗಳೂರಿನ ಕಂಟೋನ್ಮೆಂಟನ್ನು ಕಟ್ಟಿದ್ದೇ ಇವರು.

ಇಲ್ಲಿದೆ ಬೆಂಗಳೂರಿನಲ್ಲಿರುವ ಮದ್ರಾಸಿ ತಂಬಿಗಳ ಬಗೆಗಿನ ಸಂಕ್ಷಿಪ್ತ ಮಾಹಿತಿ.
ಆಂಗ್ಲ-ಮೈಸೂರು ಸರಣಿಯುದ್ಧಗಳ ಕೊನೆಯದಾಗಿ 1799 ರಲ್ಲಿ ನಡೆದ ನಾಲ್ಕನೇ ಯುದ್ಧದಲ್ಲಿ ಬ್ರಿಟಿಷರು ಜಯಗಳಿಸಿ, ಟಿಪ್ಪೂವನ್ನು ಕೊಂದು ಶ್ರೀರಂಗಪಟ್ಟಣವನ್ನು ಮತ್ತು ಮೈಸೂರು ಸಂಸ್ಥಾನವನ್ನು ವಶಪಡಿಸಿಕೊಂಡರು. ಯುದ್ಧಾನಂತರ ಬ್ರಿಟಿಷ್ ಮತ್ತು ಭಾರತೀಯ ಸೈನಿಕರು ಕಾವೇರಿ ತೀರದ ಶ್ರೀರಂಗಪಟ್ಟಣದಲ್ಲಿ ಮಲೇರಿಯಾ ಹಾವಳಿಗೆ ತುತ್ತಾಗಿ ಸಾಯತೊಡಗಿದರು. ಇದರಿಂದ ಎಚ್ಚೆತ್ತುಕೊಂಡು ಬ್ರಿಟಿಷ್ ಸರ್ಕಾರ ತನ್ನ ಸೈನ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಂಡಿತು. ಜಾನ್ ಬ್ಲಾಕಿಸ್ಟೋನ್ ಎನ್ನುವ ಬ್ರಿಟಿಷ್ ಸೈನ್ಯದ ಎಂಜಿನಿಯರ್ ಒಬ್ಬರು ಆಗಿನ ಬೆಂಗಳೂರಿನ ಹೊರವಲಯದಲ್ಲಿ ಸೈನ್ಯಕ್ಕೆಂದೇ 1806 ರಲ್ಲಿ ಒಂದು ವಸಾಹತಿನ ವಿನ್ಯಾಸವನ್ನು ರಚಿಸಿದನು. 

ಒಂದು ಕಡೆ ಬೆಂಗಳೂರು ಪೇಟೆ ಮೈಸೂರಿನ ಮಹಾರಾಜರ ಆಡಳಿತಕ್ಕೊಳಪಟ್ಟಿದ್ದರೆ, ಸುಮಾರು 35 ಚದರ ಕಿಲೋಮೀಟರ್ ವಿಸ್ತೀರ್ಣದ ಬೆಂಗಳೂರು ದಂಡು ನೇರವಾಗಿ ಬ್ರಿಟಿಷರ ನಿಯಂತ್ರಣದಲ್ಲಿತ್ತು. ಆಂಗ್ಲ- ಮೈಸೂರಿನ ನಡುವೆ ನಡೆದ ಸರಣಿ ಯುದ್ಧಗಳಲ್ಲಿ ಮದ್ರಾಸಿನ ಪಯೊನಿಯರ್ ಘಟಕಗಳು ಕಂದಕಗಳನ್ನು ತೋಡುವಲ್ಲಿ, ಸುರಂಗಗಳನ್ನು ನಿರ್ಮಿಸುವುದರಲ್ಲಿ ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿ ಬ್ರಿಟಿಷ್ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. ಆಂಗ್ಲ ಭಾಷೆಯ sappers ಅಂದರೆ ಕಾಲುವೆ ತೋಡುವವರು ಅಂತಾ, ಹಾಗಾಗಿ ಬೆಂಗಳೂರಿನ ನೂತನ ದಂಡುಪ್ರದೇಶವನ್ನು ಇದೇ ಮದ್ರಾಸ್ ಸ್ಯಾಪರ್ಸ್ ಘಟಕಕ್ಕೆ ವಹಿಸಿಕೊಡಲಾಯಿತು.

ಬ್ರಿಗೇಡ್ ರೋಡ್, ಇನ್ಫೆಂಟರಿ ರೋಡ್, ಕ್ಯಾವಲ್ರೀ ರೋಡ್, ಆರ್ಟಿಲರಿ ರೋಡ್...ಹೀಗೆ ಸೈನ್ಯಕ್ಕೆ ಸಂಬಂಧಿಸಿದಂತೆ ರಸ್ತೆಗಳ ಹೆಸರುಗಳನ್ನಿಡಲಾಯಿತು. ಹಲಸೂರನ್ನು ಕೇಂದ್ರವಾಗಿಟ್ಟುಕೊಂಡು Army Group Royal Artillery Maidan (AGRAM) ಸೃಷ್ಟಿಯಾಯಿತು. ಬೆಂಗಳೂರು ಪೇಟೆ ಮತ್ತು ದಂಡುಪ್ರದೇಶದ ನಡುವೆ ವಿಶಾಲವಾದ ಕಬ್ಬನ್ ಪಾರ್ಕ್ ನಿರ್ಮಾಣ ಮಾಡಿ, ಅಲ್ಲಿಂದ ಮದ್ರಾಸ್ ಸ್ಯಾಪರ್ಸ್ ಘಟಕಕ್ಕೆ ಸೌತ್ ಪರೇಡ್ ಎನ್ನುವ ರಸ್ತೆಯನ್ನು ನಿರ್ಮಿಸಿದರು, ಅದನ್ನ ಈಗ MG ರೋಡ್ ಎಂದು ಕರೆಯುತ್ತೇವೆ.

ಕೇವಲ ಸೈನಿಕರ ಸಂಚಾರಕ್ಕೆಂದೇ 1832 ರಲ್ಲಿ ಮದ್ರಾಸಿನಿಂದ ಬೆಂಗಳೂರಿಗೆ ರೈಲ್ವೇ ಸಂಪರ್ಕ ಕಲ್ಪಿಸಲಾಯಿತು. ಮುಂದೆ 1834 ರಲ್ಲಿ ಕಂಟೋನ್ಮೆಂಟ್ ರೈಲುನಿಲ್ದಾಣ ಸ್ಥಾಪನೆಗೊಂಡು ನಾಗರೀಕರು ಸಹಾ ಬೆಂಗಳೂರಿನಿಂದ, ಮದ್ರಾಸಿಗೆ ರೈಲು ಪ್ರಯಾಣದ ಸೌಕರ್ಯವನ್ನು ಒದಗಿಸಲಾಯಿತು. ಅದೇ ಸಮಯದಲ್ಲಿ ಅಲ್ಲಿದ್ದ ಮದ್ರಾಸ್ ಎಂಜನೀಯರಿಂಗ್ ಮುಖ್ಯಾಲಯ ಸಮೇತ ಮದ್ರಾಸ್ ಸ್ಯಾಪರ್ಸ್ ಸಂಪೂರ್ಣವಾಗಿ ಬೆಂಗಳೂರಿಗೆ ಬಂದಿಳಿಯಿತು. ಈಗ 189 ವರ್ಷಗಳಾಯಿತು ಮದ್ರಾಸ್ ಎಂಜಿನೀಯರ್ ಗ್ರೂಪ್ (MEG) ಬೆಂಗಳೂರಿಗೆ ಬಂದಿಳಿದು. ಆಗಿನ ಬೆಂಗಳೂರಿನ ಹೊರವಲಯದಲ್ಲಿದ್ದ ಹಲಸೂರು ಕೆರೆಯ ಹತ್ತಿರ ತಮ್ಮ ಘಟಕವನ್ನು ಸ್ಥಾಪಿಸಿದರು. ಈಗಲೂ ಈ ಕೆರೆ ಸುರಕ್ಷಿತವಾಗಿ, ಸುಂದರವಾಗಿ ಇರಲು ಕಾರಣ, ಈ ತಂಬಿಗಳ ನಿರ್ವಹಣೆ ಇಂದಾಗಿ.

ಇಲ್ಲಿ ಕೆಲಸಮಾಡಲು ಬಹಳಷ್ಟು ಜನ ತಮಿಳರು ಮತ್ತು ಇತರೆ ದೂರ ಪ್ರದೇಶಗಳಿಂದ ವಲಸಿಗರು ಬಂದಿಳಿದರು. ಸೈನ್ಯದ ತಾಂತ್ರಿಕ ಮತ್ತು ಇತರ ಸರಕು ಸಾಗಾಣಿಕೆಯ ಅವಶ್ಯಕತೆಗಳನ್ನು ಪೂರೈಸಲು ಹಲವಾರು ಉದ್ಯಮಗಳು ಹುಟ್ಟಿಕೊಂಡವು. ಮೊದಲನೇ ವಿಶ್ವಯುದ್ಧದ ಸಮಯದಲ್ಲಿ ಬ್ರಿಟಿಷ್ ಮತ್ತು ನಾಲ್ಮಡಿ ಕೃಷ್ಣರಾಜ ಒಡೆಯರರ ಸೈನ್ಯ ಉತ್ತರ ಈಜಿಪ್ಟ್ ಮತ್ತು ಮೆಸಪಟೋಮಿಯಾ ವಲಯಗಳಲ್ಲಿ ನಡೆದ ಯುದ್ಧಗಳಲ್ಲಿ ಪಾಲ್ಗೊಂಡಿದ್ದರು. ಮದ್ರಾಸ್ ಎಂಜಿನಿರಿಂಗ್ ಗ್ರೂಪ್ ತಯಾರಿಸಿದ ಟಾರ್ಪೆಡೋಗಳು ಯುದ್ಧದಲ್ಲಿ ಬಹು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದವು. ಈಗಲೂ “ಬೆಂಗಳೂರು ಟಾರ್ಪೆಡೋ” ಎಂದು ಹೆಸರುವಾಸಿಯಾಗಿರುವ ಈ ಸ್ಪೋಟಕವನ್ನು ಹಲವಾರು ದೇಶಗಳು ನೆಲದಲ್ಲಿ ಹೂತ ಬಾಂಬುಗಳನ್ನು ನಿಷ್ಕ್ರಿಯಗೊಳಿಸಲು ಉಪಯೋಗಿಸಿತ್ತಿದ್ದಾರೆ. ಯುದ್ಧಾನಂತರ ಸೈನ್ಯವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಹಲವಾರು ಸೈನ್ಯ ಸಂಬಂಧಿತ ಕಾರ್ಖಾನೆಗಳು ಬೆಂಗಳೂರಿನಲ್ಲಿ ಪ್ರಾರಂಭಗೊಂಡವು. ಬೆಂಗಳೂರಿನಲ್ಲಿ HAL ವಿಮಾನ ಕಾರ್ಖಾನೆ ಮತ್ತು ವಿಮಾನ ನಿಲ್ದಾಣ ನಿರ್ಮಾಣವಾಗಲು ಈ ಬೆಳವಣಿಗೆಗಳೇ ಕಾರಣ.

ಈಗ ಈ MEG ಘಟಕದ ಸೈನಿಕರು ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿರುವ ಸೈನಿಕರನ್ನು ಸುರಕ್ಷಿತವಾಗಿ ಹೊರತರಲು ಸನ್ನದ್ಧರಾಗಿದ್ದಾರೆ. ಅತ್ಯಾಧುನಿಕ ಯಂತ್ರಗಳೇ ವಿಫಲಗೊಂಡ ಈ ಕಾರ್ಯಾಚರಣೆಯಲ್ಲಿ ಈಗ ಮಾನವ ಶ್ರಮದಿಂದ ಸುರಂಗ ಕೊರೆಯುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇವರ ಶ್ರಮಕ್ಕೆ ಜಯ ಲಭಿಸಲಿ ಹಾಗು ಇವರನ್ನು ಮತ್ತು ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ಆ ಭಗವಂತ ಸುರಕ್ಷಿತವಾಗಿ ಅವರವರ ಮನೆಗಳಿಗೆ ಕಳುಹಿಸಲಿ ಎಂದು ಪ್ರಾರ್ಥಿಸೋಣ.

ವಿಂಗ್ ಕಮಾಂಡರ್ ಸುದರ್ಶನ

Named Madras sappers, this team is a heritage army team with almost two centuries of experience in digging canals, digging trenches and building tunnels. It may come as a surprise that this unit of soldiers has been stationed in Bangalore for almost 190 years now. Another historical surprise is to build a rail link from Madras to Bangalore to bring them from Madras. Dandu Railway Station was constructed in Bangalore. He actually built Bangalore Cantonment from Cubbon Park.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ |14.04.2025 | ಕರಾವಳಿ ಕೆಲವು ಕಡೆ ಗುಡುಗು ಸಹಿತ ಮಳೆ | ಎ.19ರ ನಂತರ ಮಳೆಯ ಪ್ರಮಾಣ ತೀರಾ ಕಡಿಮೆ |

15.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

4 hours ago

ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ

ಸ್ಮಾರ್ಟ್ ಕೃಷಿಯು ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನ, ಯಾಂತ್ರೀಕರಣ ಮತ್ತು…

10 hours ago

ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ

ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಜೂನ್ 30ರಿಂದ…

11 hours ago

ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ | ಸಚಿವ ಅಮಿತ್‌ ಶಾ ಹೇಳಿಕೆ

ಇಂದು ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗುತ್ತಿದೆ. 8 ಲಕ್ಷಕ್ಕೂ ಅಧಿಕ ಸಹಕಾರಿ ಸಂಘಗಳು…

11 hours ago

ಈ 5 ವಸ್ತು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಶ್ರೀಮಂತರಾಗುವುದು ಗ್ಯಾರಂಟಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

11 hours ago

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು, ಶಿವಮೊಗ್ಗ, ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ…

18 hours ago