ಕಳೆದ ಕೆಲವು ಸಮಯಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷ ಸದ್ದು ಮಾಡುತ್ತಿದೆ. ಈಚೆಗೆ ಸಕ್ರಿಯ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆಯೇ ದ ಕ ಜಿಲ್ಲೆಯಲ್ಲಿ ಚುನಾವಣಾ ಕಣಕ್ಕೆ ಇಳಿಯಲು ಆಮ್ ಆದ್ಮಿ ಪಕ್ಷ ಸಜ್ಜಾಗುತ್ತಿದೆ. ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಎಎಪಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.
ಆಮ್ ಆದ್ಮಿ ಪಕ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಅಭಿವೃದ್ಧಿಯ ಅಜೆಂಡಾ ಇರಿಸಿಕೊಂಡು ಮುನ್ನೆಲೆಗೆ ಬಂದಿರುವ ಎಎಪಿ ಇದೀಗ ದ ಕ ಜಿಲ್ಲೆಯಲ್ಲೂ ತನ್ನದೇ ಆದ ಅಭಿವೃದ್ಧಿಯ ಅಜೆಂಡಾ ಇರಿಸಿಕೊಂಡಿದೆ. ಈಗಾಗಲೇ ದ ಕ ಜಿಲ್ಲೆಯಲ್ಲಿ ಕೋಮುದ್ವೇಷದ ಕಾರಣದಿಂದ ಜಿಲ್ಲೆಯ ವ್ಯಾಪಾರ ವಹಿವಾಟುಗಳು, ಆರ್ಥಿಕತೆಯ ಮೇಲೆ ಪರಿಣಾಮ ಬಿದ್ದಿದೆ, ಈ ಹಂತದಲ್ಲಿ ಎಎಪಿ ತನ್ನ ಕಾರ್ಯಕ್ಷೇತ್ರವನ್ನು ದ ಕ ಜಿಲ್ಲೆಯಲ್ಲೂ ವಿಸ್ತರಿಸಿಕೊಳ್ಳುತ್ತಿದೆ. ಈಗಾಗಲೇ ಸದಸ್ಯತ್ವ ಅಭಿಯಾನದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಪಕ್ಷದ ಮೂಲಗಳು ಹೇಳಿದೆ. ಮಂಗಳೂರು, ಪುತ್ತೂರು, ವಿಟ್ಲ , ಸುಳ್ಯದಲ್ಲಿ ಸಾಕಷ್ಟು ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ಉತ್ತರ ಕ್ಷೇತ್ರದಲ್ಲೂ ಎಎಪಿ ಕೆಲಸ ಆರಂಭವಾಗಿದೆ ಎನ್ನುತ್ತದೆ ಪಕ್ಷದ ಮೂಲಗಳು.
ಸಂತೋಷ್ ಕಾಮತ್, ಎಎಪಿ ದ ಕ ಜಿಲ್ಲಾಧ್ಯಕ್ಷ
ಇದೀಗ ದಕ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಚುನಾವಣೆಗೆ ಸ್ಫರ್ಧೆ ಮಾಡಲು ಎಎಪಿ ಸಿದ್ಧತೆ ನಡೆಸುತ್ತಿದೆ. ಅದರಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಎಎಪಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಸ್ಫರ್ಧೆಗೆ ಸಜ್ಜಾಗುತ್ತಿದ್ದಾರೆ. ಕಾಲೇಜು ದಿನಗಳಲ್ಲಿಯೇ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಸಂತೋಷ್ ಕಾಮತ್ ಅವರು ಎಬಿವಿಪಿ ಸಹಿತ ವಿವಿಧ ಸಂಘಟನೆಯಲ್ಲಿ ಕೆಲಸ ಮಾಡಿದ್ದರು. ಉದ್ಯಮಿಯೂ ಆಗಿರುವ ಸಂತೋಷ್ ಕಾಮತ್ ಅವರು ಕಳೆದ ಬಾರಿ ಲಾಕ್ಡೌನ್ ಸಮಯದಲ್ಲಿ ವರ್ತಕರ ಪರವಾಗಿ ಧ್ವನಿ ಎತ್ತಿದ್ದರು. ಸಾಮಾಜಿಕ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದು ಅಭಿವೃದ್ಧಿ ಪರವಾಗಿ ತನ್ನದೇ ಆದ ಯೋಜನೆಗಳನ್ನು ಹೊಂದಿದ್ದಾರೆ.
ದ ಕ ಜಿಲ್ಲೆಯಲ್ಲಿ ಕೋಮುದ್ವೇಷಗಳು ಕಡಿಮೆಯಾಗದೇ ಇದ್ದರೆ ಅಭಿವೃದ್ಧಿಯೂ ಹಿನ್ನಡೆಯಾಗಲಿದೆ. ಇಲ್ಲಿ ಎಲ್ಲಾ ಸಮುದಾಯಗಳೂ ಒಂದಾಗಿ ಈ ಸಮಾಜದಲ್ಲಿ ಸಾಗಲೇಬೇಕಾದ ಅನಿವಾರ್ಯತೆ ಇದೆ. ಆದರೆ ಕೋಮು ದ್ವೇಷಗಳ ಕಾರಣದಿಂದ, ಸಮುದಾಯಗಳ ನಡುವಿನ ಗುದ್ದಾಟಗಳ ಕಾರಣಗಳಿಂದ ಅಭಿವೃದ್ಧಿಯ ಮೇಲೂ ಪರೋಕ್ಷ ಹೊಡೆತ ಬೀಳುತ್ತಿದೆ. ಹೀಗಾಗಿ ಆಮ್ ಆದ್ಮಿ ಪಕ್ಷ ದ ಕ ಜಿಲ್ಲೆಯಲ್ಲಿ ಈಗ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಹೇಳುತ್ತಾರೆ ಎಎಪಿ ಜಿಲ್ಲಾ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ. ಯಾವುದೇ ಕೋಮು ದ್ವೇಷಗಳು ನಡೆದಾಗಲೂ ಸರ್ಕಾರವು ಧರ್ಮಾತೀತವಾಗಿ, ಪಕ್ಷಾತೀತವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳುತ್ತಾರೆ. ಈಚೆಗೆ ಎಎಪಿ ಪಕ್ಷವು ಆಂತರಿಕ ಸರ್ವೆ ಮಾಡಿದ ಸಂದರ್ಭವೂ ದ ಕ ಜಿಲ್ಲೆಯಲ್ಲಿನ ಅನೇಕ ವಿದ್ಯಾವಂತ ಜನರು, ಯುವಕರು, ವರ್ತಕರು, ಉದ್ಯಮಿಗಳು ಕೋಮುಗಲಭೆ, ದ್ವೇಷಗಳ ಕಾರಣದಿಂದ ಅಸಮಾಧಾನಗೊಂಡಿರುವುದು ತಿಳಿದಿದೆ. ಪರ್ಯಾಯ ರಾಜಕೀಯ ಶಕ್ತಿಯ ಅಗತ್ಯವನ್ನೂ ಅವರೆಲ್ಲಾ ಅಭಿಪ್ರಾಯದಲ್ಲಿ ವ್ಯಕ್ತಪಡಿಸಿದ್ದಾರೆ. ಕೋಮು ದ್ವೇಷಗಳ ಕಾರಣದಿಂದ ಅಭಿವೃದ್ಧಿ ಕುಂಠಿತ, ಭಯ ರಹಿತ ಓಡಾಟವೂ , ಯೋಜನಾ ಬದ್ಧವಾಗಿ ಉದ್ದಿಮೆಗಳ ಕಾರ್ಯವೂ ನಡೆಯದೇ ಇರುವುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ವೇಣುಗೋಪಾಲ ಪುಚ್ಚಪ್ಪಾಡಿ ತಿಳಿಸಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…