ದ ಕ ಜಿಲ್ಲಾ ಪ್ರವಾಸ ಆರಂಭಿಸಿದ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷರಾದ ಸಂತೋಷ್ ಕಾಮತ್ | ಎ.29 ರಂದು ಪುತ್ತೂರು-ಕಡಬ-ಸುಳ್ಯ ಭೇಟಿ |

ಸಂತೋಷ್‌ ಕಾಮತ್
Advertisement

ಆಮ್‌ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಸಂತೋಷ್‌ ಕಾಮತ್‌ ಅವರು ಜಿಲ್ಲಾ ಪ್ರವಾಸ ಆರಂಭಿಸಿದ್ದು ಎ.29  ರಂದು  ಪುತ್ತೂರು, ಕಡಬ ಮತ್ತು ಸುಳ್ಯಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಎಎಪಿ ದಕ ಜಿಲ್ಲೆ ಹಾಗೂ ಉಡುಪಿ ವೀಕ್ಷಕ ಅಶೋಕ್‌ ಎಡಮಲೆ ತಿಳಿಸಿದ್ದಾರೆ.

Advertisement

ಪಕ್ಷ ಸಂಘಟನೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಮತ್ತು ಜನಸಾಮಾನ್ಯರಿಂದ ಅಭಿಪ್ರಾಯ ಸಂಗ್ರಹ ಹಾಗೂ ಪಕ್ಷದ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಹೀಗಾಗಿ ಪುತ್ತೂರು, ಸುಳ್ಯ, ಕಡಬ, ಪಂಜ, ಸುಬ್ರಹ್ಮಣ್ಯ, ಗುತ್ತಿಗಾರು ಪ್ರದೇಶದ ಪಕ್ಷದ ಅಭಿಮಾನಿಗಳನ್ನು ಹಾಗೂ ಹಿರಿಯರನ್ನು, ಪಕ್ಷದ  ಕಾರ್ಯಕರ್ತರನ್ನು ಹಾಗೂ ಗ್ರಾಮೀಣ ಭಾಗಗಳಲ್ಲಿನ  ಜನಸಾಮಾನ್ಯರನ್ನು ಜಿಲ್ಲಾಧ್ಯಕ್ಷರನ್ನು ಭೇಟಿಯಾಗಲಿದ್ದಾರೆ ಎಂದು ಅಶೋಕ್‌ ಎಡಮಲೆ ತಿಳಿಸಿದ್ದಾರೆ.

Advertisement
Advertisement
Advertisement

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿನ‌ ಪಕ್ಷದ ಸದಸ್ಯರು ಆಸಕ್ತರು , ಪುತ್ತೂರು ಪ್ರೆಸ್ ಕ್ಲಬ್ ಬಳಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಸಂತೋಷ್ ಕಾಮತ್ ತಂಡವನ್ನು ಎ.29 ರಂದು  ಬೆಳಗ್ಗೆ 10.15 ರ ವೇಳೆಯಲ್ಲಿ ಭೇಟಿಯಾಗಬಹುದಾಗಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿನ‌ ಪಕ್ಷದ ಸದಸ್ಯರು ಆಸಕ್ತರು , ಜಿಲ್ಲಾ ಅಧ್ಯಕ್ಷರ  ತಂಡವನ್ನು ಎ.29  ಸಂಜೆ 5:30 ರ ವೇಳೆಯಲ್ಲಿ ಹಳೆಗೇಟು ಬಳಿಯಲ್ಲಿನ ಸಂತೃಪ್ತಿ ಹೋಟೇಲ್ ಬಳಿ ಭೇಟಿಯಾಗಬಹುದು  ಎಂದು ಅಶೋಕ್‌ ಎಡಮಲೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ಅಶೋಕ್‌ ಎಡಮಲೆ ಅವರನ್ನು 8861546080 ಸಂಪರ್ಕಿಸಬಹುದಾಗಿದೆ ಎಂದು ಹೇಳಿದ್ದಾರೆ.

 

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ದ ಕ ಜಿಲ್ಲಾ ಪ್ರವಾಸ ಆರಂಭಿಸಿದ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷರಾದ ಸಂತೋಷ್ ಕಾಮತ್ | ಎ.29 ರಂದು ಪುತ್ತೂರು-ಕಡಬ-ಸುಳ್ಯ ಭೇಟಿ |"

Leave a comment

Your email address will not be published.


*